ತಲೆಕೆಳಗೆ ಮಾಡಿ ಕತ್ತರಿಗೈಯಲ್ಲಿ ಪಿಯಾನೋ ನುಡಿಸುವ ಈ ಪ್ರತಿಭಾನ್ವಿತೆ

Girl Plays Piano : ಪ್ರ್ಯಾಕ್ಟೀಸ್ ಮಾಡುವಾಗ ಬಹಳ ಬೇಸರವಾಗುತ್ತಿತ್ತು. ಹಾಗಾಗಿ ಈ ಉಪಾಯ ಕಂಡುಕೊಂಡೆ ಎಂದಿದ್ದಾಳೆ ಚೀನಾದ ಈ ಯುವಕಲಾವಿದೆ. ನೆಟ್ಟಿಗರಂತೂ ಫಿದಾ!

ತಲೆಕೆಳಗೆ ಮಾಡಿ ಕತ್ತರಿಗೈಯಲ್ಲಿ ಪಿಯಾನೋ ನುಡಿಸುವ ಈ ಪ್ರತಿಭಾನ್ವಿತೆ
Chinese Girl Plays Piano Lying Upside Down
Follow us
TV9 Web
| Updated By: ಶ್ರೀದೇವಿ ಕಳಸದ

Updated on: Oct 06, 2022 | 4:03 PM

Viral Video : ಯಾವ ಕಲೆಯೂ ಸರಾಗವಾಗಿ ಬಾರದು. ಸಾಕಷ್ಟು ಪರಿಶ್ರಮ ತಾಳ್ಮೆ ನಿತ್ಯ ಅಭ್ಯಾಸ ಬೇಕೇಬೇಕು. ಚೀನಾದಲ್ಲಿ ಈ ಹುಡುಗಿ ಎಷ್ಟೊಂದು ನಿರಾಯಾಸವಾಗಿ ತಲೆಕೆಳಗೆ ಮಾಡಿಕೊಂಡು ಕತ್ತರಿಗೈಯಲ್ಲಿ ಪಿಯಾನೋ ನುಡಿಸುತ್ತಿದ್ದಾಳೆ ನೋಡಿ ಮತ್ತು ಕೇಳಿ. ನೆಟ್ಟಿಗರಂತೂ ದಂಗು ಬಡಿದು ನೋಡುತ್ತಿದ್ದಾರೆ ಈ ಅದ್ಭುತವಾದ ವಿಡಿಯೋ ಅನ್ನು. ಇವಳ ಅಸಾಧಾರಣ ಪ್ರತಿಭೆ ಮತ್ತು ಕೌಶಲಕ್ಕೆ ಕ್ಯಾ ಬಾತ್ ಹೈ ಎನ್ನುತ್ತಿದ್ದಾರೆ. ಈಕೆಯ ಹೆಸರು ಶೆನ್​. ಹೀಗೇ ಒಂದು ದಿನ ಪಿಯಾನೋ ಅಭ್ಯಾಸ ಮಾಡುವಾಗ ಬೇಸರ ಬರುತ್ತಿತ್ತು. ಅದನ್ನು ಒಂದು ಮೋಜಿನಂತೆ ಪರಿವರ್ತಿಸಿಕೊಳ್ಳಲು ಈ ಹಾದಿ ಕಂಡುಕೊಂಡೆ ಎಂದು ನೌ ದಿಸ್ ನ್ಯೂಸ್​ಗೆ ತಿಳಿಸಿದ್ದಾಳೆ ಈ ಹುಡುಗಿ.

ಈ ವಿಡಿಯೋದಲ್ಲಿ ನುಡಿಸಿದ ಹಾಡು ‘ಡಾಲ್ ಅಂಡ್ ಬೇರ್ ಡ್ಯಾನ್ಸಿಂಗ್’. ಈ ವಿಡಿಯೋ ಈತನಕ ಸುಮಾರು 30,000 ವೀಕ್ಷಕರನ್ನು ತಲುಪಿದೆ. 27 ಕ್ಕೂ ಹೆಚ್ಚು ರೀಟ್ವೀಟ್​ಗೆ ಒಳಗಾಗಿದೆ. ‘ಬಡ್ಡಿಂಗ್ ರಾಕ್‌ಸ್ಟಾರ್’ ಎಂದು ನೆಟ್ಟಿಗರೊಬ್ಬರು ಕರೆದಿದ್ದಾರೆ. ಅದ್ಭುತ ಮೆದುಳು ಈಕೆಯದು ಎಂದಿದ್ದಾರೆ ಮತ್ತೊಬ್ಬರು.

ಕಲೆ ಎನ್ನುವುದು ಸ್ವಂತ ಆಸಕ್ತಿಯಿಂದ ಹುಟ್ಟುವಂಥದ್ದು. ಯಾರ ಒತ್ತಾಯಕ್ಕೂ ಈ ಸೃಜನಶೀಲ ಕಲೆಗಳು ಒಲಿಯಲಾರವು. ಎದ್ದರೂ ಬಿದ್ದರೂ ಬೇಸರವಾದರೂ ಖುಷಿಯಾದರೂ ಕಲೆಯೇ ಅಂತಿಮ ಎಂದು ಅದರೊಂದಿಗೆ ಒಂದಾದಾಗ ಮಾತ್ರ ಸಾಧನೆ ಸಾಧ್ಯ.

ಈಗ ಈ ಕಲಾವಿದೆಯನ್ನೇ ಗಮನಿಸಿ, ತನಗೆ ಪ್ರ್ಯಾಕ್ಟೀಸ್ ಮಾಡುವುದು ಬೇಸರವೆಂದು ಹೀಗೊಂದು ಉಪಾಯ ಕಂಡುಕೊಂಡು ವಿಡಿಯೋ ಮಾಡಿ ಹಂಚಿಕೊಂಡು ಅಷ್ಟೇ ಚೈತನ್ಯ ಕಂಡುಕೊಂಡಳು. ನಮ್ಮ ಖುಷಿಯ ಮೂಲ ನಮ್ಮಲ್ಲೇ ಇರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಮಾದರಿ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!