AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಯಕ್ರಮದಲ್ಲಿ ಪರಿಚಯವಾದ ಫೋಟೋಗ್ರಾಫರ್​ನನ್ನ​​ ನಂಬಿ ಮೋಸ ಹೋದ ಯುವತಿ: ವಿಡಿಯೋ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಿವಾಸಿಯಾಗಿರುವ ಯುವತಿಯನ್ನು ಓರ್ವ ಫೋಟೋಗ್ರಾಫರ್​​​ ಪ್ರೀತಿಸಿದ್ದಾನೆ. ಬಳಿಕ, ಮದುವೆಯಾಗುವುದಾಗಿ ನಂಬಿಸಿ, ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದೀಗ, ಮೈಸೂರಿನ ಬೇರೊಬ್ಬ ಯುವತಿಯ ಜೊತೆ ಮದುವೆಯಾಗಲು ಮುಂದಾಗಿದ್ದಾನೆ. ನೆಲಮಂಗಲ ಟೌನ್ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಕ್ರಮದಲ್ಲಿ ಪರಿಚಯವಾದ ಫೋಟೋಗ್ರಾಫರ್​ನನ್ನ​​ ನಂಬಿ ಮೋಸ ಹೋದ ಯುವತಿ: ವಿಡಿಯೋ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ
ಆರೋಪಿ ಮಧು, ಸಂತ್ರಸ್ತೆ
ಬಿ ಮೂರ್ತಿ, ನೆಲಮಂಗಲ
| Updated By: ವಿವೇಕ ಬಿರಾದಾರ|

Updated on:Jan 04, 2025 | 2:40 PM

Share

ನೆಲಮಂಗಲ, ಜನವರಿ 04: ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಫೋಟೋಗ್ರಾಫರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಫೋಟೋಗ್ರಾಫರ್​ ಮಧು (32) ಬಂಧಿತ ಆರೋಪಿ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲದಲ್ಲಿ (Nelamangala) ಘಟನೆ ನಡೆದಿದೆ.

ನೆಲಮಂಗಲ ನಿವಾಸಿಯಾಗಿರುವ ಸಂತ್ರಸ್ತೆಯ ಮನೆ ಕಾರ್ಯಕ್ರಮದ ಪೋಟೋ ತಗೆಯಲು ಮಧು ಹೋಗಿದ್ದನು. ಈ ವೇಳೆ, ಮಧು ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದಾನೆ. ಬಳಿಕ, ನಿಮ್ಮನ್ನು ಪ್ರೀತಿಸುತ್ತಿದ್ದೇನೆ, ಮದುವೆಯಾಗುತ್ತೇನೆ ಎಂದು ಸಂತ್ರಸ್ತೆಯ ಹಿಂದೆ ಬಿದ್ದಿದ್ದಾನೆ. ಆಗ, ಸಂತ್ರಸ್ತೆ ನಮ್ಮ ಮನೆಯಲ್ಲಿ ಬಂದು ಮಾತನಾಡಿ ಎಂದು ಹೇಳಿದ್ದಾರೆ.

ಆರೋಪಿ ಮಧು ಸಂತ್ರಸ್ತೆಯ ಮನೆಗೆ ಹೋಗಿ, ಅವರ ತಂದೆ-ತಾಯಿಯ ಹತ್ತಿರ “ನಿಮ್ಮ ಮಗಳನ್ನು ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ. ಸಂತ್ರಸ್ತೆಯ ತಂದೆ-ತಾಯಿ ಒಪ್ಪಿಕೊಂಡಿದ್ದಾರೆ. ಬಳಿಕ, ಸಂತ್ರಸ್ತೆ ಕೂಡ ಮದುವೆಯಾಗಲು ಒಪ್ಪಿಕೊಂಡಿದ್ದಾರೆ. ಸಂತ್ರಸ್ತೆ “ಮದುವೆ ಯಾವಾಗ ಆಗೋಣ” ಅಂತ ಮಧು ಅನ್ನು ಕೇಳಿದ್ದಾರೆ. ಆಗ, ಆರೋಪಿ ಮಧು “ನನ್ನ ತಾಯಿಯ ಅನಾರೋಗ್ಯ ಸರಿ ಹೋದ ಮೇಲೆ, ಅವರಿಗೆ ನಮ್ಮಿಬ್ಬರ ಪ್ರೀತಿ ವಿಚಾರ ತಿಳಿಸಿ ಮದುವೆಗೆ ಅನುಮತಿಯನ್ನು ಪಡೆದುಕೊಳ್ಳುತ್ತೇನೆ” ಎಂದು ಹೇಳಿದ್ದಾನೆ.

ಹೀಗೆ ಹೇಳುತ್ತಾ ಮಧು ಮದುವೆ ಮುಂದೂಡುತ್ತಾ ಬಂದಿದ್ದಾನೆ. ಈ ನಡುವೆ, ಒಂದು ದಿನ ಮಧು ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಂತ್ರಸ್ತೆಯ ಮನೆಗೆ ಹೋಗಿದ್ದಾನೆ. ಅಲ್ಲಿ, ಸಂತ್ರಸ್ತೆಯನ್ನು ಲೈಂಗಿಕ ಕ್ರಿಯೆಗೆ ಕರೆದಿದ್ದಾನೆ. ಆಗ, ಸಂತ್ರಸ್ತೆ ಬೇಡ ಎಂದು ಕೈ ಮುಗಿದು, ವಿರೋಧ ವ್ಯಕ್ತಪಡಿಸಿದರೂ ಸಹ ಆರೋಪಿ ಮಧು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಇದನ್ನೂ ಓದಿ: ಮದ್ವೆಯಾಗಿದ್ದ ಆಂಟಿ ಜತೆ ಲವ್ವಿಡವ್ವಿ: ಕರೆ ಸ್ವೀಕರಿಸಲಿಲ್ಲ ಎಂದು ಮನೆಗೆ ಹೋದ ಯುವಕ ಆಸ್ಪತ್ರೆ ಸೇರಿದ

ಇದಾದ ಕೆಲವು ದಿನಗಳ ನಂತರ ಮಧು, ಸಂತ್ರಸ್ತೆಗೆ ಕರೆ ಮಾಡಿ ನಮ್ಮ ಮನೆ ಹತ್ತಿರ ಬಾ ಪ್ರೀತಿ ವಿಚಾರವನ್ನು ನಮ್ಮ ತಂದೆ ತಾಯಿಗೆ ಹೇಳೋಣ ಎಂದು ಕರೆಸಿಕೊಂಡಿದ್ದಾನೆ. ಇದನ್ನು ನಂಬಿ ಸಂತ್ರಸ್ತೆ ಆರೋಪಿ ಮಧು ಮನೆ ಬಳಿ ಹೋಗಿದ್ದಾರೆ. ಈ ವೇಳೆ, ಮಧು ಮನೆಯಲ್ಲಿ ಯಾರು ಇರಲಿಲ್ಲ. ಆಗ, ಸಂತ್ರಸ್ತೆ, ಯಾಕೆ ಸುಳ್ಳು ಹೇಳಿದ್ದಿಯಾ ಎಂದು ಮಧುಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಮಧು ಏನೋ ಮಾತನಾಡಬೇಕು ಬಾ ಒಳಗೆ ಎಂದು ಮನೆಯೊಳಗೆ ಕರೆದುಕೊಂಡು ಹೋಗಿದ್ದಾನೆ.

ಅಲ್ಲಿ, ಸಂತ್ರಸ್ತೆಗೆ ತನ್ನ ಇನ್ನೊಂದು ಮೊಬೈಲ್​ನಲ್ಲಿ ಇದ್ದ ವಿಡಿಯೋವನ್ನು ತೋರಿಸಿ “ನೀನು ನನಗೆ ಕೇಳಿದಾಗಲೆಲ್ಲ ಸಹಕರಿಸಲಿಲ್ಲವೆಂದರೇ, ಈ ವಿಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ. ಹಾಗೂ ನಿಮ್ಮ ಸಂಬಂಧಿಕರಿಗೆಲ್ಲ ತೋರಿಸುತ್ತೇನೆ ಎಂದು ಮಧು ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಬಳಿಕ, ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ವಿಡಿಯೋ ಇಟ್ಟುಕೊಂಡು ಸಂತ್ರಸ್ತೆಯನ್ನು ದಾಬಸ್ ಪೇಟೆಯಲ್ಲಿರುವ ಲಾಡ್ಜ್ ಮತ್ತು ಹೆಸರಘಟ್ಟ ಬಳಿಯಿರುವ ರೂಂಗೆ ಕರೆದುಕೊಂಡು ಹೋಗಿ ಮಧು ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ಇದೀಗ, ಆರೋಪಿ ಮಧು ಸಂತ್ರಸ್ತೆಗೆ ಗೊತ್ತಿಲ್ಲದಂತೆ ಮೈಸೂರಿನ ಮತ್ತೊಂದು ಯುವತಿ ಜೊತೆ ಮದುವೆಯಾಗಲು ಮುಂದಾಗಿದ್ದನು. ಈ ವಿಚಾರ ತಿಳಿಯುತ್ತಿದ್ದಂತೆ ಸಂತ್ರಸ್ತೆ ಆರೋಪಿ ಮಧುನನ್ನು ಪ್ರಶ್ನಿಸಿದಾಗ “ನೀನು ಏನಾದರೂ ಮಾಡಿಕೊ ನಾನು ನಿನ್ನನ್ನು ಮದುವೆಯಾಗುವುದಿಲ್ಲ. ಒಂದು ವೇಳೆ ನೀನು ನನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲೆ ಮಾಡಿಸುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ.

ನಂತರ, ಸಂತ್ರಸ್ತೆ ಈ ವಿಚಾರವನ್ನು ಮಧು ಮನೆಯವರ ಬಳಿ ಹೇಳಿದ್ದಾರೆ. ಆಗ, ಮಧುನ ತಂದೆ-ತಾಯಿ ಹಾಗೂ ಆತನ ಚಿಕ್ಕಮ್ಮ, ತಮ್ಮ ರಾಘು ಹಾಗೂ ಅವನ ತಂಗಿ ಪೂರ್ಣಿಮಾ ಮತ್ತು ಅವನ ಸ್ಟುಡಿಯೋದಲ್ಲಿ ಕೆಲಸ ಮಾಡುವ ಓರ್ವ ಮಹಿಳೆ ಎಲ್ಲರೂ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೊಡೆದು “ಇನ್ನೊಮ್ಮೆ ನೀನು ನಮ್ಮ ಮನೆ ಹತ್ತಿರ ಬಂದರೆ ನಿನ್ನನ್ನು ಸಾಯಿಸಿ ಮನೆ ಅಂಗಳದಲ್ಲಿ ಹೂತು ಹಾಕುತ್ತೇವೆ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಮಧು ಮತ್ತು ಅವರ ಕುಟುಂಬದವರ ವಿರುದ್ಧ ಕಲಂ 64(2)(M),77,78,351(2),115(2),352,69 ಬಿಎನ್​ಎಸ್​ ರೀತ್ಯಾ ನೆಲಮಂಗಲ ಟೌನ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲು ಹಿನ್ನೆಲೆಯಲ್ಲಿ ಅರೋಪಿ ಮಧುವನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಉಳಿದ ಅರೋಪಿಗಳಿಗೆ ಶೋಧ ಕಾರ್ಯ ನಡೆಯುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:06 pm, Sat, 4 January 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ