ಪ್ರತಿ ಸಿಗರೇಟ್ ಮೇಲೆಯೂ ಎಚ್ಚರಿಕೆ ಪ್ರಕಟಿಸಲು ಕೆನಡಾ ಸರ್ಕಾರ ಸೂಚನೆ

ಈ ಲೇಬಲ್‌ಗಳನ್ನು ಪ್ರತ್ಯೇಕ ಸಿಗರೇಟ್‌ಗಳು, ಸಣ್ಣ ಸಿಗಾರ್‌ಗಳು, ಟ್ಯೂಬ್‌ಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಟಿಪ್ಪಿಂಗ್ ಪೇಪರ್‌ನಲ್ಲಿ ಮುದ್ರಿಸಲಾಗುತ್ತದೆ. ಫ್ರೆಂಚ್ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಇದು ಪ್ರಕಟವಾಗಲಿದೆ.

ಪ್ರತಿ ಸಿಗರೇಟ್ ಮೇಲೆಯೂ ಎಚ್ಚರಿಕೆ ಪ್ರಕಟಿಸಲು ಕೆನಡಾ ಸರ್ಕಾರ ಸೂಚನೆ
ಪ್ರಾತಿನಿಧಿಕ ಚಿತ್ರ
Edited By:

Updated on: Jun 01, 2023 | 7:18 PM

2035 ರ ವೇಳೆಗೆ ತಂಬಾಕು (tobacco) ಬಳಕೆಯನ್ನು ಶೇ 5ಕ್ಕಿಂತ ಕಡಿಮೆಗೆ ಕಡಿಮೆ ಮಾಡುವ ಗುರಿಯ ಭಾಗವಾಗಿ, ಕೆನಡಾ ಶೀಘ್ರದಲ್ಲೇ ಪ್ರತಿ ಸಿಗರೇಟ್‌ಗಳ (cigarettes) ಮೇಲೆ ಆರೋಗ್ಯ ಎಚ್ಚರಿಕೆಗಳನ್ನು ಬರೆಯಲು ಕಡ್ಡಾಯಗೊಳಿಸುವ ಶಾಸನವನ್ನು ಘೋಷಿಸಿದೆ. ಇಂಥಾ ನಿರ್ಧಾರ ಕೈಗೊಂಡ ಮೊದಲ ರಾಷ್ಟ್ರವಾಗಿದೆ ಕೆನಡಾ.”ತಂಬಾಕು ಹೊಗೆ ಮಕ್ಕಳಿಗೆ ಹಾನಿ ಮಾಡುತ್ತದೆ.” “ಸಿಗರೇಟ್ ಲ್ಯುಕೇಮಿಯಾವನ್ನು ಉಂಟುಮಾಡುತ್ತದೆ.” “ಪ್ರತಿ ಪಫ್‌ನಲ್ಲಿ ವಿಷ.” -ಕೆನಡಾದಲ್ಲಿ ಮಾರಾಟವಾಗುವ ಪ್ರತಿಯೊಂದು ಸಿಗರೇಟಿನಲ್ಲಿ ಇಂತಹ ಆರೋಗ್ಯ ಎಚ್ಚರಿಕೆಗಳು ಶೀಘ್ರದಲ್ಲೇ ಮುದ್ರಿತವಾಗುತ್ತವೆ.

ಬುಧವಾರ ಕೆನಡಾದ ಆರೋಗ್ಯ ಅಧಿಕಾರಿಗಳು ಹೊರಡಿಸಿದ ಪ್ರಕಟಣೆ ಪ್ರಕಾರ ತಂಬಾಕು ಉತ್ಪನ್ನಗಳ ಗೋಚರತೆ, ಪ್ಯಾಕೇಜಿಂಗ್ ಮತ್ತು ಲೇಬಲಿಂಗ್ ನಿಯಮಗಳು ಕೆನಡಾ ಸರ್ಕಾರದ ಮುಂದುವರಿದ ಪ್ರಯತ್ನಗಳ ಭಾಗವಾಗಿದೆ ಧೂಮಪಾನವನ್ನು ತ್ಯಜಿಸುವ ವಯಸ್ಕರಿಗೆ ಸಹಾಯ ಮಾಡಲು, ಯುವಕರು ಮತ್ತು ತಂಬಾಕು ಬಳಕೆಯಿಂದ ದೂರವಿರಿಸಲು, ನಿಕೋಟಿನ್ ಚಟ, ಮತ್ತು ತಂಬಾಕಿನ ಆಕರ್ಷಣೆಯನ್ನು ಮತ್ತಷ್ಟು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಈ ಲೇಬಲ್‌ಗಳನ್ನು ಪ್ರತ್ಯೇಕ ಸಿಗರೇಟ್‌ಗಳು, ಸಣ್ಣ ಸಿಗಾರ್‌ಗಳು, ಟ್ಯೂಬ್‌ಗಳು ಮತ್ತು ಇತರ ತಂಬಾಕು ಉತ್ಪನ್ನಗಳ ಟಿಪ್ಪಿಂಗ್ ಪೇಪರ್‌ನಲ್ಲಿ ಮುದ್ರಿಸಲಾಗುತ್ತದೆ. ಫ್ರೆಂಚ್ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಇದು ಪ್ರಕಟವಾಗಲಿದೆ.

ಸರ್ಕಾರದ ಪ್ರಕಾರ, ಇಂತಹ ಪ್ರಯತ್ನವು ಧೂಮಪಾನಿಗಳಿಗೆ ಆರೋಗ್ಯ ಎಚ್ಚರಿಕೆಗಳನ್ನು ಪಡೆಯುವುದರಿಂದ ತಪ್ಪಿಸಿಕೊಳ್ಳಲು ಕಷ್ಟವಾಗುತ್ತದೆ. ಹೊಸ ನಿಯಮಾವಳಿಗಳನ್ನು ಹಂತಹಂತವಾಗಿ ಜಾರಿಗೆ ತರಲಾಗಿದ್ದರೂ, ಇದು ಆಗಸ್ಟ್ 1 ರಿಂದ ಜಾರಿಗೆ ಬರಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: HMPV Virus: ಅಮೆರಿಕದಲ್ಲಿ ಹರಡುತ್ತಿದೆ ಎಚ್​​​ಎಂಪಿವಿ ವೈರಸ್; ಏನಿದರ ರೋಗ ಲಕ್ಷಣ?, ಮುಂಜಾಗ್ರತಾ ಕ್ರಮ ಬಗ್ಗೆ ಇಲ್ಲಿದೆ ಮಾಹಿತಿ

ಕಿಂಗ್-ಸೈಜ್ ಸಿಗರೇಟ್‌ಗಳು ಮೊದಲು ಜುಲೈ 2024 ರ ಅಂತ್ಯದ ವೇಳೆಗೆ ವೈಯಕ್ತಿಕ ಎಚ್ಚರಿಕೆಗಳನ್ನು ಹೊಂದಿರುತ್ತದೆ, ನಂತರ ಸಾಮಾನ್ಯ ಗಾತ್ರದ ಸಿಗರೇಟ್ ಮತ್ತು ಇತರ ಉತ್ಪನ್ನಗಳು ಏಪ್ರಿಲ್ 2025 ರ ಅಂತ್ಯದ ವೇಳೆಗೆ, ಇಂಥಾ ಎಚ್ಚರಿಕೆಯೊಂದಿಗೆ ಬರಲಿದೆ. ತಂಬಾಕು ಉತ್ಪನ್ನ ಪ್ಯಾಕೇಜ್‌ಗಳನ್ನು ಮಾರಾಟ ಮಾಡುವ ಚಿಲ್ಲರೆ ವ್ಯಾಪಾರಿಗಳು ಏಪ್ರಿಲ್ 2024 ರ ಅಂತ್ಯದ ವೇಳೆಗೆ ಹೊಸ ಎಚ್ಚರಿಕೆಗಳನ್ನು ಸೇರಿಸಬೇಕಾಗುತ್ತದೆ.

ಕೆನಡಿಯನ್ ಕ್ಯಾನ್ಸರ್ ಸೊಸೈಟಿ, ಕೆನಡಿಯನ್ ಲಂಗ್ ಅಸೋಸಿಯೇಷನ್, ಮತ್ತು ಹಾರ್ಟ್ ಅಂಡ್ ಸ್ಟ್ರೋಕ್ ಫೌಂಡೇಶನ್ ಸೇರಿದಂತೆ ಆರೋಗ್ಯ-ಸಂಬಂಧಿತ ಸಂಸ್ಥೆಗಳು ನಿರ್ಧಾರವನ್ನು ಶ್ಲಾಘಿಸಿವೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ