ಮಹಿಳಾ ಜೈಲಧಿಕಾರಿ ಜೊತೆ ಕೈದಿಯ ಲೈಂಗಿಕ ಕ್ರಿಯೆಯ ವಿಡಿಯೋ ವೈರಲ್

Shocking News: ಮಹಿಳಾ ಜೈಲು ಅಧಿಕಾರಿಯ ಜೊತೆ ಕೈದಿ ಲೈಂಗಿಕ ಕ್ರಿಯೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ಈ ಹಿನ್ನೆಲೆಯಲ್ಲಿ ಆ ಜೈಲಧಿಕಾರಿಯ ಮೇಲೆ ಕ್ರಮ ಕೈಗಳ್ಳುವುದಾಗಿ ನೋಟಿಸ್ ನೀಡಲಾಗಿದೆ. ಅಂದಹಾಗೆ, ಈ ಘಟನೆ ನಡೆದಿದ್ದು ಎಲ್ಲಿ? ಇದು ನಡೆದಿದ್ದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.

ಮಹಿಳಾ ಜೈಲಧಿಕಾರಿ ಜೊತೆ ಕೈದಿಯ ಲೈಂಗಿಕ ಕ್ರಿಯೆಯ ವಿಡಿಯೋ ವೈರಲ್
ಜೈಲು
Image Credit source: istock

Updated on: Jul 01, 2024 | 9:01 PM

ನವದೆಹಲಿ: ನೈಋತ್ಯ ಲಂಡನ್‌ನ ಹೆಚ್‌ಎಂಪಿ ವಾಂಡ್ಸ್‌ವರ್ತ್ ಜೈಲಿನಲ್ಲಿ ಕೈದಿಯೊಂದಿಗೆ ಮಹಿಳಾ ಜೈಲಧಿಕಾರಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಲೀಕ್ ಆಗಿದೆ. ಇದಾದ ಬಳಿಕ ಯುಕೆ ಮಹಿಳಾ ಜೈಲು ಅಧಿಕಾರಿಯ ಮೇಲೆ ಆರೋಪ ಹೊರಿಸಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. 30 ವರ್ಷದ ಲಿಂಡಾ ಡಿ ಸೌಸಾ ಅಬ್ರೂ ಪಶ್ಚಿಮ ಲಂಡನ್‌ನ ಫುಲ್‌ಹಾಮ್‌ನಲ್ಲಿ ವಾಸಿಸುತ್ತಿದ್ದಾರೆ. ಅವರು ಸಾರ್ವಜನಿಕ ಕಚೇರಿಯಲ್ಲಿ ಈ ದುಷ್ಕೃತ್ಯ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಇಂದು ಅವರನ್ನು ಆಕ್ಸ್‌ಬ್ರಿಡ್ಜ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

ಜೈಲಿನೊಳಗೆ ಚಿತ್ರೀಕರಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ನಂತರ ಮೆಟ್ರೋಪಾಲಿಟನ್ ಪೊಲೀಸರು ಶುಕ್ರವಾರ ವಿಚಾರಣೆಯನ್ನು ಪ್ರಾರಂಭಿಸಿದರು. ವರದಿಗಳ ಪ್ರಕಾರ, ಈ ಘಟನೆ ಸಂಭವಿಸುವ ಮೊದಲು ಆ ಮಹಿಳಾ ಜೈಲಧಿಕಾರಿಯು ಆರಂಭದಲ್ಲಿ ಯೂನಿಫಾರಂ ಧರಿಸಿದ್ದರು. ಡ್ಯೂಟಿಯಲ್ಲಿರುವಾಗಲೇ ಕೈದಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದು ಈ ವಿಡಿಯೋ ಮೂಲಕ ಬಹಿರಂಗವಾಗಿದೆ.

ಇದನ್ನೂ ಓದಿ: ಸ್ವೀಟ್ ತರುವಷ್ಟರಲ್ಲಿ ಮಕ್ಕಳೂ ಇಲ್ಲ, ಕಾರೂ ಇಲ್ಲ; ಯಾವ ಸಿನಿಮಾಗೂ ಕಡಿಮೆಯಿಲ್ಲ ಈ ಕತೆ!

HMP ವಾಂಡ್ಸ್‌ವರ್ತ್, 1851ರಲ್ಲಿ ಸ್ಥಾಪಿಸಲಾದ ವಿಕ್ಟೋರಿಯನ್ ಯುಗದ ಜೈಲು. ಇದು ಸಾಮರ್ಥ್ಯಕ್ಕಿಂತಲೂ ಅಧಿಕ ಪ್ರಮಾಣದ ಕೈದಿಗಳು ಮತ್ತು ಹದಗೆಡುತ್ತಿರುವ ಪರಿಸ್ಥಿತಿಗಳಂತಹ ತೀವ್ರ ಸವಾಲುಗಳನ್ನು ಎದುರಿಸುತ್ತಿದೆ. ಇದು ವ್ಯಾಪಕ ಹಿಂಸಾಚಾರ, ಸೊಳ್ಳೆಗಳ ಕಾಟ ಮತ್ತು ತೀವ್ರ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಹೊಂದಿದೆ. ಈ ಜೈಲು ಪ್ರಸ್ತುತ ಅದರ ಉದ್ದೇಶಿತ ಸಾಮರ್ಥ್ಯಕ್ಕಿಂತ ಶೇ. 163ರಷ್ಟು ಹೆಚ್ಚು ಕೈದಿಗಳನ್ನು ಇರಿಸಿಕೊಂಡಿದೆ. ಇಲ್ಲಿ 1,500ಕ್ಕೂ ಹೆಚ್ಚು ಕೈದಿಗಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:00 pm, Mon, 1 July 24