AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನ ದಿಢೀರ್ 9,000 ಅಡಿಗೆ ಕುಸಿತ, ಎಮರ್ಜೆನ್ಸಿ ಘೋಷಣೆ: ಲಂಡನ್​ಗೆ ವಾಪಸ್

ಲಂಡನ್‌ನಿಂದ ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನ BA295, ತಾಂತ್ರಿಕ ದೋಷದಿಂದಾಗಿ 9,000 ಅಡಿ ದಿಢೀರ್ ಕುಸಿಯಿತು. ಐರ್ಲೆಂಡ್ ಮೇಲೆ ಹಾರುತ್ತಿದ್ದಾಗ ಈ ಘಟನೆ ನಡೆದಿದ್ದು, ಪೈಲಟ್‌ಗಳು ತುರ್ತು ಪರಿಸ್ಥಿತಿ (ಸ್ಕ್ವಾಕ್ 7700) ಘೋಷಿಸಿ ವಿಮಾನವನ್ನು ಸುರಕ್ಷಿತವಾಗಿ ಲಂಡನ್ ಹೀಥ್ರೂ ವಿಮಾನ ನಿಲ್ದಾಣಕ್ಕೆ ವಾಪಸ್ ಕರೆತಂದರು. ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿತ್ತಾದರೂ, ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಎಲ್ಲರೂ ಸುರಕ್ಷಿತವಾಗಿದ್ದಾರೆ.

ಚಿಕಾಗೋಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್ ವಿಮಾನ ದಿಢೀರ್ 9,000 ಅಡಿಗೆ ಕುಸಿತ, ಎಮರ್ಜೆನ್ಸಿ ಘೋಷಣೆ: ಲಂಡನ್​ಗೆ ವಾಪಸ್
ವಿಮಾನ Image Credit source: PTI
ನಯನಾ ರಾಜೀವ್
|

Updated on: Oct 06, 2026 | 7:19 AM

Share

ಲಂಡನ್‌, ಅಕ್ಟೋಬರ್ 06: ಲಂಡನ್​ನಿಂದ ಅಮೆರಿಕದ ಚಿಕಾಗೋಗೆ ತೆರಳುತ್ತಿದ್ದ ಬ್ರಿಟಿಷ್ ಏರ್​ವೇಸ್ ಬೋಯಿಂಗ್ ವಿಮಾನವು ಹಾರಾಟ ನಡೆಸುತ್ತಿದ್ದಾಗ ಹಠಾತ್ 9 ಸಾವಿರ ಅಡಿಗಳಷ್ಟು ಕೆಳಕ್ಕೆ ಕುಸಿದು ಆತಂಕ ಸೃಷ್ಟಿಸಿದ ಘಟನೆ ವರದಿಯಾಗಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಪೈಲಟ್​ಗಳು ತುರ್ತು ಪರಿಸ್ಥಿತಿ ಘೋಷಿಸಿ ವಿಮಾನವನ್ನು ಯಶಸ್ವಿಯಾಗಿ ಲಂಡನ್​ ಹೀಥ್ರೂ ವಿಮಾನ ನಿಲ್ದಾಣಕ್ಕೆ ವಾಪಸ್ ತಿರುಗಿಸಿ ಸುರಕ್ಷಿತವಾಗಿ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.

ವಿಮಾನವು 37,000 ಅಡಿ ಎತ್ತರದಲ್ಲಿ ಐರ್ಲೆಂಡ್ ವಾಯುಪ್ರದೇಶದ ಮೇಲೆ ಹಾರುತ್ತಿದ್ದಾಗ ಕೇವಲ ಕೆಲವೇ ನಿಮಿಷಗಳಲ್ಲಿ 28,000 ಅಡಿ ಎತ್ತರಕ್ಕೆ ಇಳಿಯಿತು. ಒಟ್ಟು 9,000 ಅಡಿಗಳಷ್ಟು ಕೆಳಗೆ ಇಳಿದ ಕಾರಣ ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಬ್ರಿಟಿಷ್ ಏರ್‌ವೇಸ್‌ನ BA295 ವಿಮಾನವು ಬೆಳಗ್ಗೆ 11.50ಕ್ಕೆ ಲಂಡನ್‌ನ ಹೀಥ್ರೂನಿಂದ ಹೊರಟು ಸುಮಾರು 8.40 ಗಂಟೆಗಳಲ್ಲಿ ಚಿಕಾಗೋ ತಲುಪಬೇಕಿತ್ತು. ಆದರೆ ಹಾರಾಟ ಆರಂಭವಾದ ಒಂದು ಗಂಟೆಯಲ್ಲೇ ತಾಂತ್ರಿಕ ಅಡಚಣೆ ಕಂಡುಬಂದಿತು.

ವಿಮಾನ ಸಿಬ್ಬಂದಿ ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ATC) ಸಾಮಾನ್ಯ ತುರ್ತುಸ್ಥಿತಿಯನ್ನು ಸೂಚಿಸುವ ‘7700’ ಟ್ರಾನ್ಸ್‌ಪಾಂಡರ್ ಕೋಡ್ ರವಾನಿಸಿ, ಮುನ್ನೆಚ್ಚರಿಕೆಯಾಗಿ ಲಂಡನ್‌ಗೆ ಮರಳುವ ನಿರ್ಧಾರ ಕೈಗೊಂಡರು. ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮಗೆ ಮೊದಲ ಆದ್ಯತೆ. ಪೈಲಟ್‌ಗಳ ಸಮಯಪ್ರಜ್ಞೆಯಿಂದ ವಿಮಾನವು ಹೀಥ್ರೂನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬ್ರಿಟಿಷ್ ಏರ್‌ವೇಸ್ ತಿಳಿಸಿದೆ.

ಮತ್ತಷ್ಟು ಓದಿ:

ಇಸ್ರೇಲ್ ಮೇಲೆ ವಿಮಾನ ಅಪ್ಪಳಿಸುವುದೇ ನನ್ನ ಪ್ಲ್ಯಾನ್ ಆಗಿತ್ತು, ಸಾವಿಗೆ ಹೆದರಲ್ಲ: ಫ್ಲೈದುಬೈ ಸಹ-ಪೈಲಟ್ ಹಮ್ಮಾಮಿ ಸ್ಫೋಟಕ ತಪ್ಪೊಪ್ಪಿಗೆ

‘Squawk 7700’ ಎಂದರೇನು? ವಿಮಾನಯಾನದಲ್ಲಿ ಪೈಲಟ್‌ಗಳು ಎಟಿಸಿಗೆ ಸಮಸ್ಯೆಗಳನ್ನು ಸಂವಹಿಸಲು 4 ಅಂಕಿಗಳ ಕೋಡ್ ಬಳಸುತ್ತಾರೆ.

7700: ಸಾಮಾನ್ಯ ಅಥವಾ ಗಂಭೀರ ತಾಂತ್ರಿಕ ತುರ್ತುಸ್ಥಿತಿ.

7600: ರೇಡಿಯೋ ಸಂವಹನ ಸಂಪರ್ಕ ಕಡಿತ.

7500: ವಿಮಾನ ಅಪಹರಣ (Hijack).

ಕೆಲವೇ ದಿನಗಳ ಹಿಂದಷ್ಟೇ ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ (FZ1073) ವಿಮಾನದಲ್ಲಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂಬಾತ ಮುಖ್ಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿ ವಿಮಾನವನ್ನು ಅಪಘಾತಕ್ಕೀಡು ಮಾಡಲು ಯತ್ನಿಸಿದ್ದ. ತೀವ್ರ ರಕ್ತಸ್ರಾವದ ನಡುವೆಯೂ ಕ್ಯಾಪ್ಟನ್ ಕಾಕ್‌ಪಿಟ್ ಬಾಗಿಲು ತೆರೆದು ಪ್ರಯಾಣಿಕರ ನೆರವಿನಿಂದ ವಿಮಾನವನ್ನು ಸೌದಿಯ ತಬೂಕ್‌ನಲ್ಲಿ ಇಳಿಸಿ 174 ಪ್ರಯಾಣಿಕರ ಪ್ರಾಣ ಉಳಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More