ಹಳ್ಳಿಮನೆಗಳಲ್ಲಿ ಹಾಲಿನ ತಾಜಾತನವನ್ನು ಹೀಗೆ ಕಾಪಾಡಿಕೊಳ್ಳಲಾಗುತ್ತದೆ

Milk : ‘ಇಂದಿಗೂ ನನ್ನ ಹಳ್ಳಿಯ ಮನೆಯಲ್ಲಿ ಹಾಲನ್ನು ತಾಜಾತನದಿಂದ ಇಟ್ಟುಕೊಳ್ಳುವ ಈ ಹಳೆಯ ವಿಧಾನವನ್ನೇ ಅನುಸರಿಸಲಾಗುತ್ತದೆ’ ಎಂದಿದ್ದಾರೆ ಐಎಫ್ಎಸ್​ ಅಧಿಕಾರಿ ಪ್ರವೀಣ ಕಸ್ವಾನ್​

ಹಳ್ಳಿಮನೆಗಳಲ್ಲಿ ಹಾಲಿನ ತಾಜಾತನವನ್ನು ಹೀಗೆ ಕಾಪಾಡಿಕೊಳ್ಳಲಾಗುತ್ತದೆ
how milk is kept fresh in village households
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 06, 2022 | 3:02 PM

Trending : ಆಧುನಿಕ ತಂತ್ರಜ್ಞಾನದ ಸಹಾಯದಿಂದ ಆಹಾರ ಪದಾರ್ಥಗಳನ್ನು ಸಂರಕ್ಷಿಸುವ ವಿಧಾನಗಳಿಗೆ ನಾವೆಲ್ಲ ಬಹಳ ಸುಲಭವಾಗಿ ಮೊರೆ ಹೋಗಿದ್ದೇವೆ. ಆದರೆ ಹಳ್ಳಿಗಳಲ್ಲಿ ಇಂದಿಗೂ ನೈಸರ್ಗಿಕ ಸಂಪನ್ಮೂಲಗಳ ಸಹಾಯದಿಂದ ಆಹಾರ ಪದಾರ್ಥಗಳನ್ನು ತಾಜಾ ಉಳಿಸಿಕೊಳ್ಳುವ ಉಪಾಯಗಳನ್ನೇ ಪಾಲಿಸುತ್ತಿದ್ದಾರೆ. ಇದೀಗ ಟ್ವೀಟರ್​ನಲ್ಲಿ ವೈರಲ್ ಆಗಿರುವ ಈ ಪೋಸ್ಟ್ ಹಂಚಿಕೊಂಡವರು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್. ಹಳ್ಳಿಯ ಮನೆಗಳಲ್ಲಿ ಇಡೀ ದಿನ ಹಾಲನ್ನು ತಾಜಾ ಇರುವಂತೆ ಮಾಡಲು ಏನು ಉಪಾಯ ಕಂಡುಕೊಳ್ಳುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಿ.

ನನ್ನ ಮನೆಯಲ್ಲಿರುವ ಈ ಒಲೆಗಳ ಸರಳ ಪರಿಕಲ್ಪನೆಯನ್ನು ಗಮನಿಸಿ. ಸುಮಾರು 20-25 ಲೀಟರ್ ಹಾಲು ತುಂಬಿದ ಪಾತ್ರೆಗಳನ್ನು ಇಲ್ಲಿ ಬೆಳಗ್ಗೆಯೇ ಇಡಲಾಗುತ್ತದೆ. ದಿನವಿಡೀ ಕಡಿಮೆ ಶಾಖದಲ್ಲಿ ಹಾಲು ಕಾಯುತ್ತಲೇ ಇರುತ್ತದೆ. ಇದು ಇಂದಿಗೂ ಮುಂದುವರಿದುಕೊಂಡುಬಂದಿದೆ.’ ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟ್​ ಹಂಚಿಕೊಂಡಿದ್ದಾರೆ ಕಸ್ವಾನ್.

ಇವರ ಇನ್ನೊಂದು ಪೋಸ್ಟ್​ನೊಳಗೆ, ಪಂಜರದಂಥ ಸಾಧನದೊಳಗೆ ಕಾಯ್ದ ಹಾಲಿನ ಪಾತ್ರೆಯನ್ನು ಇಟ್ಟಿರುವುದನ್ನು ನೋಡಬಹುದಾಗಿದೆ. ‘ಗೃಹ ತಂತ್ರಜ್ಞಾನ ಬಹಳ ಸರಳವಾಗಿದೆ. ರಾತ್ರಿ ಕರೆಂಟ್ ಇಲ್ಲದಿದ್ದರೂ ಹಾಲು ಚೆನ್ನಾಗಿರಬೇಕು. ಅದಕ್ಕೆ ಹಾಲಿನ ದೊಡ್ಡ ಪಾತ್ರೆಯನ್ನು ಈ ಪಂಜರದಲ್ಲಿ ಇಡಲಾಗುತ್ತದೆ. ಇಂದಿಗೂ ನನ್ನ ತಾಯಿ ಇದೇ ರೀತಿ ಹಾಲನ್ನು ಸಂರಕ್ಷಿಸುತ್ತಿರುವುದು’ ಎಂಬ ಒಕ್ಕಣೆಯನ್ನು ಈ ಪೋಸ್ಟ್​ಗೆ ಬರೆದಿದ್ದಾರೆ.

ಅನೇಕರು ಅನೇಕ ರೀತಿಯಲ್ಲಿ ಪ್ರಶ್ನಿಸಿ, ಪ್ರತಿಕ್ರಿಯಿಸಿದ್ದಾರೆ. ಈ ವಿಧಾನ ಬಹಳ ಚೆನ್ನಾಗಿದೆ. ನನ್ನ ಮಕ್ಕಳನ್ನು ರಜೆಗೆ ಅಜ್ಜಿಯ ಮನೆಗೆ ಕಳಿಸಿ ಇಂಥ ಸಹಜ ಸರಳ ವಿಧಾನಗಳನ್ನು ಗಮನಿಸುವಂತೆ ಹೇಳುತ್ತೇನೆ ಎಂದಿದ್ದಾರೆ ಒಬ್ಬ ಟ್ವಿಟರ್ ಖಾತೆದಾರರು. ಅರೆ ಹಾಲು ಒಡೆಯುವುದಿಲ್ಲವಾ? ಎಂದಿದ್ದಾರೆ ಮತ್ತೊಬ್ಬರು. ನಮ್ಮ ಮನೆಯಲ್ಲಿಯೂ ಇದೇ ವಿಧಾನವನ್ನು ಅನುಸರಿಸುತ್ತೇವೆ ಎಂದಿದ್ದಾರೆ ಮತ್ತೊಬ್ಬರು.

ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:01 pm, Thu, 6 October 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ