AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ‘ಪ್ರಾಣಿಗಳು ಯಾವಾಗಿನಿಂದ ಟೀಶರ್ಟ್​ ತೊಡಲು ಪ್ರಾರಂಭಿಸಿವೆ?’ ನೆಟ್ಟಿಗರ ಆಕ್ರೋಶ

Leopard : ಚಿರತೆ ಕಾಡುಪ್ರಾಣಿ ಸರಿ. ಆದರೆ ಈ ವ್ಯಕ್ತಿ ಅದರ ಬಾಲ ಮತ್ತು ಹಿಂಗಾಲುಗಳನ್ನು ಹಿಡಿದು ಎಳೆಯುತ್ತಲೇ ಇದ್ಧಾನೆ. ಯಾರಿಗೂ ಈ ಕೃತ್ಯ ಹೀನ, ಆಘಾತಕರ ಅನ್ನಿಸದೇ ಇರದು.

Viral Video: ‘ಪ್ರಾಣಿಗಳು ಯಾವಾಗಿನಿಂದ ಟೀಶರ್ಟ್​ ತೊಡಲು ಪ್ರಾರಂಭಿಸಿವೆ?’ ನೆಟ್ಟಿಗರ ಆಕ್ರೋಶ
ಚಿರತೆಯ ಬಾಲವನ್ನು ಹಿಡಿದೆಳೆಯುತ್ತಿರುವುದು
Follow us
TV9 Web
| Updated By: ಶ್ರೀದೇವಿ ಕಳಸದ

Updated on:Aug 18, 2022 | 4:59 PM

Leopard : ಬಹಳ ಆಘಾತಕಾರಿ ವಿಡಿಯೋ ಇದು. ಈ ವ್ಯಕ್ತಿ ಈ ಚಿರತೆಯ ಬಾಲ ಹಿಡಿದೆಳೆಯುತ್ತಲೇ ಇದ್ದಾನೆ. ಇದನ್ನು ಅವನ ಸುತ್ತಮುತ್ತಲಿನವರು ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದಾರೆ. ಐಎಫ್​ಎಸ್ ಅಧಿಕಾರಿ ಪರ್ವೀನ್ ಕಸ್ವಾನ್​ ಟ್ವಿಟರ್​ನಲ್ಲಿ ಹಂಚಿಕೊಂಡ 20 ಸೆಕೆಂಡುಗಳ ಈ ವಿಡಿಯೋ ಹಿಂಸಾತ್ಮಕವಾಗಿದೆ. ಚಿರತೆಯ ಹಿಂಗಾಲುಗಳನ್ನು ಮತ್ತು ಬಾಲವನ್ನು ಹಿಡಿದು ಎಳೆಯುತ್ತಿರುವ ಈ ದೃಶ್ಯವನ್ನು ಅರಗಿಸಿಕೊಳ್ಳುವುದು ಕಷ್ಟವೇ. ಕೊನೆಗೆ ಈ ಚಿರತೆ ಸಾವನ್ನಪ್ಪಿದೆ ಎಂದು ವಿಡಿಯೋದ ಮೇಲಿರುವ ಒಕ್ಕಣೆ ಹೇಳುತ್ತದೆ. ಈ ಕೃತ್ಯವನ್ನು ಕಸ್ವಾನ್​ ಖಂಡಿಸಿದ್ದು, ‘ವನ್ಯಜೀವಿಗಳನ್ನು ನಿಭಾಯಿಸುವ ರೀತಿ ಇದಲ್ಲ. ಯಾವತ್ತೂ ಇವುಗಳನ್ನು ಹೀಗೆ ನಡೆಸಿಕೊಳ್ಳಬಾರದು. ಅವೂ ನಮ್ಮಂತೆ ಜೀವಿಗಳು. ಈ ವಿಡಿಯೋ ಚಿತ್ರೀಕರಿಸಿದ ಸ್ಥಳವನ್ನು ಕಂಡು ಹಿಡಿಯಲಾಗಿಲ್ಲ’ ಎಂದು ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ವ್ಯಕ್ತಿಯ ವರ್ತನೆಯನ್ನು ಕಂಡು ನೆಟ್ಟಿಗರು ದಿಗ್ಭ್ರಮೆಗೆ ಒಳಗಾಗಿದ್ದಾರೆ. ‘ಪ್ರಾಣಿಗಳು ಟೀ ಶರ್ಟ್​ ತೊಡಲು ಆರಂಭಿಸಿವೆ’ ಎಂದು ಬಾಲ ಹಿಡಿದೆಳೆಯುತ್ತಿರುವ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಒಬ್ಬರು.  ಇನ್ನೊಬ್ಬರು, ‘ಬಹುಶಃ ಚಿರತೆಗೆ ವಯಸ್ಸಾಗಿದೆ ಅಥವಾ ಗಾಯಗೊಂಡಿದೆ ಎನ್ನಿಸುತ್ತದೆ’ ಎಂದಿದ್ದಾರೆ. ಇನ್ನೂ ಹಲವರು, ‘ಪ್ರಾಣಿಗಳೊಂದಿಗೆ ಹೀಗೆಲ್ಲ ವರ್ತಿಸಬಾರದು’ ಎಂದು ವಿನಂತಿಸಿಕೊಂಡಿದ್ದಾರೆ. ಹಾಗೆಯೇ ಮತ್ತೂ ಕೆಲವರು, ‘ಈ ವಿಡಿಯೋದಲ್ಲಿರುವ ವ್ಯಕ್ತಿಗೆ ಶಿಕ್ಷೆಯಾಗಬೇಕು’ ಎಂದಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 3:42 pm, Thu, 18 August 22

ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಲಿಫ್ಟ್​ನಲ್ಲಿದ್ದ9 ಜನರನ್ನ ಗೋಡೆ ಕೊರೆದು ರಕ್ಷಿಸಿದ ರೋಚಕ ವಿಡಿಯೋ!
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ಪುರುಷರು ವಾಹನ ಓಡಿಸಲು ಪರದಾಡಿದ ರಸ್ತೇಲಿ ಸಲೀಸಾಗಿ ಸ್ಕೂಟರ್ ಓಡಿಸಿದ ಯುವತಿ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ರಾಕೇಶ್ ಪೂಜಾರಿಗೆ ಆರೋಗ್ಯ ಸಮಸ್ಯೆ ಇತ್ತ: ಗೆಳೆಯ ಕೊಟ್ಟ ಉತ್ತರ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮಳೆಗಾಲ ಸಮೀಪದಲ್ಲಿದೆ, ನಗರದಲ್ಲಿ ಮರ ಗಣತಿ ಶುರುಮಾಡಲು ಇದು ಸಕಾಲ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಮನೆಯೊಳಗೆ ನುಗ್ಗಿ ಕೊಲ್ಲುತ್ತೇವೆ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ