ದೇಶದ್ರೋಹ ಪ್ರಕರಣ; ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್​ಗೆ ಬಾಂಗ್ಲಾದೇಶ ಹೈಕೋರ್ಟ್ ಜಾಮೀನು

ಬಾಂಗ್ಲಾದೇಶ ಸಮ್ಮಿಲಿತ್ ಸನಾತನಿ ಜಾಗರಣ್ ಜೋಟೆ ವಕ್ತಾರ ಮತ್ತು ಮಾಜಿ ಇಸ್ಕಾನ್ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರನ್ನು ಕಳೆದ ವರ್ಷ ನವೆಂಬರ್ 25ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಚಿನ್ಮಯ್ ಕೃಷ್ಣ ದಾಸ್ ಹಿಂದೂ ಸಂಘಟನೆಯಾದ ಇಸ್ಕಾನ್ ಸಂಸ್ಥಾಪಕರಲ್ಲಿ ಒಬ್ಬರು. 5 ತಿಂಗಳ ಕಾಲ ಜೈಲಿನಲ್ಲಿದ್ದ ಅವರಿಗೆ ಇದೀಗ ಬಾಂಗ್ಲಾದೇಶ ಹೈಕೋರ್ಟ್ ಜಾಮೀನು ನೀಡಿದೆ.

ದೇಶದ್ರೋಹ ಪ್ರಕರಣ; ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್​ಗೆ ಬಾಂಗ್ಲಾದೇಶ ಹೈಕೋರ್ಟ್ ಜಾಮೀನು
Chinmoy Krishna Das

Updated on: Apr 30, 2025 | 9:52 PM

ಡಾಕಾ, ಏಪ್ರಿಲ್ 30: ಬಾಂಗ್ಲಾದೇಶ ಹೈಕೋರ್ಟ್ (Bangladesh High Court) ದೇಶದ್ರೋಹ ಪ್ರಕರಣದಲ್ಲಿ ಜೈಲಿನಲ್ಲಿದ್ದ ಹಿಂದೂ ಆಧ್ಯಾತ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಇಂದು ಜಾಮೀನು ನೀಡಿದೆ. ನವೆಂಬರ್ 25ರಂದು ಢಾಕಾದ ಹಜರತ್ ಶಹಜಲಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟ ಚಿನ್ಮಯ್ ಕೃಷ್ಣ ಪ್ರಭು ಅವರನ್ನು 5 ತಿಂಗಳ ನಂತರ ಜೈಲಿನಿಂದ ಬಿಡುಗಡೆ ಮಾಡಲಾಯಿತು.

ಚಿನ್ಮಯ್ ದಾಸ್ ಅವರ ಪ್ರತಿವಾದಿ ತಂಡವು ಚಿನ್ಮಯ್ ದಾಸ್ ಅವರು ತಮ್ಮ ತಾಯಿಯ ಮೇಲಿನ ಗೌರವಕ್ಕೆ ಹೋಲಿಸಬಹುದಾದ ಮಾತೃಭೂಮಿಯ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದಾರೆ. ಅವರು ದೇಶದ್ರೋಹಿ ಅಲ್ಲ ಎಂದು ವಾದಿಸಿದರೂ ನ್ಯಾಯಾಲಯವು ಜನವರಿಯಲ್ಲಿ ಜಾಮೀನು ಅರ್ಜಿಯನ್ನು ನಿರಾಕರಿಸಿತ್ತು. ಫೆಬ್ರವರಿಯಲ್ಲಿ, ಬಾಂಗ್ಲಾದೇಶ ಹೈಕೋರ್ಟ್ ಬಾಂಗ್ಲಾದೇಶ ಸರ್ಕಾರವನ್ನು ಅವರ ವಕೀಲರು ಚಿನ್ಮಯ್ ದಾಸ್ ಅವರಿಗೆ ಜಾಮೀನು ಏಕೆ ನೀಡಬಾರದು ಎಂಬುದನ್ನು ವಿವರಿಸುವಂತೆ ಕೇಳಿದ್ದರು.

ಇದನ್ನೂ ಓದಿ: ಬಾಂಗ್ಲಾದೇಶ: ಕೋರ್ಟ್​ಗೆ ಹಾಜರಾಗದ ಚಿನ್ಮಯ್ ದಾಸ್ ಪರ ವಕೀಲರು, ಜಾಮೀನು ಅರ್ಜಿ ವಿಚಾರಣೆ ಮುಂದಿನ ತಿಂಗಳಿಗೆ ಮುಂದೂಡಿಕೆ

ಇದನ್ನೂ ಓದಿ
ಬಸ್‌ ತಡೆದು ನಡು ರಸ್ತೆಯಲ್ಲಿ ಪಾನಮತ್ತ ಮಹಿಳೆಯ ಕಿರಿಕ್; ವಿಡಿಯೋ ವೈರಲ್‌
ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಮೊಬೈಲ್​ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವು
ಮದುವೆ ಮನೆಗಳಲ್ಲಿ ಇನ್ಮುಂದೆ ನೀರಿನ ಪ್ಲಾಸ್ಟಿಕ್ ಬಾಟಲಿ ಬಳಕೆ ಮಾಡುವಂತಿಲ್ಲ

ಢಾಕಾ ಟ್ರಿಬ್ಯೂನ್ ಪತ್ರಿಕೆಯ ಪ್ರಕಾರ, ಈ ಪ್ರಕರಣದಲ್ಲಿ ಹಿಂದೂ ನಾಯಕ ಚಿನ್ಮಯ್ ದಾಸ್ ಅವರನ್ನು ಪ್ರಮುಖ ಆರೋಪಿಯನ್ನಾಗಿ, 164 ಗುರುತಿಸಲಾದ ವ್ಯಕ್ತಿಗಳು ಮತ್ತು 400ರಿಂದ 500 ಗುರುತಿಸಲಾಗದ ಜನರನ್ನು ಹೆಸರಿಸಿದೆ. ಅವರು ಈಗಾಗಲೇ ದೇಶದ್ರೋಹದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ