ನವದೆಹಲಿ: ಕ್ಯಾಲಿಫೋರ್ನಿಯಾದಲ್ಲಿ (California Flood) ಭಾರೀ ಪ್ರವಾಹದಿಂದ 19 ಜನ ಮೃತಪಟ್ಟಿದ್ದಾರೆ. ಇಲ್ಲಿ ಮತ್ತೊಮ್ಮೆ ಭಾರೀ ಮಳೆ, ಗಾಳಿ ಮತ್ತು ಹಿಮ ಆವರಿಸಿದೆ. ಇದರಿಂದಾಗಿ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಮತ್ತು ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ಸಿಯೆರಾ ನೆವಾಡಾದಾದ್ಯಂತ ಭಾರೀ ಹಿಮಪಾತ ಉಂಟಾಗಿದೆ. ಇಂಟರ್‌ಸ್ಟೇಟ್ 80, ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ ಪ್ರದೇಶದಿಂದ ಲೇಕ್ ತಾಹೋ ಸ್ಕೀ ರೆಸಾರ್ಟ್‌ಗಳವರೆಗಿನ ಪ್ರಮುಖ ಹೆದ್ದಾರಿಯಲ್ಲಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 2 ವಾರಗಳಲ್ಲಿ ಚಂಡಮಾರುತಕ್ಕೆ ಕ್ಯಾಲಿಫೋರ್ನಿಯಾದಲ್ಲಿ ಕನಿಷ್ಠ 19 ಸಾವುಗಳು ಸಂಭವಿಸಿದೆ. ಹಲವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮರಗಳು ಕೂಡ ನೀರಿನಲ್ಲಿ ಮುಳುಗಿ ಹೋಗಿವೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಬರ್ಕ್ಲಿ ಸೆಂಟ್ರಲ್ ಸಿಯೆರಾ ಸ್ನೋ ಲ್ಯಾಬ್ ಸೋಮವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದು, ಶುಕ್ರವಾರದಿಂದ 49.6 ಇಂಚುಗಳು ಹಿಮಪಾತವಾಗಿದೆ.
Landslides in #California due to heavy rains, as the US state prepares for strong winds and a hurricane coming from Alabama.#californiaflood pic.twitter.com/gARtfa6Koy
— RaninTamim (@RaninTamim88) January 15, 2023
ಇದನ್ನೂ ಓದಿ: South Africa Church: ದಕ್ಷಿಣ ಆಫ್ರಿಕಾದ ಚರ್ಚ್ ಪ್ರಾರ್ಥನೆ ವೇಳೆ ಪ್ರವಾಹ; 9 ಜನ ಸಾವು, 8 ಮಂದಿ ನಾಪತ್ತೆ
ಹೆಚ್ಚಿನ ತಾಹೋ ಪ್ರದೇಶವನ್ನು ಒಳಗೊಂಡಂತೆ ಕೇಂದ್ರ ಸಿಯೆರಾಕ್ಕೆ ಹಿಮಪಾತದ ಎಚ್ಚರಿಕೆಯನ್ನು ನೀಡಲಾಯಿತು. ಡಿಸೆಂಬರ್ ಅಂತ್ಯದಿಂದ ಕ್ಯಾಲಿಫೋರ್ನಿಯಾದಲ್ಲಿ ಬಿರುಗಾಳಿಗಳ ಸುರಿಮಳೆ ಮತ್ತು ಹಿಮಪಾತವಾಗಿದೆ. ಉತ್ತರ ಕ್ಯಾಲಿಫೋರ್ನಿಯಾದ ಕೆಲವು ಭಾಗಗಳು ವಾರದ ಮಧ್ಯದಲ್ಲಿ ಹೆಚ್ಚಿನ ಮಳೆ ಉಂಟಾಗಲಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸೋಮವಾರ ಬಿಸಿಲು ಉಂಟಾಗಿದೆ.
Meanwhile in San Francisco. ?#SanFrancisco #CaliforniaFlood pic.twitter.com/5DorE7ElVs
— Jeffrey Ⓥ (@LiftForever67) January 7, 2023
ಬರ್ಕ್ಲಿಯ ಕೊಲ್ಲಿಯಾದ್ಯಂತ ಸೋಮವಾರ ಗುಡ್ಡ ಕುಸಿದು, 10 ಮನೆಗಳಿಗೆ ಹಾನಿಯಾಗಿದೆ. ಆದರೆ, ಯಾವುದೇ ಗಾಯಗಳ ವರದಿಯಾಗಿಲ್ಲ. ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಕ್ಯಾಲಿಫೋರ್ನಿಯಾದಲ್ಲಿ ಒಂದು ದೊಡ್ಡ ದುರಂತ ಉಂಟಾಗಿದೆ ಎಂದು ಘೋಷಿಸಿದ್ದಾರೆ.