ಮದ್ವೆಯಾಗಿದ್ದ ಆಂಟಿ ಜತೆ ಲವ್ವಿಡವ್ವಿ: ಕರೆ ಸ್ವೀಕರಿಸಲಿಲ್ಲ ಎಂದು ಮನೆಗೆ ಹೋದ ಯುವಕ ಆಸ್ಪತ್ರೆ ಸೇರಿದ
ಬೆಳಗಾವಿಯ ಗೋಕಾಕ್ ಪಟ್ಟಣದ ನಿವಾಸಿ ಬೆಂಗಳೂರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆದ್ರೆ, ಅದೇ ಗೋಕಾಕ್ನಲ್ಲಿ ಮದುವೆಯಾಗಿದ್ದ ಆಂಟಿ ಜೊತೆ ಲವ್ವಿಡವ್ವಿ ಇಟ್ಟಿಕೊಂಡಿದ್ದು, ಆಕೆ ಫೋನ್ ರಿಸೀವ್ ಮಾಡಿಲ್ಲವೆಂದು ನೇರವಾಗಿ ಮನೆಗೆ ಬೆಂಗಳೂರಿನಿಂದ ಗೋಕಾಕ್ಗೆ ಬಂದಿದ್ದಾನೆ. ಹೀಗೆ ಬಂದವನು ಈಗ ಬಿಮ್ಸ್ ಐಸಿಯುನಲ್ಲಿ ಒದ್ದಾಡುತ್ತಿದ್ದಾನೆ. ಅಷ್ಟಕ್ಕೂ ಈತನ ಈ ಗತಿಗೆ ಕಾರಣ ಅಂಟಿ ಲವ್ ಸ್ಟೋರಿ.
ಬೆಳಗಾವಿ, (ಡಿಸೆಂಬರ್ 29): ಮದುವೆಯಾಗಿದ್ದ ಆಂಟಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಯುವಕ ಇದೀಗ ಆಸ್ಪತ್ರೆ ಸೇರಿದ್ದಾನೆ. ಹೌದು… ಗೋಕಾಕ್ನ ಸಂಗಮೇಶ್ವರದ ನಿವಾಸಿ ಆನಂದ್, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಆನಂದ್, ಗೋಕಾಕ್ನ ಆಂಟಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದು, ಬಳಿಕ ಆಕೆ ಫೋನ್ ಕರೆ ಸ್ವೀಕರಿಸಿಲ್ಲವೆಂದು ಮನೆಗೆ ಬಂದಿದ್ದಾನೆ. ಆಗ ವೇಳೆ ಮಾತಿನ ಚಕಮಕಿಯಾಗಿ ಆಂಟಿಯೇ ಯುವಕನಿಗೆ ಚಾಕುವಿನಿಂದ ಇರಿದ್ದಿದ್ದಾಳೆ. ಇದರಿಂದ ಗಾಯಗೊಂಡಿರುವ ಯುವಕ ಆನಂದ್ ಬೆಳಗಾವಿಯ ಬಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮಹಿಳೆ ಹೆಸರು ಶೋಭಾ. ಗೋಕಾಕ್ನ ಸಂಗಮೇಶ್ವರದ ನಿವಾಸಿ. ಈ ಹಿಂದೆ ಓರ್ವನನ್ನ ಮದ್ವೆಯಾಗಿ ಆತನಿಂದ ದೂರಾಗಿದ್ದ ಶೋಭ, ಮಂಜುನಾಥ್ ಎಂಬಾತನನ್ನ 2ನೇ ಮದ್ವೆ ಆಗಿದ್ದಳು. ಆದರೂ ಒಂದೂವರೆ ವರ್ಷದಿಂದ ಈ ಆನಂದ್ ಜತೆ ಲವ್ವಿಡವ್ವಿ ಆಟವಾಡುತ್ತಿದ್ದಳು. 15 ದಿನಗಳಿಂದ ಆನಂದ್ನ ಫೋನ್ ಸ್ವೀಕರಿಸುತ್ತಿರಲಿಲ್ವಂತೆ. ಇದರಿಂದ ಸಿಟ್ಟಿಗೆದ್ದ ಆನಂದ್, ಮೊನ್ನೆ ನೇರವಾಗಿ ಗೋಕಾಕ್ನಲ್ಲಿದ್ದ ಶೋಭಾ ಮನೆಗೆ ಹೋಗಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಪತ್ನಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪತಿ ಸ್ವಾಮಿ ಆತ್ಮಹತ್ಯೆ
ಆಗ ಗಂಡನ ಜತೆ ಶೋಭಳನ್ನ ನೋಡಿ ಕೆರಳಿದ ಆನಂದ್ ಚಾಕು ತೆಗೆದು ಆಕೆ ಕೈ ಮತ್ತು ಹಣೆಗೆ ಇರಿದಿದ್ದಾನೆ. ಇಷ್ಟಾಗ್ತಿದ್ದಂತೆ ಶೋಭಾ ಮತ್ತು ಆಕೆ ಪತಿ ಅವನ ಕೈಯಿಂದ ಚಾಕು ಕಸಿದುಕೊಂಡು ಆನಂದ್ನ ತಲೆ, ಹೊಟ್ಟೆ, ಎದೆಗೆ ಇರಿದಿದ್ದಾರೆ.
ಆನಂದ್, ಶೋಭಾ ಇಬ್ಬರಿಗೂ ಗಾಯವಾಗಿದ್ದು, ಒಂದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಗೋಕಾಕ್ ನಗರ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದಾರೆ. ಏನೇಹೇಳಿ, ಮದುವೆಯಾಗಿ ನೆಮ್ಮದಿಯಿಂದ ಇರಬೇಕಿದ್ದ ಮಹಿಳೆ ಈಗ ಯುವಕನ ನೆಮ್ಮದಿಯನ್ನೂ ಕಸಿದು ಆಸ್ಪತ್ರೆ ಸೇರುವಂತೆ ಮಾಡಿದ್ದಾಳೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.