Trending : ಹಾವುಗಳಿಗೆ ಕಾಲುಗಳಿದ್ದರೆ ಹೇಗೆ ನಡೆಯುತ್ತಿದ್ದವು? ವಿಡಿಯೋ ನೋಡಿ
Snake Legs 2.0 : ಈ ಎಂಜಿನಿಯರ್ ಕೃತಕ ಹಾವಿಗೆ ಸೃಷ್ಟಿಸಿದ ರೋಬೋಟಿಕ್ ಕಾಲುಗಳು 2.6 ಮಿಲಿಯನ್ ನೆಟ್ಟಿಗರ ಹುಬ್ಬೇರಿಸಿವೆ.
Snake : ಇಲ್ಲೊಬ್ಬ ಎಂಜಿನಿಯರ್ ಕೃತಕ ಹಾವಿಗೆ ರೋಬೋಟಿಕ್ ಕಾಲುಗಳನ್ನು ಜೋಡಿಸಿದ ವಿಡಿಯೋ ಯೂಟ್ಯೂಬ್ನಲ್ಲಿ ಸಾಕಷ್ಟು ಜನರ ಮೆಚ್ಚುಗೆ ಗಳಿಸಿದೆ. ಇದನ್ನು ನೋಡಿದ ನೆಟ್ಟಿಗರಿಗೆ ಈ ಎಂಜಿನಿಯರ್ನ ವೈಜ್ಞಾನಿಕ ಪ್ರಯೋಗದ ಬಗ್ಗೆ ಅಚ್ಚರಿ ಉಂಟಾಗಿದೆ. ಅಲೆನ್ ಪ್ಯಾನ್ ಎನ್ನುವ ಈ ಎಂಜಿನಿಯರ್ ಹಾವಿಗೆ ರೋಬೋಟಿಕ್ ಕಾಲುಗಳನ್ನು ಜೋಡಿಸಿದ್ದು ಹೇಗೆ ಎಂದು ತಿಳಿದುಕೊಳ್ಳುವ ಆಸಕ್ತಿ ನಿಮ್ಮಲ್ಲಿ ಈಗಾಗಲೇ ಮೂಡಿರಬಹುದು. ಹಾವುಗಳಿಗೆ ಕಾಲುಗಳಿದ್ದವೆ? ಎನ್ನುವ ಜಿಜ್ಞಾಸೆಗೂ ನೀವು ಬೀಳಬಹುದು. ಈ ವಿಷಯವನ್ನು ವಿವರಿಸುವ ಕ್ಲಿಪ್ನೊಂದಿಗೆ ಈ ವಿಡಿಯೋ ಶುರುವಾಗುತ್ತದೆ. ನ್ಯಾಷನಲ್ ಜಿಯಾಗ್ರಫಿಕ್ ವರದಿಯ ಪ್ರಕಾರ, ಅಂಗಗಳ ಬೆಳವಣಿಗೆಯನ್ನು ನಿರ್ಧರಿಸುವ ವಂಶವಾಹಿ ಸರಿಸೃಪಗಳಲ್ಲಿ ಅಸ್ತಿತ್ವದಲ್ಲಿದೆ.
ಹಾವಿನ ಬಗ್ಗೆಯಷ್ಟೇ ಪ್ಯಾನ್ ಇಲ್ಲಿ ಮಾತನಾಡುವುದಿಲ್ಲ, ಇತರೇ ಜಲಚರ ಪ್ರಾಣಿಗಳ ಬಗ್ಗೆಯೂ ವಿವರಿಸುತ್ತಾರೆ. ಆದರೆ ಈ ರೋಬೋಟಿಕ್ ವಿನ್ಯಾಸ ರೂಪಿಸಲು ಹಾವು ಪ್ರೇರೇಪಣೆ ಎನ್ನುತ್ತಾರೆ. ಈ ರೋಬೋಟಿಕ್ ವಿನ್ಯಾಸಕ್ಕೆ ‘ಸ್ನೇಕ್ ಲೆಗ್ಸ್ 2.0’ ಎಂದು ಹೆಸರಿಟ್ಟಿದ್ದಾರೆ. ಈ ವಿಷಯವಾಗಿಯೇ ಸಂಶೋಧನೆಯಲ್ಲಿ ತೊಡಗಿರುವ ಅವರು ಸರಿಸೃಪಗಳು ಹೇಗೆ ನಡೆಯುತ್ತವೆ ಎಂಬುದನ್ನು ನೋಡಲು ಸಾಕುಪ್ರಾಣಿಗಳ ಅಂಗಡಿಗೆ ಆಗಾಗ ತೆರಳುತ್ತಿರುತ್ತಾರೆ. ನಂತರ ಆ ದೃಶ್ಯವನ್ನು ಆಧರಿಸಿ ವಿನ್ಯಾಸವನ್ನು ರೂಪಿಸುತ್ತಾರೆ. ಈಗ ಈ ಹಾವಿನ ಕ್ಲಿಪ್ 2.6 ಮಿಲಿಯನ್ ವೀಕ್ಷಣೆ ಹೊಂದಿದೆ.
ಮತ್ತಷ್ಟು ಇಂಥ ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ