ನಿಮಗೆ ಬಾಗಿಲು ತೆರೆದಿದೆ ಎಂದ ಲಾಲು ಯಾದವ್ಗೆ ನಿತೀಶ್ ಕುಮಾರ್ ಹೇಳಿದ್ದೇನು?
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ತಮ್ಮ ಪಕ್ಷದೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳುವ ಪ್ರಸ್ತಾಪವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಹಾರದಲ್ಲಿ ರಾಜಕೀಯ ಬಿಸಿ ಮತ್ತೊಮ್ಮೆ ಹೆಚ್ಚಾಗಿದೆ. ಆದರೆ, ಲಾಲು ಪ್ರಸಾದ್ ಅವರ ಆಹ್ವಾನಕ್ಕೆ ನಿತೀಶ್ ಕುಮಾರ್ ಏನು ಪ್ರತಿಕ್ರಿಯಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪಾಟ್ನಾ: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ತಮ್ಮ ಇಂಡಿಯಾ ಬಣದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು “ಬಾಗಿಲು ತೆರೆದಿದೆ” ಎಂದು ಹೇಳಿದ್ದರು. ಆದರೆ, ಪ್ರತಿಪಕ್ಷವಾದ ಇಂಡಿಯಾ ಬಣವನ್ನು ಮತ್ತೆ ಸೇರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್ ನೀವು ಏನು ಹೇಳುತ್ತಿದ್ದೀರಿ? ಎಂದು ನಗುತ್ತಾ ಆ ಪ್ರಶ್ನೆಯನ್ನು ಅಲ್ಲೇ ಮೊಟಕುಗೊಳಿಸಿದ್ದಾರೆ.
“ನಿತೀಶ್ ಕುಮಾರ್‌ಗಾಗಿ ಇಂಡಿಯಾ ಬಣದ ಬಾಗಿಲುಗಳು ತೆರೆದಿವೆ. ನಿತೀಶ್ ಕುಮಾರ್ ಅವರು ತಮ್ಮ ಗೇಟ್‌ಗಳನ್ನು ಸಹ ತೆರೆಯಬೇಕು. ಆಗ ಇಬ್ಬರ ಸಂಚಾರವೂ ಸುಗಮವಾಗಲಿದೆ” ಎಂದು ಲಾಲು ಯಾದವ್ ಹೇಳಿದ್ದರು. ಯಾದವ್ ಅವರ ಹೇಳಿಕೆಯು ಬಿಹಾರದ ರಾಜಕೀಯ ವಲಯಗಳಲ್ಲಿ “ಬಡಾ ಭಾಯಿ, ಚೋಟಾ ಭಾಯಿ” ಎಂದು ಕರೆಯಲ್ಪಡುವ ಇಬ್ಬರು ಹಿರಿಯ ನಾಯಕರ ನಡುವೆ ಮತ್ತೊಂದು ಮೈತ್ರಿಯ ಸಾಧ್ಯತೆಯ ಬಗ್ಗೆ ಬಿಹಾರದಲ್ಲಿ ಊಹಾಪೋಹಗಳಿಗೆ ಉತ್ತೇಜನ ನೀಡಿತ್ತು.
#WATCH | Patna: Bihar CM Nitish Kumar reacts on being asked about Lalu Prasad Yadav’s statement. pic.twitter.com/6Gxb9iOZgP
— ANI (@ANI) January 2, 2025
ಇದನ್ನೂ ಓದಿ: ನಾನು ಕರ್ನಾಟಕವನ್ನು ಕೇಂದ್ರದಲ್ಲಿ ಪ್ರತಿನಿಧಿಸುವ ಬಿಜೆಪಿ ನಾಯಕ: ಪ್ರಲ್ಹಾದ್ ಜೋಶಿ
ಕಳೆದ ವರ್ಷ ಇಂಡಿಯಾ ಬಣವನ್ನು ಅದರ ರಚನೆಯ ನೇತೃತ್ವದ ನಂತರ ತೊರೆದಿದ್ದ ನಿತೀಶ್ ಕುಮಾರ್ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ನೇತೃತ್ವದ ಎನ್‌ಡಿಎಗೆ ಸೇರ್ಪಡೆಗೊಂಡರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ