ಹೈದರಾಬಾದಿನ ಸ್ಮಶಾನದಲ್ಲಿ ಆರು ಅಡಿ ಉದ್ದದ ಹೆಬ್ಬಾವು ಪತ್ತೆ, ವಿಡಿಯೋ ವೈರಲ್

Python : ಒಂದಲ್ಲ ಎರಡಲ್ಲ ಬರೋಬ್ಬರಿ 6 ಅಡಿ. ಯಾರಿಗೆ ತಾನೆ ಭಯ ಆಗದು? ಸ್ಮಶಾನದ ಸುತ್ತಮುತ್ತ ಇರುವ ಮನೆಗಳಿಂದ ಹುಣಸೆಹಣ್ಣು ಕೀಳಲು ಬರುವ ಮಕ್ಕಳನ್ನು ಕಾಪಾಡು ದೇವರೇ ಎಂದು ನೆಟ್ಟಿಗರು ಪ್ರಾರ್ಥಿಸುತ್ತಿದ್ದಾರೆ.

ಹೈದರಾಬಾದಿನ ಸ್ಮಶಾನದಲ್ಲಿ ಆರು ಅಡಿ ಉದ್ದದ ಹೆಬ್ಬಾವು ಪತ್ತೆ, ವಿಡಿಯೋ ವೈರಲ್
ಹೆಬ್ಬಾವು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Oct 06, 2022 | 2:39 PM

Viral Video :  ಹಾವು ಎಂದ ತಕ್ಷಣ ಎಂಥವರಿಗೂ ಒಂದು ಕ್ಷಣ ಭಯ ಉಂಟಾಗುತ್ತದೆ. ಅದು ಚಿಕ್ಕದಿರಲಿ ದೊಡ್ಡದೇ ಇರಲಿ. ಅದು ಅಷ್ಟೊಂದು ವಿಷಕಾರಿ. ಒಮ್ಮೆ ಕಚ್ಚಿದರೆ ಜೀವವನ್ನೇ ತೆಗೆಯಬಲ್ಲುದು ಎಂದು ಗೊತ್ತಿದ್ದೇ ಎಲ್ಲರಿಗೂ ಅಷ್ಟು ಭಯ. ಇತ್ತೀಚೆಗೆ ಹೈದರಾಬಾದಿನ ಫಲಕ್ನುಮಾದ ಸ್ಮಶಾನದಲ್ಲಿ ಆರು ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಅಷ್ಟು ದೈತ್ಯ ಹಾವು ನೋಡುಗರಲ್ಲಿ ಎಂಥ ಭಯ ಹುಟ್ಟುಹಾಕಿರಬೇಡ! ಆ ವಿಡಿಯೋ ಇದೀಗ ವೈರಲ್ ಆಗಿದೆ. ಇಲ್ಲಿಯ ಸ್ಥಳೀಯರು ಖ್ವಾದ್ರಿ ಚಮನ್ ಸ್ಮಶಾನದಲ್ಲಿ ಹರಿದು ಹೋಗುತ್ತಿರುವ ಹಾವಿನ ವಿಡಿಯೋ ಅನ್ನು ಚಿತ್ರೀಕರಿಸಿದ್ದಾರೆ. ಈ ಹಾವು ಕಾಣಿಸಿಕೊಂಡಾಗ ಮಧ್ಯರಾತ್ರಿ.

ಶುಕ್ರವಾರ ಮಧ್ಯರಾತ್ರಿ ಈ ಹಾವು ಸ್ಮಶಾನದಲ್ಲಿ ಕಾಣಿಸಿಕೊಂಡಿದೆ. ಸ್ಮಶಾನದ ಸುತ್ತಮುತ್ತ ಹುಣಸೆಗಿಡಗಳಿದ್ದು, ಸ್ಥಳೀಯ ವಸತಿಗೃಹಗಳಲ್ಲಿ ವಾಸಿಸುತ್ತಿರುವ ಮಕ್ಕಳು ಹುಣಸೆಹಣ್ಣು ಕೀಳಲು ಹೋಗುವ ಪರಿಪಾಠವಿದೆ. ಹಾಗಾಗಿ ಇದು ಅಪಾಯಕಾರಿ ಎಂದರಿತ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ತಿಳಿಸಿದ್ದಾರೆ. ಹೇಗಾದರೂ ಈ ಹೆಬ್ಬಾವನ್ನು ಪತ್ತೆ ಹಚ್ಚಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡುವಂತೆ ವಿನಂತಿಸಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರು ಭಯಬಿದ್ದು, ಸುತ್ತಮುತ್ತಲಿನ ನಿವಾಸಿಗಳ ಸುರಕ್ಷತೆಗೆ ಪ್ರಾರ್ಥಿಸುತ್ತಿದ್ದಾರೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 12:01 pm, Thu, 6 October 22

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್