AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವೃದ್ಧ, ಎಕ್ಸ್-​ರೇ ನೋಡಿ ಬೆಚ್ಚಿಬಿದ್ದ ವೈದ್ಯರು!

ಇತ್ತೀಚೆಗೆ ನೋವು ಉಲ್ಬಣಗೊಂಡಿದ್ದರಿಂದ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗ್ರಾಮಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಲೋಟವನ್ನು ಹೊರತೆಗೆದಿದ್ದಾರೆ.

ತೀವ್ರ ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾದ ವೃದ್ಧ, ಎಕ್ಸ್-​ರೇ ನೋಡಿ ಬೆಚ್ಚಿಬಿದ್ದ ವೈದ್ಯರು!
ಎಕ್ಸ್​ ರೇಯಲ್ಲಿ ಹೊಟ್ಟೆಯೊಳಗೆ ಲೋಟ ಪತ್ತೆಯಾಗಿರುವುದು.
TV9 Web
| Edited By: |

Updated on: Oct 05, 2022 | 9:01 PM

Share

ಮಧ್ಯಪ್ರದೇಶದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವೃದ್ಧನನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಅಲ್ಲಿನ ವೈದ್ಯರು ಆತನಿಗೆ ಕೆಲವು ಪರೀಕ್ಷೆಗಳನ್ನು ಮಾಡಿದರು. ವರದಿಗಳನ್ನು ಪರಿಶೀಲಿಸಿದ ವೈದ್ಯರು ಬೆಚ್ಚಿಬಿದಿದ್ದಾರೆ. ವೃದ್ಧನ ಹೊಟ್ಟೆಯಲ್ಲಿ ಲೋಟ ಇರುವುದು ಎಕ್ಸರೆಯಲ್ಲಿ ಪತ್ತೆಯಾಗಿದೆ. ಹಾಗಾದರೆ ಈ ಲೋಟ ಮೃದ್ಧನ ಹೊಟ್ಟೆಯೊಳಗೆ ಹೋಗಿದ್ದು ಹೇಗೆ ಎಂಬ ಅಚ್ಚರಿ ನಿಮ್ಮನ್ನು ಕಾಡುತ್ತಿರಬೇಕು ಅಲ್ವಾ ಹಾಗಾದರೆ ಮುಂದೆ ಓದಿ. ವರದಿಗಳ ಪ್ರಕಾರ ರಾಜ್‌ಗಢ್ ಜಿಲ್ಲೆಯ ಅಮಾವತ್​ನಲ್ಲಿ ಈ ಘಟನೆ ನಡೆದಿದೆ. ವೃದ್ಧ ರಾಮದಾಸ್​ ನನ್ನು ಕೆಲವರು ನಿರ್ದಯವಾಗಿ ಥಳಿಸಿದ್ದಾರೆ. ಆ ನಂತರ ಅವರನ್ನು ಗಾಜಿನ ಮೇಲೆ ಕೂರಿಸಲಾಗಿದ್ದು, ಆಗ ಲೋಟ ಹೊಟ್ಟೆಯೊಳಗೆ ಸೇರಿದೆ ಎನಲ್ಲಾಗುತ್ತಿದೆ. ಈ ಅಮಾನವೀಯ ಘಟನೆ ನಡೆದು ನಾಲ್ಕು ತಿಂಗಳು ಕಳೆದ ನಂತರ ಬೆಳಕಿಗೆ ಬಂದಿದೆ.

ರಾಮದಾಸ್ ನಾಚಿಕೆಯಿಂದ ಯಾರಿಗೂ ಸತ್ಯ ಹೇಳಿರಲಿಲ್ಲ. ಅಲ್ಲಿಯವರೆಗೆ ಅವರು ನೋವಿನಿಂದ ಬಳಲಿದ್ದಾರೆ. ಆದರೆ ಇತ್ತೀಚೆಗೆ ನೋವು ಉಲ್ಬಣಗೊಂಡಿದ್ದರಿಂದ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಗ್ರಾಮಸ್ಥರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಲ್ಲಿದ್ದ ಲೋಟವನ್ನು ಹೊರತೆಗೆದಿದ್ದಾರೆ. ವೃದ್ಧನ ಆರೋಗ್ಯ ಹದಗೆಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೃದ್ಧೆನ ಹೇಳಿಕೆಯನ್ನು ಪಡೆದ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

5 ವರ್ಷಗಳ ಬಳಿಕ ಈತನ ನೋಸ್​ರಿಂಗ್ ಶ್ವಾಸಕೋಶದಲ್ಲಿ ಪತ್ತೆ 

ಎಲ್ಲಿ ಬೇಕೋ ಅಲ್ಲೆಲ್ಲ ಲೋಹದ ರಿಂಗಗಳನ್ನು ಚುಚ್ಚಿಸಿಕೊಂಡು ಖುಷಿಪಡುವುದು. ಇಂಥ ಖಯಾಲಿ ಅನೇಕರಲ್ಲಿದೆ. ಈ ಅನೇಕರ ಪೈಕಿ ಜೋಯ್​ ಲೈಕಿನ್ಸ್ ಕೂಡ ಒಬ್ಬ. ಹೀಗೆ ಒಂದು ದಿನ ಬೆಳಗ್ಗೆ ಎದ್ದು ನೋಡುತ್ತಾನೆ ಆತನ ನೋಸ್​ರಿಂಗ್ ಮಾಯ! ಇಡೀ ದಿನ ಆತ ಹುಡುಕಲಾರದ ಜಾಗವಿಲ್ಲ. ಹುಡುಕಿ ಹುಡುಕಿ ಸುಸ್ತಾಗಿ ಸುಮ್ಮನಾಗಿ ಆ ವಿಷಯವನ್ನೇ ಮರೆತುಬಿಟ್ಟ. ಸುಮಾರು ಐದು ವರ್ಷಗಳ ನಂತರ ಒಂದು ದಿನ ಮಲಗಿಕೊಂಡಿದ್ದಾಗ ಇದ್ದಕ್ಕಿದ್ದಂತೆ ಈತನಿಗೆ ಕೆಮ್ಮು ಶುರುವಾಯಿತು. ಅದು ವಿಪರೀತಕ್ಕೇರಿದಾಗ ಆಸ್ಪತ್ರೆಗೆ ದಾಖಲಾದ. ವೈದ್ಯರು ಆತನನ್ನು ಎಕ್ಸೆರೆಗೆ ಒಳಪಡಿಸಿದರು. ಈ ಎಕ್ಸರೇಯಲ್ಲಿ ಇವನ ಕಳೆದ ನೋಸ್​ರಿಂಗ್ ಪತ್ತೆಯಾಯಿತು!

35 ವರ್ಷದ ಜೋಯ್​ ತನ್ನ ದೇಹದ ಮೇಲೆ ಈತನಕ 12 ಜಾಗಗಳಲ್ಲಿ ಚಿಕ್ಕಪುಟ್ಟ ಸ್ಟಡ್ಸ್​, ರಿಂಗ್​ ಧರಿಸಲು ಚುಚ್ಚಿಸಿಕೊಂಡಿದ್ದಾನೆ. ಐದು ವರ್ಷಗಳ ಹಿಂದೆ ಕಳೆದುಹೋದ ನೋಸ್​ರಿಂಗ್ ಹೋದರೆ ಹೋಯಿತು ಎಂದು ಮತ್ತೊಂದು ರಿಂಗ್ ಖರೀದಿಸಿಯೂ ಬಿಟ್ಟ. ಆದರೆ ಆ ಕೆಮ್ಮು ಮಾತ್ರ ಅವನಿಗೆ ಶಾಶ್ವತವಾಗಿ ಪಾಠ ಕಲಿಸಿತು. ಕಳೆದು ಹೋದ ನೋಸ್​ರಿಂಗ್​ ಐದು ವರ್ಷಗಳಿಂದಲೂ ಅವನ ಶ್ವಾಸಕೋಶದಲ್ಲಿ ಅಡಗಿಕೊಂಡಿತ್ತು.

ಆ ದಿನ ಹಾಸಿಗೆಯಲ್ಲಿ ಹುಡುಕಾಡಿದೆ, ಸುತ್ತಮುತ್ತಲೂ ನೋಡಿದೆ. ಏನೆಲ್ಲವನ್ನೂ ಹುಡುಕಿ ನೋಡಿದೆ. ಕೊನೆಗೆ ನಾನದನ್ನು ನುಂಗಿದ್ದೇನಾ? ಎಂಬ ಅನುಮಾನ ಬಂದರೂ ಅಷ್ಟು ಯೋಚಿಸಲಿಲ್ಲ. ಈಗ ಐದುವರ್ಷಗಳ ನಂತರ ರಾತ್ರಿ ಮಲಗಿದಾಗ ಕೆಮ್ಮು ಶುರುವಾಯಿತು. ಇದ್ದಕ್ಕಿದ್ದಂತೆ ಬೆನ್ನು ನೋವು ಕೂಡ. ಉಸಿರಾಟಕ್ಕೆ ತೊಂದರೆಯಾಗುತ್ತಿದೆ ಎನ್ನಿಸಿ ಆಸ್ಪತ್ರೆಗೆ ದಾಖಲಾದೆ’ ಎಂದು ತನ್ನ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾನೆ ಈ ವ್ಯಕ್ತಿ.ಆಸ್ಪತ್ರೆಗೆ ದಾಖಲಿಸಿದಾಗ ನ್ಯುಮೋನಿಯಾದ ಲಕ್ಷಣಗಳು ಎಂದು ವೈದ್ಯರು ಹೇಳಿದರು. ಆದರೆ ಎಕ್ಸರೇಯಲ್ಲಿ ಬಹಿರಂಗಗೊಂಡ ಸತ್ಯ ಬೇರೆಯಾಗಿತ್ತು. 0.6 ಇಂಚಿನ ನೋಸ್​ರಿಂಗ್​ ಶ್ವಾಸಕೋಶದಲ್ಲಿ ಅಡಗಿ ಕುಳಿತಿತ್ತು! ಜೋಯ್ ಆಘಾತಕ್ಕೊಳಗಾದಾಗ, ಸದ್ಯ ಈ ನೋಸ್​ರಿಂಗ್ ಶ್ವಾಸಕೋಶವನ್ನು ತೂತು ಮಾಡಿಲ್ಲವಲ್ಲ ಎಂದು ವೈದ್ಯರು ಸಮಾಧಾನ ಹೇಳಿದರು.

‘ನೆನಪಿಗಾಗಿ ಈ ಎಲ್ಲ ದಾಖಲೆಗಳನ್ನು ಇರಿಸಿಕೊಂಡಿದ್ದೇನೆ. ಆದರೆ ಇನ್ನೆಂದೂ ನೋಸ್​ರಿಂಗ್​ ಧರಿಸುವುದಿಲ್ಲ ಎಂದು ನಿರ್ಧರಿಸಿದ್ದೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಪೋಸ್ಟ್ ಮಾಡಿದ್ದಾನೆ ಜೋಯ್. ಮನುಷ್ಯನಿಗೆ ಹುಚ್ಚುಗಳು ಬೇಕು. ಆದರೆ ಹೀಗೆ ಅಪಾಯಕ್ಕೆ ತಂದುಕೊಳ್ಳುವಂತಹ ಹುಚ್ಚುಗಳು.

ಮತ್ತಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್