ಹೇಡಿತನ; ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರಧಾನಿ ಮೋದಿ ಖಂಡನೆ
ಅಮೆರಿಕದ ನ್ಯೂ ಓರ್ಲಿಯನ್ಸ್ ನಗರದಲ್ಲಿ 15 ಮಂದಿಯನ್ನು ಬಲಿತೆಗೆದುಕೊಂಡ ಟ್ರಕ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಇದೊಂದು ಹೇಡಿತನದ ಕೃತ್ಯ ಎಂದಿರುವ ಪಿಎಂ ಮೋದಿ, ಮೃತರ ಕುಟುಂಬಸ್ಥರಿಗಾಗಿ ನಾವು ಪ್ರಾರ್ಥನೆ ಮಾಡುತ್ತೇವೆ ಎಂದಿದ್ದಾರೆ. ಈ ಬಗ್ಗೆ ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನವದೆಹಲಿ: ಅಮೆರಿಕದ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಹೇಡಿತನ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಈ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನ್ಯೂ ಓರ್ಲಿಯನ್ಸ್‌ನಲ್ಲಿ ಬುಧವಾರ ಜನರ ಗುಂಪಿನ ಮೇಲೆ ಟ್ರಕ್ ನುಗ್ಗಿಸಲಾಗಿತ್ತು. ಬಳಿಕ ಗುಂಡು ಹಾರಿಸಿ 15 ಜನರನ್ನು ಹತ್ಯೆ ಮಾಡಲಾಗಿತ್ತು. ಈ ದಾಳಿಯಲ್ಲಿ 30 ಜನರು ಗಾಯಗೊಂಡಿದ್ದರು.
ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಹೇಡಿತನದ ಭಯೋತ್ಪಾದಕ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ನಮ್ಮ ಪ್ರಾರ್ಥನೆಗಳು ಸಂತ್ರಸ್ತರು ಮತ್ತು ಅವರ ಕುಟುಂಬಗಳೊಂದಿಗೆ ಇವೆ. ಈ ದುರಂತದಿಂದ ಅವರು ಚೇತರಿಸಿಕೊಳ್ಳುವ ಶಕ್ತಿ ಪಡೆಯಲಿ ಎಂದು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
We strongly condemn the cowardly terrorist attack in New Orleans. Our thoughts and prayers are with the victims and their families. May they find strength and solace as they heal from this tragedy.
— Narendra Modi (@narendramodi) January 2, 2025
ಇದನ್ನೂ ಓದಿ: ನ್ಯೂ ಓರ್ಲಿಯನ್ಸ್‌ನಲ್ಲಿ ಭಯೋತ್ಪಾದಕ ದಾಳಿ; ಜನಸಂದಣಿಯ ಮೇಲೆ ವಾಹನ ನುಗ್ಗಿ 10 ಸಾವು, 35 ಜನರಿಗೆ ಗಾಯ
ಈಗಾಗಲೇ ಈ ಭಯೋತ್ಪಾದನಾ ದಾಳಿ ಪ್ರಕರಣದ ಶಂಕಿತ ಉಗ್ರನನ್ನು ಪತ್ತೆ ಮಾಡಲಾಗಿದೆ. ಈ ದಾಳಿಯ ಹಿಂದಿನ ಮಾಸ್ಟರ್ಮೈಂಡ್ 42 ವರ್ಷದ ಅಮೆರಿಕನ್ ಪ್ರಜೆಯಾದ ಶಂಸುದ್ದೀನ್ ಜಬ್ಬಾರ್ ಎಂದು ಗುರುತಿಸಲಾಗಿದೆ. ಆತ ಹೂಸ್ಟನ್‌ನಲ್ಲಿ ಕೆಲಸ ಮಾಡುವ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದಾನೆ. ಮಿಲಿಟರಿಯಲ್ಲಿ ಐಟಿ ತಜ್ಞನಾಗಿ ಸೇವೆ ಸಲ್ಲಿಸಿದ್ದ ಎಂದು ವರದಿಗಳು ತಿಳಿಸಿವೆ.
ಯುನೈಟೆಡ್ ಸ್ಟೇಟ್ಸ್‌ನ ನ್ಯೂ ಓರ್ಲಿಯನ್ಸ್‌ನಲ್ಲಿ ನಡೆದ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಹಾಗೂ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಬೌರ್ಬನ್ ಸ್ಟ್ರೀಟ್‌ನಲ್ಲಿ ವಾಹನವೊಂದು ಜನರ ಗುಂಪಿಗೆ ಡಿಕ್ಕಿ ಹೊಡೆಯಿತು. ಆ ವೇಳೆ ಚಾಲಕ ಪಿಕಪ್ ಟ್ರಕ್‌ನಿಂದ ಕೆಳಗಿಳಿದು ಗುಂಡು ಹಾರಿಸಲು ಪ್ರಾರಂಭಿಸಿದ. ಈ ಘಟನೆಯ ತನಿಖೆಯನ್ನು ಎಫ್‌ಬಿಐ ವಹಿಸಿಕೊಂಡಿದೆ. ದಾಳಿಯ ಸ್ಥಳದಿಂದ ಅಧಿಕಾರಿಗಳು ಲಾಂಗ್ ಗನ್ ಅನ್ನು ವಶಪಡಿಸಿಕೊಂಡಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ