Cough Syrup: ಭಾರತದಲ್ಲಿ ತಯಾರಾದ ಶೀತ-ಕೆಮ್ಮಿನ ಔಷಧಿ ಸೇವಿಸಿ ಆಫ್ರಿಕಾದಲ್ಲಿ 66 ಮಕ್ಕಳ ಸಾವು

Children Death: ಮಕ್ಕಳ ಔಷಧದಲ್ಲಿರುವ ವಿಷಕಾರಿ ರಾಸಾಯನಿಕದ ಪರಿಣಾಮದಿಂದ ಮೂತ್ರ ವಿಸರ್ಜನೆಗೆ ತೊಂದರೆ, ತಲೆನೋವು, ಮಾನಸಿಕ ಸ್ಥಿತಿ ಏರುಪೇರಾಗುವುದು ಮತ್ತು ಕಿಡ್ನಿ ವೈಫಲ್ಯ ಕಾಣಿಸಿಕೊಳ್ಳುತ್ತದೆ.

Cough Syrup: ಭಾರತದಲ್ಲಿ ತಯಾರಾದ ಶೀತ-ಕೆಮ್ಮಿನ ಔಷಧಿ ಸೇವಿಸಿ ಆಫ್ರಿಕಾದಲ್ಲಿ 66 ಮಕ್ಕಳ ಸಾವು
ಮಕ್ಕಳ ಸಾವಿಗೆ ಕಾರಣವಾದ ಔಷಧಿಗಳು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 06, 2022 | 8:33 AM

ನ್ಯೂಯಾರ್ಕ್: ಶೀತದಿಂದ ಬರುವ ಕೆಮ್ಮಿನ ನಿಯಂತ್ರಣಕ್ಕೆ ಬಳಸುವ (cough and cold syrups) ಭಾರತದಲ್ಲಿ ತಯಾರಾದ ಔಷಧಗಳನ್ನು ಸೇವಿಸಿ ಆಫ್ರಿಕಾದ ಗಾಂಬಿಯಾ (The Gambia) ದೇಶದಲ್ಲಿ 66ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು (World Health Organisation – WHO) ಗಂಭೀರವಾಗಿ ಪರಿಗಣಿಸಿದೆ. ಈ ಔಷಧಗಳ ಬಗ್ಗೆ ಎಚ್ಚರದಿಂದ ಇರುವಂತೆ ಸಂದೇಶವನ್ನು ರವಾನಿಸಿದೆ. ಈ ಮಕ್ಕಳ ಸಾವಿಗೆ ಕಿಡ್ನಿ ವೈಫಲ್ಯವೇ ಮುಖ್ಯ ಎಂದು ಗುರುತಿಸಿರುವ ಆರೋಗ್ಯ ಸಂಸ್ಥೆಯು ಈ ಔಷಧಗಳ ಬಳಕೆಯ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಸೂಚಿಸಿದೆ. ಹರಿಯಾಣ ಮೂಲದ ‘ಮೈಡನ್ ಫಾರ್ಮಾಸ್ಯುಟಿಕಲ್ಸ್​ ಲಿಮಿಟೆಡ್’ (Maiden Pharmaceuticals Limited) ತಯಾರಿಸಿರುವ ಪ್ರೊಮೆಥಜೈನ್ ಓರಲ್ ಸಲ್ಯೂಷನ್, ಕೊಫೆಕ್ಸ್‌ಮಲಿನ್ ಬೇಬಿ ಕಫ್ ಸಿರಪ್, ಮ್ಯಾಕಫ್ ಬೇಬಿ ಕಫ್ ಸಿರಪ್ ಮತ್ತು ಮಾಗ್ರಿಪ್ ಅಂಡ್ ಕೋಲ್ಡ್ ಸಿರಪ್ ಔಷಧಗಳು ಈ ಅನಾಹುತಕ್ಕೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಟೆಡ್ರೊಸ್ ಅಧನೊಮ್ ಘೆಬ್ರಿಯೆಸಸ್ ಎಚ್ಚರಿಸಿದ್ದಾರೆ.

ಭಾರತದ ಆರೋಗ್ಯ ಇಲಾಖೆ ಹಾಗೂ ಔಷಧ ನಿಯಂತ್ರಣ ಸಂಸ್ಥೆಯ ಅಧಿಕಾರಿಗಳನ್ನು ವಿಶ್ವ ಆರೋಗ್ಯ ಸಂಸ್ಥೆಯು ಸಂಪರ್ಕಿಸಿದೆ. ತನಿಖೆಗೆ ಸಹಕರಿಸುವಂತೆ ಭಾರತ ಸರ್ಕಾರವನ್ನೂ ಕೋರಲಾಗಿದೆ. ಪುಟ್ಟ ಮಕ್ಕಳ ಸಾವು ಹೃದಯವನ್ನು ಕಲಕುತ್ತದೆ ಎಂದು ಅವರು ಹೇಳಿದ್ದಾರೆ.

ಈ ಔಷಧ ಸೇವನೆಯಿಂದ ತೊಂದರೆಯಾಗಿರುವ ಕುರಿತು ಈವರೆಗೆ ಕೇವಲ ಗಾಂಬಿಯಾ ದೇಶದಿಂದ ಮಾತ್ರವೇ ವರದಿ ಲಭ್ಯವಾಗಿದೆ. ಈ ಔಷಧಗಳು ಇತರ ದೇಶಗಳಲ್ಲಿಯೂ ಮಾರಾಟವಾಗುತ್ತಿದ್ದು, ಅಲ್ಲಿ ಆಗಿರುವ ಅನಾಹುತಗಳ ಬಗ್ಗೆ ಇನ್ನಷ್ಟೇ ಮಾಹಿತಿ ಸಂಗ್ರಹಿಸಬೇಕಿದೆ. ಔಷಧ ಬಳಕೆಯಿಂದ ತೊಂದರೆ ಆಗಿರುವ ಕುರಿತು ವರದಿ ಮಾಡುವಂತೆ ಈ ಔಷಧಗಳನ್ನು ಬಳಸುವ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯು ಸೂಚಿಸಿದೆ.

ಈ ನಾಲ್ಕೂ ಔಷಧಗಳನ್ನು ಪ್ರಯೋಗಾಲಯದಲ್ಲಿ ವಿಶ್ಲೇಷಿಸಿದಾಗ ಅವುಗಳಲ್ಲಿ ಡೈತಿಲೆನ್ ಗ್ಲೈಕೊಲ್ (diethylene glycol) ಮತ್ತು ಎಥಿಲೆನ್ ಗ್ಲೈಕೊಲ್ (ethylene glycol) ಹಾನಿಕಾರಕಗಳು ಹೆಚ್ಚಿನ ಮಟ್ಟದಲ್ಲಿರುವ ಪತ್ತೆಯಾಗಿತ್ತು. ಈ ಔಷಧಗಳ ಸುರಕ್ಷೆ ಮತ್ತು ಗುಣಮಟ್ಟ ಖಾತ್ರೆಯ ಬಗ್ಗೆ ಔಷಧ ತಯಾರಿಕೆ ಕಂಪನಿಯು ವಿಶ್ವ ಆರೋಗ್ಯ ಸಂಸ್ಥೆಯು ಯಾವುದೇ ಭರವಸೆ ನೀಡಲು ಸಮ್ಮತಿಸಿಲ್ಲ. ಮನುಷ್ಯರ ದೇಹಗಳಿಗೆ ಈ ಎರಡೂ ರಾಸಾಯನಿಕಗಳು ವಿಷಕಾರಿಯಾಗಿದ್ದು, ಇವುಗಳನ್ನು ಸೇವಿಸಿದರೆ ಜೀವಹಾನಿಯ ಅಪಾಯ ಇರುತ್ತದೆ. ಈ ವಿಷದ ಪರಿಣಾಮದಿಂದ ಹೊಟ್ಟೆನೋವು, ವಾಂತಿ, ಬೇಧಿ, ಮೂತ್ರ ವಿಸರ್ಜನೆಗೆ ತೊಂದರೆ, ತಲೆನೋವು, ಮಾನಸಿಕ ಸ್ಥಿತಿ ಏರುಪೇರಾಗುವುದು ಮತ್ತು ಕಿಡ್ನಿ ವೈಫಲ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಹೆಚ್ಚಿನ ವೈದ್ಯಕೀಯ ನೆರವು ದೊರಕದಿದ್ದರೆ ಸಾವು ಸಂಭವಿಸುತ್ತದೆ.

ಭಾರತ ಸರ್ಕಾರದ ಗೃಹ ಇಲಾಖೆಯ ಮೂಲಗಳು ಸಹ ಸಾವನ್ನು ದೃಢಪಡಿಸಿವೆ. ‘ಈ ಕಂಪನಿಯು ಈ ನಾಲ್ಕೂ ಔಷಧಿಗಳನ್ನು ಗಾಂಬಿಯಾ ದೇಶಕ್ಕೆ ಮಾತ್ರವೇ ರಫ್ತು ಮಾಡಿದೆ. ಔಷಧಿಗಳನ್ನು ಆಮದು ಮಾಡಿಕೊಳ್ಳುವ ದೇಶಗಳು ಗುಣಮಟ್ಟ ಪರಿಶೀಲಿಸಿದ ನಂತರವೇ ಬಳಕೆಗೆ ಅವಕಾಶ ಕೊಡುವುದು ವಾಡಿಕೆ’ ಎಂದು ಗೃಹ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ಜಾಲತಾಣ ವರದಿ ಮಾಡಿದೆ.

ಎಲ್ಲ ದೇಶಗಳೂ ಈ ನಾಲ್ಕೂ ಔಷಧಗಳನ್ನು ಬಳಕೆಯಿಂದ ದೂರ ಇರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಸಿದೆ. ಗಾಂಬಿಯಾದ ವೈದ್ಯಕೀಯ ಅಧಿಕಾರಿಗಳು ಕಳೆದ ಜುಲೈ ತಿಂಗಳಿನಲ್ಲಿಯೇ ಈ ಔಷಧಗಳಿಂದ ಆಗಬಹುದಾದ ಅಪಾಯಗಳ ಬಗ್ಗೆ ಧ್ವನಿ ಎತ್ತಿದ್ದರು. ಆಗಸ್ಟ್​ ತಿಂಗಳಲ್ಲಿಯೂ 28 ಮಕ್ಕಳು ಈ ಔಷಧಿ ಸೇವನೆಯಿಂದ ಮೃತಪಟ್ಟಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಔಷಧಗಳನ್ನು ಶೀಘ್ರ ಹಿಂಪಡೆಯದಿದ್ದರೆ ಅಪಾಯ ಮತ್ತಷ್ಟು ಹೆಚ್ಚಬಹುದಾದ ಸಾಧ್ಯತೆಯಿದೆ ಎಂದು ಗಾಂಬಿಯಾದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಅಂತರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ