King Charles III: ಬ್ರಿಟನ್ ರಾಜ ಚಾರ್ಲ್ಸ್-3ಗೆ ಕ್ಯಾನ್ಸರ್, ಸಾರ್ವಜನಿಕರ ಭೇಟಿ ರದ್ದು

ಬ್ರಿಟನ್ ರಾಜ ಚಾರ್ಲ್ಸ್-3 ಒಂದು ರೀತಿಯ ಕ್ಯಾನ್ಸರ್ ಕಾಯಿಲೆಯಿಂದ ಒಳಲುತ್ತಿದ್ದಾರೆ. 75 ವರ್ಷ ವಯಸ್ಸಿನ ಕಿಂಗ್ ಚಾರ್ಲ್ಸ್-3, ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ಬಕಿಂಗ್​ಹ್ಯಾಮ್ ಅರಮನೆಯಿಂದ ಮಾಹಿತಿ ಸಿಕ್ಕಿದೆ. ಸಾರ್ವಜನಿಕರ ಸಂಪರ್ಕವನ್ನು ಮಿತಿಗೊಳಿಸಬೇಕೆಂದು ವೈದ್ಯರು ಸಲಹೆ ನೀಡಿದ್ದು, ಪ್ರಧಾನಿ ರಿಷಿ ಸುನಕ್ ಅವರ ಜೊತೆಗಿನ ಸಾಪ್ತಾಹಿಕ ಚರ್ಚೆ, ಸಭೆ ಮುಂದುವರಿಸುತ್ತಾರೆ.

King Charles III: ಬ್ರಿಟನ್ ರಾಜ ಚಾರ್ಲ್ಸ್-3ಗೆ ಕ್ಯಾನ್ಸರ್, ಸಾರ್ವಜನಿಕರ ಭೇಟಿ ರದ್ದು
ಬ್ರಿಟನ್ ರಾಜ ಚಾರ್ಲ್ಸ್-3

Updated on: Feb 06, 2024 | 7:07 AM

ಬ್ರಿಟನ್ ರಾಜ ಚಾರ್ಲ್ಸ್-3 (King Charles III) ಅವರು ಒಂದು ರೀತಿಯ ಕ್ಯಾನ್ಸರ್ (Cancer) ಕಾಯಿಲೆಯಿಂದ ಒಳಲುತ್ತಿದ್ದಾರೆ ಎಂದು ಬಕಿಂಗ್​ಹ್ಯಾಮ್ ಅರಮನೆಯಿಂದ (Buckingham Palace) ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಇತ್ತೀಚೆಗೆ ಚಾರ್ಲ್ಸ್-3 ಅವರ ಆರೋಗ್ಯದಲ್ಲಿ ಏರೇಪೇರಾಗಿದ್ದರಿಂದ ತಪಾಸಣೆ ನಡೆಸಲಾಗಿತ್ತು. ಕ್ಯಾನ್ಸರ್ ಕಾಯಿಲೆ ಲಕ್ಷಣವಿದ್ದರಿಂದ ರೋಗನಿರ್ಣಯ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಕ್ಯಾನ್ಸರ್​ ಕಾಯಿಲೆ ಇರುವುದು ದೃಢಪಟ್ಟಿದೆ. ಸದ್ಯ ವೈದ್ಯರ ತಂಡ ಕಿಂಗ್ ಚಾರ್ಲ್ಸ್-3ಗೆ ಚಿಕಿತ್ಸೆ ನೀಡುತ್ತಿದೆ.

ಚಾರ್ಲ್ಸ್-3 ಸಾರ್ವಜನಿಕರ ಭೇಟಿ ಮುಂದೂಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಅರಮನೆ ವ್ಯವಹಾರ, ಕಾಗದ ಪತ್ರಗಳಿಗೆ ಸಹಿ ಮಾಡಬಹುದು. ಕಿಂಗ್ ಚಾರ್ಲ್ಸ್-3 ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆದಷ್ಟು ಬೇಗ ಗುಣಮುಖರಾಗಲಿದ್ದಾರೆ. ಆದಷ್ಟು ಬೇಗ ಸಾರ್ವಜನಿಕ ಸೇವೆಗೆ ಮರಳಲಿದ್ದಾರೆ. ಕ್ಯಾನ್ಸರ್ ಕಾಯಿಲೆ ಬಗ್ಗೆ ಸಾರ್ವಜನಿಕರು ಆತಂಕಕ್ಕೀಡಾಗಬಾರದು. ಸೂಕ್ತ ಚಿಕಿತ್ಸೆ ಪಡೆದರೆ ಕಾಯಿಲೆಯಿಂದ ಗುಣಮುಖವಾಗಬಹುದು ಎಂದು ಬಕಿಂಗ್​ಹ್ಯಾಮ್ ಅರಮನೆಯಿಂದ ಅಧಿಕೃತ ಮಾಹಿತಿ ಸಿಕ್ಕಿದೆ.

75 ವರ್ಷ ವಯಸ್ಸಿನ ಕಿಂಗ್ ಚಾರ್ಲ್ಸ್-3, ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದು ಆದಷ್ಟು ಬೇಗ ಗುಣಮುಖರಾಗಲಿದ್ದಾರೆ ಎಂದು ಬಕಿಂಗ್​ಹ್ಯಾಮ್ ಅರಮನೆಯಿಂದ ಮಾಹಿತಿ ಸಿಕ್ಕಿದೆ. ಆದರೆ ಕ್ಯಾನ್ಸರ್‌ ಯಾವ ಹಂತ ತಲುಪಿದೆ ಅಥವಾ ಕಾಯಿಲೆಯ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ. ಇನ್ನು ಚಾರ್ಲ್ಸ್-3 ಅವರ ರೋಗನಿರ್ಣಯದ ಬಗ್ಗೆ ವೈಯಕ್ತಿಕವಾಗಿ ಅವರ ಪುತ್ರರಿಗೆ ಮಾಹಿತಿ ನೀಡಲಾಗಿದೆ. ಮತ್ತು ಪ್ರಿನ್ಸ್ ಆಫ್ ವೇಲ್ಸ್ ಅವರ ತಂದೆಯೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: King Charles III Birthday: ಕಿಂಗ್ ಚಾರ್ಲ್ಸ್ III ಜನ್ಮದಿನಕ್ಕೆ ವಿಶೇಷ ಸೈನ್ಯ ಪರೇಡ್​, ಭಾರತೀಯರು ಸೇರಿ 1,171 ಸಾಧಕರಿಗೆ ಬ್ರಿಟಿಷ್​​ ಗೌರವ

ಅಮೆರಿಕಾದಲ್ಲಿ ವಾಸಿಸುವ ಡ್ಯೂಕ್ ಆಫ್ ಸಸೆಕ್ಸ್, ಪ್ರಿನ್ಸ್ ಹ್ಯಾರಿ ಅವರು ತಮ್ಮ ತಂದೆಯೊಂದಿಗೆ ಮಾತನಾಡಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಅವರನ್ನು ನೋಡಲು ಯುಕೆಗೆ ಪ್ರಯಾಣಿಸಲಿದ್ದಾರೆ. ಸೋಮವಾರ ಬೆಳಿಗ್ಗೆ ನಾರ್ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್‌ನಿಂದ ಲಂಡನ್‌ಗೆ ಮರಳಿದ ಕಿಂಗ್ ಚಾಲ್ಸ್-3 ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾರೆ ಎಂದು ಬಕಿಂಗ್​ಹ್ಯಾಮ್ ಅರಮನೆ ತಿಳಿಸಿದೆ.

ರಾಜ ಚಾಲ್ಸ್ ತಮ್ಮ ಸಾರ್ವಜನಿಕ ಕಾರ್ಯಕ್ರಮಗಳಿಗೆ ವಿರಾಮ ನೀಡಿದ್ದಾರೆ, ಕಾಗದಪತ್ರಗಳು ಮತ್ತು ಖಾಸಗಿ ಸಭೆಗಳನ್ನು ಒಳಗೊಂಡಂತೆ ರಾಷ್ಟ್ರದ ಮುಖ್ಯಸ್ಥರಾಗಿ ಅವರ ಸಾಂವಿಧಾನಿಕ ಪಾತ್ರವನ್ನು ಅವರು ಮುಂದುವರೆಸುತ್ತಾರೆ. ಅವರು ಸಾರ್ವಜನಿಕರ ಸಂಪರ್ಕವನ್ನು ಮಿತಿಗೊಳಿಸಬೇಕೆಂದು ವೈದ್ಯರು ಸಲಹೆ ನೀಡಿದ್ದು, ಪ್ರಧಾನಿ ರಿಷಿ ಸುನಕ್ ಅವರ ಜೊತೆಗಿನ ಸಾಪ್ತಾಹಿಕ ಚರ್ಚೆ, ಸಭೆ ಮುಂದುವರಿಸುತ್ತಾರೆ ಮತ್ತು ವೈಯಕ್ತಿಕವಾಗಿ ಇರುತ್ತಾರೆ ಎಂದು ಅರಮನೆಯಿಂದ ತಿಳಿದು ಬಂದಿದೆ.

ರಾಷ್ಟ್ರದ ಮುಖ್ಯಸ್ಥರು ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ ಸಾಂವಿಧಾನಿಕ ಕಾರ್ಯವಿಧಾನವಿದೆ. ಆ ಸಂದರ್ಭದಲ್ಲಿ “ರಾಜ್ಯದ ಸಲಹೆಗಾರರನ್ನು” ರಾಜನ ಪರವಾಗಿ ನಿಲ್ಲಲು ನೇಮಿಸಬಹುದು. ಪ್ರಸ್ತುತ ಇದರಲ್ಲಿ ಕ್ವೀನ್ ಕ್ಯಾಮಿಲ್ಲಾ, ಪ್ರಿನ್ಸ್ ವಿಲಿಯಂ, ಪ್ರಿನ್ಸೆಸ್ ರಾಯಲ್ ಮತ್ತು ಪ್ರಿನ್ಸ್ ಎಡ್ವರ್ಡ್ ಸೇರಿದ್ದಾರೆ.

ವಿದೇಶಿ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ