ಕೊರೊನಾ ಪರೀಕ್ಷೆಗೆ ಒಳಪಟ್ಟ ನಂತರ ಅದರ ಫಲಿತಾಂಶಕ್ಕಾಗಿ ಕಾಯುವುದೇ ಜನರಿಗೆ ದೊಡ್ಡ ತಲೆನೋವು. ಸೋಂಕು ತಗುಲಿದೆಯೋ, ಇಲ್ಲವೋ ಎಂದು ತಕ್ಷಣ ತಿಳಿಯುವುದಿಲ್ಲ ಎಂಬುದು ಒಂದೆಡೆಯಾದರೆ ಬಂದಿರುವ ಫಲಿತಾಂಶ ನಿಖರವಿದೆಯಾ ಎಂಬ ಅನುಮಾನ ಇನ್ನೊಂದೆಡೆ.
ಕೊರೊನಾ ಪರೀಕ್ಷೆಗಳಲ್ಲಿನ ಸಾಧಕ, ಬಾಧಕಗಳನ್ನು ಪಟ್ಟಿ ಮಾಡಿಕೊಂಡಿರುವ ವಿಜ್ಞಾನಿಗಳು ಹೊಸ ತಂತ್ರಜ್ಞಾನವನ್ನು ಬಳಸಲು ಮುಂದಾಗಿದ್ದಾರೆ. ಪರೀಕ್ಷೆಗೆ ಒಳಪಟ್ಟ 15ರಿಂದ 30 ನಿಮಿಷದೊಳಗೆ ಸಂಬಂಧಿತ ವ್ಯಕ್ತಿಯ ಮೊಬೈಲಿನಲ್ಲೇ ಫಲಿತಾಂಶ ಲಭಿಸುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಸ್ಮಾರ್ಟ್ಫೋನ್ ಕ್ಯಾಮೆರಾ ಸಹಾಯದಿಂದ ಪರೀಕ್ಷೆ
ಸ್ಮಾರ್ಟ್ಫೋನ್ ಮೊಬೈಲಿನ ಕ್ಯಾಮೆರಾ ಸಹಾಯದಿಂದ ಕೊವಿಡ್ ಸೋಂಕು ಪತ್ತೆ ಹಚ್ಚುವ ಹೊಸ ತಂತ್ರಜ್ಞಾನ ಆವಿಷ್ಕರಿಸಲು ಕ್ಯಾಲಿಫೋರ್ನಿಯಾ ಹಾಗೂ ಸ್ಯಾನ್ಪ್ರಾನ್ಸಿಸ್ಕೋ ವಿಜ್ಞಾನಿಗಳ ತಂಡ ಸಿದ್ಧತೆ ನಡೆಸುತ್ತಿದೆ. ವಿಜ್ಞಾನಿಗಳ ಈ ಯತ್ನ ಯಶಸ್ವಿಯಾದರೆ ಕೊವಿಡ್ ನಿಯಂತ್ರಣಕ್ಕೆ ಬಹುದೊಡ್ಡ ಅಸ್ತ್ರ ಸಿಕ್ಕಂತೆಯೇ ಆಗುತ್ತದೆ ಎಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಬಳಸಲಾಗುತ್ತಿರುವ PCR ಮಾದರಿ ಪರೀಕ್ಷೆಯಲ್ಲಿ ಗಂಟಲು ದ್ರವವನ್ನು RNA ಸ್ವರೂಪದಿಂದ DNAಗೆ ಬದಲಾಯಿಸಬೇಕು. ಈ ಕೆಲಸಕ್ಕೆ ಪರಿಣಿತರೇ ಬೇಕಾಗಿದ್ದು ಬಹಳಷ್ಟು ಸಮಯ ತಗಲುತ್ತದೆ. ಆದ್ದರಿಂದ ವಿಜ್ಞಾನಿಗಳು ಸ್ಮಾರ್ಟ್ಫೋನ್ ಆಧರಿತ CRISPR ತಂತ್ರಜ್ಞಾನವನ್ನು ಕಂಡುಹಿಡಿದರೆ ಕಡಿಮೆ ಸಮಯದಲ್ಲಿ ಫಲಿತಾಂಶ ಪಡೆಯಬಹುದು ಎನ್ನಲಾಗುತ್ತಿದೆ.
ಕೊರೊನಾ ಲಸಿಕೆಯ ಬಗ್ಗೆ ಸುಳ್ಳು ಸುದ್ದಿ ಹರಡದಂತೆ ತಡೆಯಲು ಫೇಸ್ಬುಕ್ನಿಂದ ಹೊಸ ಅಸ್ತ್ರ