AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲಾ ಹ್ಯಾರಿಸ್ ಸ್ಪರ್ಧೆ ಇನ್ನೂ ಗ್ಯಾರಂಟಿ ಇಲ್ಲ; ಇಲ್ಲಿದೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ

Process of electing democratic candidate for US Presidential elections: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಧ್ಯಕ್ಷೀಯ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಘೋಷಿಸಿದ್ದು, ಕಮಲಾ ಹ್ಯಾರಿಸ್ ಹೆಸರನ್ನು ಶಿಫಾರಸು ಮಾಡಿದ್ದಾರೆ. ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಧ್ಯಕ್ಷೀಯ ಅಭ್ಯರ್ಥಿಯಾಗುವುದು ಇನ್ನೂ ಖಾತ್ರಿ ಇಲ್ಲ. ಡೆಮಾಕ್ರಾಟ್ ಪಕ್ಷದ ಡೆಲಿಗೇಟ್​ಗಳು ಸೇರಿ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ.

ಕಮಲಾ ಹ್ಯಾರಿಸ್ ಸ್ಪರ್ಧೆ ಇನ್ನೂ ಗ್ಯಾರಂಟಿ ಇಲ್ಲ; ಇಲ್ಲಿದೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ
ಕಮಲಾ ಹ್ಯಾರಿಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 22, 2024 | 11:58 AM

Share

ವಾಷಿಂಗ್ಟನ್, ಜುಲೈ 22: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅನಾರೋಗ್ಯ ಕಾರಣಕ್ಕೆ ಮುಂಬರುವ ಅಧ್ಯಕ್ಷೀಯ ಚುನಾವಣಾ ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಅಷ್ಟೇ ಅಲ್ಲ, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಹೆಸರನ್ನು ಅಭ್ಯರ್ಥಿ ಸ್ಥಾನಕ್ಕೆ ಶಿಫಾರಸು ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಸ್ಥಾನದಲ್ಲಿರುವಾಗ ರಾಜೀನಾಮೆ ನೀಡಿದರೆ ಅಥವಾ ಮೃತಪಟ್ಟರೆ ಉಪಾಧ್ಯಕ್ಷರಾಗಿರುವವರು ಅಧ್ಯಕ್ಷ ಸ್ಥಾನಕ್ಕೆ ಏರುತ್ತಾರೆ. ಆದರೆ, ಚುನಾವಣೆ ಇನ್ನೂ ನಡೆಯಬೇಕಿರುವುದರಿಂದ ಪಕ್ಷದ ಅಧಿಕೃತ ಅಭ್ಯರ್ಥಿ ಸ್ಪರ್ಧಾ ಕಣದಿಂದ ಹಿಂದಕ್ಕೆ ಸರಿದರೆ ಉಪಾಧ್ಯಕ್ಷೆ ಅಭ್ಯರ್ಥಿಯೇ ಆ ಸ್ಥಾನಕ್ಕೆ ಏರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡುತ್ತದೆ.

ಅಭ್ಯರ್ಥಿ ಆಯ್ಕೆ ಹೇಗೆ ನಡೆಯುತ್ತದೆ?

ಜೋ ಬೈಡನ್, ಕಮಲಾ ಹ್ಯಾರಿಸ್ ಡೆಮಾಕ್ರಾಟ್ ಪಕ್ಷದವರು. ಅಧ್ಯಕ್ಷೀಯ ಚುನಾವಣೆ ರೇಸ್​ನಿಂದ ಜೋ ಬೈಡನ್ ಹಿಂದಕ್ಕೆ ಸರಿದಿದ್ದಾರೆ. ಈಗ ಡೆಮಾಕ್ರಾಟ್ ಪಕ್ಷದ ರಾಷ್ಟ್ರೀಯ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಜೋ ಬೈಡನ್ ಮಾಡಿರುವ ಶಿಫಾರಸು ಕಮಲಾ ಹ್ಯಾರಿಸ್​ಗೆ ಒಂದು ಶಕ್ತಿಯಾಗುತ್ತದೆಯೇ ಹೊರತು ಅವರೇ ಅಭ್ಯರ್ಥಿ ಎನ್ನುವುದನ್ನು ಖಾತ್ರಿಪಡಿಸುವುದಿಲ್ಲ.

ಇದನ್ನೂ ಓದಿ: ಅಧ್ಯಕ್ಷೀಯ ಸ್ಪರ್ಧೆಯಿಂದ ಜೋ ಬೈಡನ್ ಹಿಂದಕ್ಕೆ; ಕಮಲಾ ಹ್ಯಾರಿಸ್ ಈಗ ಅಧಿಕೃತ ಸ್ಪರ್ಧಿ?

ಡೆಮಾಕ್ರಾಟ್​ನ ನ್ಯಾಷನಲ್ ಕನ್ವೆನ್ಷನ್, ಅಥವಾ ರಾಷ್ಟ್ರೀಯ ಸಭೆಯಲ್ಲಿ 3,900 ನಿಯೋಗಗಳಿವೆ. ತಮ್ಮ ರಾಜ್ಯಗಳ ಡೆಮಾಕ್ರಾಟ್ ಮತದಾರರನ್ನು ಪ್ರತಿನಿಧಿಸುವ ಈ ನಿಯೋಗಗಳು ಸೇರಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಶಾಲಾ ಬೋರ್ಡ್ ಸದಸ್ಯರು, ಕಾರ್ಮಿಕ ಕಾರ್ಯಕರ್ತರು, ವಕೀಲರು ಇತ್ಯಾದಿ ವಿವಿಧ ಸ್ತರದ ಜನರು ಇದರಲ್ಲಿ ಇರುತ್ತಾರೆ. ಡೆಮಾಕ್ರಾಟ್ ಪಕ್ಷಕ್ಕೆ ಸೇರಿದ ಗವರ್ನರ್​ಗಳು, ಸಂಸದರು, ಪಕ್ಷದ ಪದಾಧಿಕಾರಿಗಳೂ ಕೂಡ ನಿಯೋಗ ಸದಸ್ಯರಾಗಿರುತ್ತಾರೆ.

ಈ ಪ್ರತಿನಿಧಿಗಳಲ್ಲಿ ಹೆಚ್ಚಿನವರು ಜೋ ಬೈಡನ್​ಗೆ ಬೆಂಬಲ ನೀಡಿದ್ದರು. ಈಗ ಕಮಲಾ ಹ್ಯಾರಿಸ್​ಗೆ ಇವರು ಬೆಂಬಲ ಮುಂದುವರಿಸಬೇಕು ಎಂದೇನಿಲ್ಲ. ಯಾರಿಗೆ ಬೇಕಾದರೂ ಇವರು ಬೆಂಬಲಿಸಬಹುದು.

ಇದನ್ನೂ ಓದಿ: ಬಾಂಗ್ಲಾದೇಶ ಹಿಂಸಾಚಾರ: ಮೀಸಲಾತಿ ಕಡಿಮೆಗೊಳಿಸಿದ ಸುಪ್ರೀಂಕೋರ್ಟ್; ಪ್ರತಿಭಟನೆ ಬಿಟ್ಟು ತರಗತಿಗೆ ಮರಳುವಂತೆ ವಿದ್ಯಾರ್ಥಿಗಳಿಗೆ ಆದೇಶ

ಡೆಮಾಕ್ರಾಟ್ ಅಭ್ಯರ್ಥಿ ರೇಸ್​ನಲ್ಲಿ ಯಾರಿದ್ದಾರೆ…?

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾತ್ರವಲ್ಲ, ಡೆಮಾಕ್ರಾಟ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಲು ಹಲವರು ಸ್ಪರ್ಧಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾ ಗವರ್ನರ್ ಗ್ಯಾವಿನ್ ನ್ಯೂಸಮ್, ಮಿಶಿಗನ್ ಗವರ್ನರ್ ಗ್ರೆಚೆನ್ ವಿಟ್ಮರ್, ಇಲಿನಾಯ್ಸ್ ಗವರ್ನರ್ ಜೆ.ಬಿ. ಪ್ರಿಟ್ಜ್​ಕರ್, ಪೆನ್​ಸಿಲ್ವೇನಿಯಾ ಗವರ್ನರ್ ಜೋಶ್ ಶಪಿರೋ, ಅರಿಜೋನಾ ಸೆನೆಟರ್ ಮಾರ್ಕ್ ಕೆಲ್ಲಿ ಅವರು ಸಂಭಾವ್ಯ ಅಭ್ಯರ್ಥಿಗಳಾಗಿದ್ದಾರೆ.

ಇವರಲ್ಲಿ ಅಭ್ಯರ್ಥಿಯಾಗಿ ಆಯ್ಕೆಯಾದವರು ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರ ಐವರೊಂದಿಗೆ ಸ್ಪರ್ಧಿಸಬೇಕಾಗುತ್ತದೆ. ರಾಷ್ಟ್ರವ್ಯಾಪಿ ಸಾರ್ವತ್ರಿಕವಾಗಿ ಮತದಾನ ಆಗುತ್ತದೆ. ಅದರಲ್ಲಿ ಗೆದ್ದವರು ಅಮೆರಿಕದ ಅಧ್ಯಕ್ಷರಾಗುತ್ತಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್