ಕೆನಡಾ ಭಾರತ ವಿರೋಧಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ಕೆನಡಾದ ಎಡ್ಮಂಟನ್‌ನಲ್ಲಿರುವ ಹಿಂದೂ ದೇವಾಲಯವನ್ನು ಉಗ್ರರು ಪ್ರಧಾನಿ ನರೇಂದ್ರ ಮೋದಿಯನ್ನು ಗುರಿಯಾಗಿಸಿಕೊಂಡು ಭಾರತ ವಿರೋಧಿ ಗೋಚುಬರಹದೊಂದಿಗೆ ವಿರೂಪಗೊಳಿಸಿದ್ದಾರೆ.
ಇಂದು ಬೆಳಗ್ಗೆ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನವನ್ನು ಧ್ವಂಸಗೊಳಿಸಿರುವುದು ಕಂಡುಬಂದಿದೆ. ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್‌ನಲ್ಲಿ ಹಿಂದೂ ಅಮೆರಿಕನ್ ಫೌಂಡೇಶನ್‌ನವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆನಡಾದ ಹೌಸ್ ಆಫ್ ಕಾಮನ್ಸ್‌ನಲ್ಲಿರುವ ಕೆಲವೇ ಹಿಂದೂ ಸಂಸದರಲ್ಲಿ ಒಬ್ಬರಾದ ಆರ್ಯ ಅವರಿಗೆ ಬೆದರಿಕೆ ಹಾಕಲಾಗಿದೆ.
ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿ ಘಟನೆಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಸಂಸದ ಚಂದ್ರ ಆರ್ಯ ಹೇಳಿದ್ದಾರೆ.
ಮತ್ತಷ್ಟು ಓದಿ: Pakistan: ಹಿಂದೂ ದೇವಾಲಯದ ಮೇಲೆ ದಾಳಿ, ದೇವತೆಗಳ ವಿಗ್ರಹಗಳು ಧ್ವಂಸ!
ನಮ್ಮ ದೇಶದಲ್ಲಿ ಶಾಂತಿಪ್ರಿಯ ಹಿಂದೂ ಸಮುದಾಯದ ವಿರುದ್ಧ ದ್ವೇಷವನ್ನು ಪ್ರಚೋದಿಸುವ ಕೆಲಸಗಳು ಹಾಗೂ ಉಗ್ರಗಾಮಿ ಸಿದ್ಧಾಂತದ ವಿರುದ್ಧ ನಿರ್ಣಾಯಕವಾಗಿ ಕಾರ್ಯನಿರ್ವಹಿಸುವಂತೆ ನಾವು ಕೆನಡಾದ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಅದು ಹೇಳಿದೆ.
The Hindu temple BAPS Swaminarayan Mandir in Edmonton is vandalized again. During the last few years, Hindu temples in Greater Toronto Area, British Columbia and other places in Canada are being vandalized with hateful graffiti.
Gurpatwant Singh Pannun of Sikhs for Justice last… pic.twitter.com/G0a8ozrrHX— Chandra Arya (@AryaCanada) July 23, 2024
ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳು ದೇವಾಲಯವನ್ನು ಇಂತಹ ಗೀಚುಬರಹದಿಂದ ವಿರೂಪಗೊಳಿಸುತ್ತಿರುವುದು ಇದೇ ಮೊದಲಲ್ಲ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಸಾವಿನ ನಂತರ ಖಲಿಸ್ತಾನ್ ಬೆಂಬಲಿಗರು ಭಾರತ ವಿರೋಧಿ ಚಟುವಟಿಕೆಗಳನ್ನು ಹೆಚ್ಚಿಸಿದ್ದಾರೆ.
ಎಡ್ಮಂಟನ್ ನ ಬಿಎಪಿಎಸ್ ಮಂದಿರದಲ್ಲಿ ಹಿಂದೂಫೋಬಿಕ್ ಗೀಚುಬರಹ ಮತ್ತು ವಿಧ್ವಂಸಕ ಕೃತ್ಯವನ್ನು ವಿಎಚ್ ಪಿ ಕೆನಡಾ ಬಲವಾಗಿ ಖಂಡಿಸುತ್ತದೆ ಎಂದು ಸಂಸ್ಥೆ ಎಕ್ಸ್ ಪೋಸ್ಟ್ ನಲ್ಲಿ ಬರೆದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:22 am, Tue, 23 July 24