
ನವದೆಹಲಿ, ಏಪ್ರಿಲ್ 29: ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ (Mark Carney) ನೇತೃತ್ವದ ಲಿಬರಲ್ ಪಕ್ಷವು ಕೆನಡಾ ಚುನಾವಣೆಯಲ್ಲಿ (Canada Elections 2025) ಐತಿಹಾಸಿಕ ಗೆಲುವು ಸಾಧಿಸಿದೆ. ಪಿಯರೆ ಪೊಯ್ಲಿವ್ರೆ ನೇತೃತ್ವದ ಕನ್ಸರ್ವೇಟಿವ್ ಪಕ್ಷವನ್ನು ಸೋಲಿಸಿರುವ ಮಾರ್ಕ್ ಕಾರ್ನಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳ ವಿರುದ್ಧ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. 60 ವರ್ಷದ ಕಾರ್ನಿ ಎಂದಿಗೂ ಚುನಾಯಿತ ಹುದ್ದೆಯನ್ನು ಅಲಂಕರಿಸಿಲ್ಲ. ಕಳೆದ ತಿಂಗಳು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ರಾಜೀನಾಮೆ ನೀಡಿದ ನಂತರ ಮಾರ್ಕ್ ಕಾರ್ನಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಇಂದು ಚುನಾವಣೆಯಲ್ಲಿಐತಿಹಾಸಿಕ ಗೆಲುವು ಸಾಧಿಸಿದ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರನ್ನು ಅಭಿನಂದಿಸಿದ್ದಾರೆ. ಒಟ್ಟಾವಾದ ವ್ಯಾಪಾರ ವೈವಿಧ್ಯೀಕರಣ ಯೋಜನೆಗಳನ್ನು ವೈವಿಧ್ಯಗೊಳಿಸುವ ತನ್ನ ಆಕಾಂಕ್ಷೆಗಳಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪರಿಗಣಿಸಿರುವ ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ, ಈ ಚುನಾವಣೆಯಲ್ಲಿ ಗೆದ್ದರೆ ಭಾರತದೊಂದಿಗೆ ಸಂಬಂಧಗಳನ್ನು ಗಟ್ಟಿಗೊಳಿಸುವುದಾಗಿ ಘೋಷಿಸಿದ್ದರು.
BREAKING: “If I become PM, will rebuild ties with India”, says Canada’s likely new Prime Minister Mark Carney pic.twitter.com/zwWwHhHFRB
— Shashank Mattoo (@MattooShashank) March 6, 2025
ಇದನ್ನೂ ಓದಿ: ಕೆನಡಾದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಗುಂಡೇಟಿನಿಂದ ಸಾವು; ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬದ ಆಗ್ರಹ
ಮಾರ್ಕ್ ಕಾರ್ನಿ ಅವರಿಗೆ ಎಕ್ಸ್ ಮೂಲಕ ಅಭಿನಂದನೆಗಳನ್ನು ಕೋರಿರುವ ಪ್ರಧಾನಿ ಮೋದಿ, “ಎರಡೂ ರಾಷ್ಟ್ರಗಳ ಜನರಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯಲು ಎದುರು ನೋಡುತ್ತಿದ್ದೇನೆ. ಭಾರತ ಮತ್ತು ಕೆನಡಾಗಳು ಹಂಚಿಕೆಯ ಪ್ರಜಾಪ್ರಭುತ್ವ ಮೌಲ್ಯಗಳು, ಕಾನೂನಿನ ನಿಯಮಕ್ಕೆ ದೃಢವಾದ ಬದ್ಧತೆ ಮತ್ತು ಜನರಿಂದ ಜನರಿಗೆ ಇರುವ ಸಂಬಂಧಗಳನ್ನು ಹೊಂದಿವೆ. ನಮ್ಮ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ನಮ್ಮ ಜನರಿಗೆ ಹೆಚ್ಚಿನ ಅವಕಾಶಗಳನ್ನು ತೆರೆಯಲು ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಎಕ್ಸ್ ನಲ್ಲಿ ಮೋದಿ ಪೋಸ್ಟ್ ಮಾಡಿದ್ದಾರೆ. ಟ್ರುಡೋ ಅಧಿಕಾರಾವಧಿಯಲ್ಲಿ ಭಾರತ ಮತ್ತು ಕೆನಡಾ ನಡುವಿನ ಸಂಬಂಧ ಹದಗೆಟ್ಟಿತ್ತು.
Congratulations @MarkJCarney on your election as the Prime Minister of Canada and to the Liberal Party on their victory. India and Canada are bound by shared democratic values, a steadfast commitment to the rule of law, and vibrant people-to-people ties. I look forward to working…
— Narendra Modi (@narendramodi) April 29, 2025
ಇದನ್ನೂ ಓದಿ: ಪಹಲ್ಗಾಮ್ ದಾಳಿ: ವಿಶೇಷ ಅಧಿವೇಶನ ಕರೆಯುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದ ಮಲ್ಲಿಕಾರ್ಜುನ ಖರ್ಗೆ, ರಾಹುಲ್
2023ರ ಆರಂಭದಲ್ಲಿ ಖಲಿಸ್ತಾನಿ ಪರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತೀಯ ಏಜೆಂಟರನ್ನು ಸಂಬಂಧಿಸಿರುವುದಾಗಿ ಟ್ರುಡೊ ಹೌಸ್ ಆಫ್ ಕಾಮನ್ಸ್‌ನಲ್ಲಿ ಹೇಳಿಕೆ ನೀಡಿದ್ದರು. ಭಾರತ ಸರ್ಕಾರ ಈ ಹೇಳಿಕೆಯನ್ನು ತಿರಸ್ಕರಿಸಿತ್ತು. ಅಕ್ಟೋಬರ್ 2023ರಲ್ಲಿ ಕೆನಡಾ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಮತ್ತು ಇತರ 5 ಭಾರತೀಯ ರಾಜತಾಂತ್ರಿಕರನ್ನು ಹೊರಹಾಕಿತು. ಅದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಕೂಡ 6 ಕೆನಡಾದ ರಾಜತಾಂತ್ರಿಕರನ್ನು ಹೊರಹಾಕಿತು. ಚುನಾವಣೆಯ ವೇಳೆ ಭಾರತ ಮತ್ತು ಕೆನಡಾ ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ‘ಅತ್ಯಂತ ಮುಖ್ಯ’ ಎಂದು ಬಣ್ಣಿಸುವ ಮೂಲಕ ಮಾರ್ಕ್ ಕಾರ್ನಿ ಭಾರತ-ಕೆನಡಾ ಸಂಬಂಧಗಳ ಪುನರ್‌ಸ್ಥಾಪನೆಯ ಸೂಚನೆ ನೀಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:20 pm, Tue, 29 April 25