ವಿಮಾನ ಹೈಜಾಕ್ಗಳ ಬಗ್ಗೆ ಬಾಲಿವುಡ್‌ನಲ್ಲಿ ಬಂದ ಸಿನಿಮಾಗಳಿವು
1999ರ ವಿಮಾನ ಅಪಹರಣದ ಕುರಿತು ವೆಬ್ ಸರಣಿಯೊಂದು ಇತ್ತೀಚೆಗೆ ಬಿಡುಗಡೆ ಆಗಿದೆ. ಅನುಭವ್ ಸಿನ್ಹಾ ಅವರ ವೆಬ್ ಸರಣಿ ವಿವಾದ ಸೃಷ್ಟಿಸಿದೆ. ಉಗ್ರಗಾಮಿಗಳಿಗೆ ನಿಜವಾದ ಹೆಸರು ನೀಡದೆ ಹಿಂದೂಗಳ ಹೆಸರನ್ನು ಕೊಡಲಾಗಿತ್ತು.
ಬಾಲಿವುಡ್‌ನಲ್ಲಿ ಈಗಾಗಲೇ ಹೈಜಾಕ್ಗೆ ಸಂಬಂಧಿಸಿದ ಕೆಲವು ಸಿನಿಮಾಗಳು ತಯಾರಾಗಿವೆ. ಇದರಲ್ಲಿ ಬಹುತೇಕವು ನೈಜ ಕಥೆಯನ್ನು ಆಧರಿಸಿದೆ. ಪ್ರಸ್ತುತ ನೆಟ್ಫ್ಲಿಕ್ಸ್ನಲ್ಲಿ ಪ್ರಸಾರ ಕಂಡ ‘IC 814 ಕಂದಹಾರ್ ಹೈಜಾಕ್’ ಸರಣಿ ವಿವಾದ ಸೃಷ್ಟಿಸಿದೆ. ಈ ಸರಣಿ IC 814 ವಿಮಾನ ಹೈಜಾಕ್ ಕಥೆಯನ್ನು ಆಧರಿಸಿದೆ. ಈ ಮೊದಲು ಹೈಜಾಕ್ ಮೇಲೆ ಎಷ್ಟೋ ಚಿತ್ರಗಳು ತಯಾರಾಗಿವೆ. ಅದರ ಬಗ್ಗೆ ತಿಳಿಯಿರಿ.
‘IC 814 ಕಂದಹಾರ್ ಹೈಜಾಕ್’
1999ರ ವಿಮಾನ ಅಪಹರಣದ ಕುರಿತು ವೆಬ್ ಸರಣಿಯೊಂದು ಇತ್ತೀಚೆಗೆ ಬಿಡುಗಡೆ ಆಗಿದೆ. ಅನುಭವ್ ಸಿನ್ಹಾ ಅವರ ವೆಬ್ ಸರಣಿ ವಿವಾದ ಸೃಷ್ಟಿಸಿದೆ. ಉಗ್ರಗಾಮಿಗಳಿಗೆ ನಿಜವಾದ ಹೆಸರು ನೀಡದೆ ಹಿಂದೂಗಳ ಹೆಸರನ್ನು ಕೊಡಲಾಗಿತ್ತು.
‘ಬೆಲ್ ಬಾಟಂ’
ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಮ್ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. 1980 ರಲ್ಲಿ ನಡೆದ ವಿಮಾನ ಅಪಹರಣದ ಕಥೆಯನ್ನು ಆಧರಿಸಿದೆ. ಚಿತ್ರದಲ್ಲಿ ಅಕ್ಷಯ್ ಕುಮಾರ್, ಲಾರಾ ದತ್ತ, ವಾಣಿ ಕಪೂರ್, ಜೈನ್ ಖಾನ್ ದುರಾನಿ, ಮೊಮಿತಾ ಮೊಯಿತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನೀವು ಈ ಸಿನಿಮಾನ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಬಹುದು.
ನೀರ್ಜಾ
ಸೋನಂ ಕಪೂರ್ ಅಭಿನಯದ ನೀರ್ಜಾ ಚಿತ್ರವು ನೀರಜಾ ಭಾನೋಟ್ ಅವರ ಜೀವನವನ್ನು ಆಧರಿಸಿದೆ. 1986ರಲ್ಲಿ ಕರಾಚಿಯಿಂದ ಪ್ಯಾನ್ ಆಮ್ ಫ್ಲೈಟ್ 73ರಲ್ಲಿ 359 ಪ್ರಯಾಣಿಕರ ಜೀವಗಳನ್ನು ಉಳಿಸಲು ಅವರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಸೋನಂ ಕಪೂರ್, ಶಬಾನಾ ಅಜ್ಮಿ, ಯೋಗೇಂದ್ರ ಟಿಕೆ, ಶೇಖರ್ ರವಿಜಾನಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾನ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: ಬಟ್ಟೆಗಳಿಗಾಗಿ ವರ್ಷಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಾರೆ ನಟಿ ಸೋನಂ ಕಪೂರ್
‘ಹೈಜಾಕ್’
2008 ರಲ್ಲಿ ಬಿಡುಗಡೆಯಾದ ‘ಹೈಜಾಕ್’ ಸಿನಿಮಾ ಶೈನಿ ಅಹುಜಾ, ಇಶಾ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೃನಾಲ್ ಶಿವದಾಸನಿ ನಿರ್ದೇಶನದ ಈ ಚಿತ್ರವು ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 814ರ ಅಪಹರಣವನ್ನು ಆಧರಿಸಿದೆ. ದುಬೈನಲ್ಲಿ ಕೆಲವು ಭಯೋತ್ಪಾದಕರು ವಿಮಾನವನ್ನು ಹೈಜಾಕ್ ಮಾಡಿದ್ದರು. Netflixನಲ್ಲಿ ಈ ಸಿನಿಮಾ ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.