AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆನಡಾದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಹರ್​ಸಿಮ್ರತ್ ರಾಂಧಾವಾ ಸಾವು

ಕೆನಡಾದ ಹ್ಯಾಮಿಲ್ಟನ್ ಅಪ್ಪರ್ ಜೇಮ್ಸ್ ಮತ್ತು ಸೌತ್ ಬೆಂಡ್ ರಸ್ತೆ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಅಮಾಯಕ ಭಾರತೀಯ ವಿದ್ಯಾರ್ಥಿನಿ ಮೃಪಟ್ಟಿದ್ದಾಳೆ. ಬಸ್ಸು ನಿಲ್ದಾಣದಲ್ಲಿ ಆಕೆ ಬಸ್ಸಿಗೆ ಕಾಯುತ್ತಿದ್ದ ವೇಳೆ ಅಪರಿಚಿತರು ನಡೆಸಿದ ಗುಂಡಿನ ಚಕಮಕಿಯಲ್ಲಿ ಗುಂಡು ತಗುಲಿ ಸಾವನ್ನಪ್ಪಿದ್​ದಾಳೆ. ಘಟನೆ ಬಗ್ಗೆ ಅಲ್ಲಿನ ಪೊಲೀಸರು ಹಾಗೂ ಭಾರತೀಯ ರಾಯಭಾರ ಕಚೇರಿ ನೀಡಿದ ಮಾಹಿತಿ ಇಲ್ಲಿದೆ.

ಕೆನಡಾದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಹರ್​ಸಿಮ್ರತ್ ರಾಂಧಾವಾ ಸಾವು
ಕೆನಡಾದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಹರ್​ಸಿಮ್ರತ್ ರಾಂಧಾವಾ ಸಾವು
Follow us
Ganapathi Sharma
|

Updated on: Apr 19, 2025 | 11:40 AM

ನವದೆಹಲಿ, ಏಪ್ರಿಲ್ 19: ಕೆನಡಾದಲ್ಲಿ (Canda) ನಡೆದ ಗುಂಡಿನ ದಾಳಿಯೊಂದರಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ (Indian Student) ಮೃತಪಟ್ಟಿದ್ದಾರೆ. ಅಪರಿಚಿತರ ನಡುವೆ ನಡೆದ ಗುಂಡಿನ ದಾಳಿಯ ವೇಳೆ ಅಕಸ್ಮಾತಾಗಿ ಗುಂಡು ತಗುಲಿ, ಭಾರತೀಯ ವಿದ್ಯಾರ್ಥಿನಿ ಹರ್​ಸಿಮ್ರತ್ ರಾಂಧಾವಾ (Harsimrat Randhawa) ಅನ್ಯಾಯವಾಗಿ ಮೃತಪಟ್ಟಿದ್ದಾರೆ. ಒಂಟೋರಿಯೋದ ಹ್ಯಾಮಿಲ್ಟನ್​​ನಲ್ಲಿರುವ ಮೊಹಾಕ್ ಕಾಲೇಜಿನಲ್ಲಿ ಅಧ್ಯಯನ ನಡೆಸುತ್ತಿದ್ದ ಹರ್​ಸಿಮ್ರತ್ ರಾಂಧಾವಾ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಭಾರತೀಯ ವಿದ್ಯಾರ್ಥಿನಿಯ ಸಾವಿನಿಂದ ಬಹಳ ದುಃಖವಾಗಿದೆ ಎಂದು ಟೊರೆಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿದೆ.

ಕೆನಡಾ ಪೊಲೀಸರು ಹೇಳಿದ್ದೇನು?

ಸ್ಥಳಿಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಗುಂಡಿನ ದಾಳಿ ಪ್ರಕರಣದಲ್ಲಿ ಭಾರತೀಯ ವಿದ್ಯಾರ್ಥಿನಿ ಅಮಾಯಕಳಾಗಿದ್ದಾಳೆ. ಎರಡು ವಾಹನಗಳ ಸವಾರರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದಾಳೆ. ವಿದ್ಯಾರ್ಥಿನಿ ಸಾವಿನ ಮತ್ತು ಗುಂಡಿನ ದಾಳಿಯ ಸಂಬಂಧ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ
Image
ಜಾಫರ್ ಎಕ್ಸ್ ಪ್ರೆಸ್ ರೈಲ್ ಹೈಜಾಕ್ ಎಂದು 2022ರ ವಿಡಿಯೋ ವೈರಲ್
Image
ಪಾಕಿಸ್ತಾನದ ರೈಲು ಹೈಜಾಕ್; ಉಗ್ರರಿಂದ 50 ಒತ್ತೆಯಾಳುಗಳ ಹತ್ಯೆ
Image
ವಿಮಾನ ಹೈಜಾಕ್​ಗಳ ಬಗ್ಗೆ ಬಾಲಿವುಡ್​ನಲ್ಲಿ ಬಂದ ಸಿನಿಮಾಗಳಿವು
Image
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ

ನಾವು ವಿಧ್ಯಾರ್ಥಿನಿಯ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದೇವೆ. ಅವರಿಗೆ ಎಲ್ಲ ರೀತಿಯ ನೆರವು ನೀಡಲಾಗುವುದು. ಈ ಕಷ್ಟದ ಸಮಯದಲ್ಲಿ ಅವರ ಜೊತೆಗೆ ನಾವಿದ್ದೇವೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ಹ್ಯಾಮಿಲ್ಟನ್​ನಲ್ಲಿ ನಡೆದಿತ್ತು ಗುಂಡಿನ ಚಕಮಕಿ

ಹ್ಯಾಮಿಲ್ಟನ್ ಅಪ್ಪರ್ ಜೇಮ್ಸ್ ಮತ್ತು ಸೌತ್ ಬೆಂಡ್ ರಸ್ತೆ ಬಳಿ ಬುಧವಾರ ಸಂಜೆ 7.30 ರ ಸುಮಾರಿಗೆ ಗುಂಡಿನ ದಾಳಿ ನಡೆದ ಬಗ್ಗೆ ವರದಿಯಾಯಿತು. ತಕ್ಷಣವೇ ಸ್ಥಳಕ್ಕೆ ತೆರಳಿದ್ದೆವು. ಅಲ್ಲಿ ಭಾರತೀಯ ವಿದ್ಯಾರ್ಥಿನಿ ಗಾಯಗೊಂಡಿರುವುದು ಕಂಡುಬಂತು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನ ಹೈಜಾಕ್ ಮಾಡಲು ಹೋಗಿ ಪ್ರಯಾಣಿಕನ ಗುಂಡೇಟಿಗೆ ಬಲಿಯಾದ ದಾಳಿಕೋರ

ಘಟನಾ ಸ್ಥಳದಿಂದ ದೊರೆತ ಸಿಸಿಟಿವಿ ವಿಡಿಯೋ ಪ್ರಕಾರ, ಕಪ್ಪು ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಬಿಳಿ ಕಾರೊಂದರಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ್ದಾನೆ. ಆಗ ನಡೆದ ಗುಂಡಿನ ಚಿಕಮಕಿಯಲ್ಲಿ ಸಮೀಪದ ಕೆಲವು ಮನೆಗಳ ಕಿಟಕಿಗಳಿಗೆ ಕೂಡ ಗುಂಡು ತಗುಲಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್, ಬೇರೆ ಯಾರಿಗೂ ಏನು ಗಾಯಗಳು ಅಥವಾ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್​ ಸಿಂಧೂರ್: ಭಾರತ ವಿವೇಕಯುತದಿಂದ ಹೆಜ್ಜೆ ಇಟ್ಟಿದೆ, ​ಗುರೂಜಿ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಆಪರೇಷನ್ ಸಿಂಧೂರ್: ಮೋದಿಯ ನಾಯಕತ್ವವ ಕೊಂಡಾಡಿದ ತಾರಾ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸರ್ಕಾರದ ನಿರ್ಧಾರ ಸರಿ ಇದೆ: ಆಪರೇಷನ್ ಸಿಂಧೂರ್ ಬಗ್ಗೆ ಶಿವಣ್ಣ ಪ್ರತಿಕ್ರಿಯೆ
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಸೇನೆ ಮತ್ತು ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು: ಮುತಾಲಿಕ್
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ಪಾಕಿಸ್ತಾನ ನಾಶವಾಗಬೇಕು; ಕರ್ನಲ್ ಸೋಫಿಯಾ ಖುರೇಷಿ ತಂದೆಯ ಭಾವುಕ ನುಡಿಯಿದು
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಸರ್ಕಾರ ಮತ್ತು ಪಕ್ಷ ಕೇಂದ್ರ ಸರ್ಕಾರದೊಂದಿಗಿವೆ: ಶಿವಕುಮಾರ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ಕೊಂದಿದ್ದೇವೆ; ರಾಜನಾಥ್ ಸಿಂಗ್
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...
ಆಪರೇಷನ್ ಸಿಂಧೂರ: ನಟ ಪ್ರೇಮ್ ಪ್ರತಿಕ್ರಿಯೆ ಹೀಗಿತ್ತು...