ಗಣಿತ ಬಳಸಿ ಲಾಟರಿ ಗೆಲ್ಲುವ ಸೂತ್ರವನ್ನು ಕಂಡು ಹಿಡಿದ ಬ್ರಿಟಿಷ್ ಗಣಿತಜ್ಞರು

|

Updated on: Jan 05, 2024 | 8:16 AM

ಯಾರಿಗೆ ತಾನೆ ಶ್ರೀಮಂತರಾಗುವ ಬಯಕೆ ಇರುವುದಿಲ್ಲ ಹೇಳಿ, ಹಣ ಗಳಿಸಲು ಹಲವು ಮಾರ್ಗಗಳಿವೆ. ಕೆಲವರು ಕಷ್ಟಪಟ್ಟು ದುಡಿಯುತ್ತಾರೆ, ಕೆಲವರು ತಮ್ಮ ಬುದ್ಧಿಶಕ್ತಿಯನ್ನು ಬಳಸುತ್ತಾರೆ. ಇನ್ನೂ ಕೆಲವರು ತಪ್ಪು ದಾರಿಯನ್ನು ತುಳಿಯುತ್ತಾರೆ. ಇಬ್ಬರು ಗಣಿತಜ್ಞರು ಗಣಿತವನ್ನು ಬಳಸಿ ಲಾಟರಿ ಗೆಲುವ ಸೂತ್ರವನ್ನು ಕಂಡುಹಿಡಿದಿದ್ದಾರೆ.

ಗಣಿತ ಬಳಸಿ ಲಾಟರಿ ಗೆಲ್ಲುವ ಸೂತ್ರವನ್ನು ಕಂಡು ಹಿಡಿದ ಬ್ರಿಟಿಷ್ ಗಣಿತಜ್ಞರು
ಲಾಟರಿ
Follow us on

ಯಾರಿಗೆ ತಾನೆ ಶ್ರೀಮಂತರಾಗುವ ಬಯಕೆ ಇರುವುದಿಲ್ಲ ಹೇಳಿ, ಹಣ ಗಳಿಸಲು ಹಲವು ಮಾರ್ಗಗಳಿವೆ. ಕೆಲವರು ಕಷ್ಟಪಟ್ಟು ದುಡಿಯುತ್ತಾರೆ, ಕೆಲವರು ತಮ್ಮ ಬುದ್ಧಿಶಕ್ತಿಯನ್ನು ಬಳಸುತ್ತಾರೆ. ಇನ್ನೂ ಕೆಲವರು ತಪ್ಪು ದಾರಿಯನ್ನು ತುಳಿಯುತ್ತಾರೆ. ಇಬ್ಬರು ಗಣಿತಜ್ಞರು ಗಣಿತವನ್ನು ಬಳಸಿ ಲಾಟರಿ ಗೆಲುವ ಸೂತ್ರವನ್ನು ಕಂಡುಹಿಡಿದಿದ್ದಾರೆ.

ಇದಕ್ಕಾಗಿ ಕೇವಲ 27 ಟಿಕೆಟ್​ಗಳನ್ನು ಮಾತ್ರ ಖರೀದಿಸಬೇಕಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದೇ ಸೂತ್ರದಲ್ಲಿ ಬೇರೆಯವರು ಕೂಡ ಟಿಕೆಟ್ ಖರೀದಿಸಿದ್ದು ಉತ್ತಮ ಫಲಿತಾಂಶ ಬಂದಿದೆ.

ಡೇವಿಡ್ ಸ್ಟೀವರ್ಟ್ ಮತ್ತು ಡೇವಿಡ್ ಕುಶಿಂಗ್ ಎಂಬ ಈ ಇಬ್ಬರು ಕಣಿತಜ್ಞರು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಈ ಸೂತ್ರದಿಂದ ನೀವು ಲಾಟರಿ ಗೆಲ್ಲಬಹುದು, ಆದರೆ ಜಾಕ್‌ಪಾಟ್ ಗೆಲ್ಲುವುದು ಖಾತರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಯುಕೆ ರಾಷ್ಟ್ರೀಯ ಲಾಟರಿಯಲ್ಲಿ ಈ ಗಣಿತಜ್ಞರು 1 ರಿಂದ 59 ರ ನಡುವೆ ಆರು ವಿಭಿನ್ನ ಸಂಖ್ಯೆಗಳಿಂದ ತಮ್ಮ ಆಯ್ಕೆಯ ಟಿಕೆಟ್‌ಗಳನ್ನು ಖರೀದಿಸುತ್ತಾರೆ.

ಮತ್ತಷ್ಟು ಓದಿ: ಮೆಡಿಕಲ್​ ಶಾಪ್​ಗೆಂದು ಹೋದ ರೈತರೊಬ್ಬರಿಗೆ ಖುಲಾಯಿಸಿತು 2.5 ಕೋಟಿ ರೂ. ಬಂಪರ್ ಲಾಟರಿ

ಸಂಶೋಧಕರು ಸೀಮಿತ ರೇಖಾಗಣಿತ ಎಂದು ಕರೆಯಲ್ಪಡುವ ಗಣಿತದ ವಿಧಾನವನ್ನು ಬಳಸಿದರು. ಹಾಗೆಯೇ ಅವರು 45,057,474 ಹಣವನ್ನು ಕೂಡ ಗೆದ್ದಿದ್ದಾರೆ. ಒಂದೊಮ್ಮೆ ನೀವು 26 ಟಿಕೆಟ್​ಗಳನ್ನು ಖರೀದಿಸಿದರೂ ಲಾಟರಿ ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತಾರೆ ಗಣಿತಜ್ಞರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ