Viral Video: ಅಪ್ಪ-ಅಮ್ಮನ ವಾಟರ್​ ಮ್ಯಾಜಿಕ್ ನೋಡಿ ಬಿದ್ದುಬಿದ್ದು ನಕ್ಕ ಮುದ್ದು ಬಾಲಕ; ಅವನ ನಗುವಿಗೆ ಮನಸೋತ ನೆಟ್ಟಿಗರು

GoodNewsCorrespondent ಎಂಬ ಟ್ವಿಟರ್​ ಅಕೌಂಟ್​​ನಿಂದ ವಿಡಿಯೋ ಶೇರ್​ ಆಗಿದೆ. ಇದರಲ್ಲಿ ದಂಪತಿ ತನ್ನ ಮಗನನ್ನು ಹೇಗೆ ಮ್ಯಾಜಿಕ್​ ಹೆಸರಲ್ಲಿ ಮರುಳು ಮಾಡುತ್ತಾರೆ.. ಅದನ್ನು ನೋಡಿ ಮುದ್ದು ಹುಡುಗ ಹೇಗೆ ಬಿದ್ದುಬಿದ್ದು ನಗುತ್ತಾನೆ ಎಂಬುದನ್ನು ನೋಡಬಹುದು.

Viral Video: ಅಪ್ಪ-ಅಮ್ಮನ ವಾಟರ್​ ಮ್ಯಾಜಿಕ್ ನೋಡಿ ಬಿದ್ದುಬಿದ್ದು ನಕ್ಕ ಮುದ್ದು ಬಾಲಕ; ಅವನ ನಗುವಿಗೆ ಮನಸೋತ ನೆಟ್ಟಿಗರು
ವಾಟರ್​ ಮ್ಯಾಜಿಕ್​ ನೋಡಿ ಮುಗ್ಧವಾಗಿ ನಕ್ಕ ಮಗು

Updated on: Mar 16, 2021 | 7:47 PM

ಪುಟ್ಟ ಮಕ್ಕಳು ಸಣ್ಣಸಣ್ಣ ವಿಚಾರವನ್ನೂ ತುಂಬ ಎಂಜಾಯ್​ ಮಾಡುತ್ತಾರೆ. ಅವರಿಗೆ ನಗಲು ದೊಡ್ಡ ಕಾರಣವೂ ಬೇಕಿಲ್ಲ. ಹಾಗೇ ಇಲ್ಲೊಬ್ಬ ಮುದ್ದಾದ ಬಾಲಕ ತನ್ನ ತಂದೆ-ತಾಯಿಯ ವಾಟರ್​ ಮ್ಯಾಜಿಕ್​ ನೋಡಿ ಬಿದ್ದುಬಿದ್ದು ನಕ್ಕಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ.

GoodNewsCorrespondent ಎಂಬ ಟ್ವಿಟರ್​ ಅಕೌಂಟ್​​ನಿಂದ ವಿಡಿಯೋ ಶೇರ್​ ಆಗಿದೆ. ಇದರಲ್ಲಿ ದಂಪತಿ ತನ್ನ ಮಗನನ್ನು ಹೇಗೆ ಮ್ಯಾಜಿಕ್​ ಹೆಸರಲ್ಲಿ ಮರುಳು ಮಾಡುತ್ತಾರೆ.. ಅದನ್ನು ನೋಡಿ ಮುದ್ದು ಹುಡುಗ ಹೇಗೆ ಬಿದ್ದುಬಿದ್ದು ನಗುತ್ತಾನೆ ಎಂಬುದನ್ನು ನೋಡಿದರೆ ಖಂಡಿತ ನಿಮ್ಮ ಮುಖದಲ್ಲೊಂದು ಮುಗುಳ್ನಗು ಮೂಡದೆ ಇರದು. ಈ ಮಗುವಿನ ಬಲಭಾಗದಲ್ಲಿ ಅಪ್ಪ, ಎಡಭಾಗದಲ್ಲಿ ಅಮ್ಮ ಕುಳಿತಿದ್ದಾರೆ. ಮೊದಲು ಅಮ್ಮ ನೀರು ಬಾಟಲಿಯ ಮುಚ್ಚಳ ತೆಗೆದು ಅದನ್ನು ತಮ್ಮ ಹಣೆಗೆ ಒತ್ತಿ ಹಿಡಿದುಕೊಳ್ಳುತ್ತಾರೆ. ಅದಾದ ನಂತರ ಹುಡುಗನ ಎಡಗೈಯನ್ನು ಹಿಡಿದುಕೊಳ್ಳುತ್ತಾರೆ. ಇತ್ತ ಅಪ್ಪ, ಮಗನ ಬಲಗೈಯನ್ನು ಹಿಡಿಯುತ್ತಾರೆ. ಅಷ್ಟಾದ ಮೇಲೆ ತಂದೆ ತನ್ನ ಬಾಯಿಂದ ಒಂದೇ ಸಮ ನೀರು ಉಗುಳಲು ಶುರು ಮಾಡುತ್ತಾರೆ. ಅಂದರೆ ಅಮ್ಮನ ಹಣೆಯ ಮೂಲಕ ಒಳಗೆ ಹೋದ ನೀರು ಬಾಲಕನ ಮೂಲಕ ಅಪ್ಪನ ದೇಹಕ್ಕೆ ಸೇರಿ, ಬಾಯಿಂದ ಹೊರಬಂತು ಎಂಬುದು ಈ ಮ್ಯಾಜಿಕ್​ನ ತಾತ್ಪರ್ಯ. ಅದು ಪಕ್ಕಾ prankಎಂಬುದು ನಮಗೆಲ್ಲರಿಗೂ ಗೊತ್ತಾಗುತ್ತದೆ. ಆದರೆ ಬಾಲಕನ ಪಾಲಿಗೆ ಮಾತ್ರ ಅದು ದೊಡ್ಡ ಮ್ಯಾಜಿಕ್​. ಅದೆಷ್ಟು ಖುಷಿಯಿಂದ, ಅಚ್ಚರಿಯಿಂದ ನಕ್ಕಿದ್ದಾನೆಂದರೆ ನೆಟ್ಟಿಗರಂತೂ ಅವನ ಸುಂದರ ನಗುವಿಗೆ ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೋಕ್ಕೆ 5.2 ಮಿಲಿಯನ್​ ವೀವ್ಸ್ ಬಂದಿದ್ದು, 13 ಸಾವಿರ ಸಲ ರೀಟ್ವೀಟ್​ ಆಗಿದೆ.

ವಿಡಿಯೋ ಶೇರ್​ ಮಾಡಿಕೊಂಡ ಟ್ವಿಟರ್ ಬಳಕೆದಾರರು, ಇದು ಇಟಲಿಯಲ್ಲಿ ನಡೆದಿದ್ದು ಎಂದು ತಿಳಿಸಿದ್ದಾರೆ. ತಾನು ಅಪ್ಪ-ಅಮ್ಮನ ಕೈ ಹಿಡಿದುಕೊಂಡಿದ್ದರಿಂದಲೇ ನೀರು ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆ ಆಯಿತು ಎಂದು ನಂಬಿದ್ದಾನೆ. ಇದೇ ಕಾರಣಕ್ಕೆ ಇಷ್ಟು ನಗುತ್ತಿದ್ದಾನೆ. ಅದನ್ನು ನೋಡಲು ಅದೆಷ್ಟು ಖುಷಿಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.