Amazon: ಲೇ ಆಫ್, ವರ್ಕ್ ಫ್ರಂ ಆಫೀಸ್, ಕ್ಲೈಮೇಟ್ ಭೂತಕ್ಕೆ ಎದುರಾಗಿ ಅಮೇಜಾನ್ ಉದ್ಯೋಗಿಗಳಿಂದ ವಾಕೌಟ್; ಅಮೆರಿಕದ ಸಿಯಾಟಲ್​ನಲ್ಲೊಂದು ಕುತೂಹಲಕಾರಿ ಬೆಳವಣಿಗೆ

Employees Protest In US: ಅಮೇಜಾನ್ ಉದ್ಯೋಗಿಗಳ ಪ್ರತಿಭಟನೆಗೆ ಕಿಚ್ಚು ಹಚ್ಚಿದ್ದು ಎಇಸಿಜೆ ಎಂಬ ಗುಂಪು. ಈ ಗುಂಪಿನಲ್ಲಿರುವ ಅಮೇಜಾನ್ ಉದ್ಯೋಗಿಗಳು ಕಂಪನಿಯ ಕ್ಲೈಮೇಟ್ ನೀತಿ ವಿರುದ್ದ ರೂಪಿಸಿದ ಹೋರಾಟಕ್ಕೆ ಇತರ ಹಲವು ಉದ್ಯೋಗಿಗಳೂ ಜೋಡಿಸಿದ್ದಾರೆ.

Amazon: ಲೇ ಆಫ್, ವರ್ಕ್ ಫ್ರಂ ಆಫೀಸ್, ಕ್ಲೈಮೇಟ್ ಭೂತಕ್ಕೆ ಎದುರಾಗಿ ಅಮೇಜಾನ್ ಉದ್ಯೋಗಿಗಳಿಂದ ವಾಕೌಟ್; ಅಮೆರಿಕದ ಸಿಯಾಟಲ್​ನಲ್ಲೊಂದು ಕುತೂಹಲಕಾರಿ ಬೆಳವಣಿಗೆ
ಅಮೇಜಾನ್ ಉದ್ಯೋಗಿಗಳ ವಾಕೌಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2023 | 1:49 PM

ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರದಲ್ಲಿ ನಿನ್ನೆ (ಮೇ 31) ಹೆಚ್ಚೂಕಡಿಮೆ 2000ದಷ್ಟು ಅಮೇಜಾನ್ ಉದ್ಯೋಗಿಗಳು ಕೆಲಸದಿಂದ ವಾಕೌಟ್ ಮಾಡಿದ ಘಟನೆ ವರದಿಯಾಗಿದೆ. ಇವರು ವಾಕೌಟ್ ಮಾಡಿ ಬೀದಿಗಿಳಿದು ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇಷ್ಟಕ್ಕೇ ನಿಲ್ಲದೆ ಜಾಗತಿಕವಾಗಿ ತಮ್ಮ ಪ್ರತಿಭಟನೆ ಹರಡುವುದಾಗಿ ಈ ಅಮೇಜಾನ್ ಉದ್ಯೋಗಿಗಳು ಪಣ ತೊಟ್ಟಿದ್ದಾರೆ. ಅಮೇಜಾನ್ ಉದ್ಯೋಗಿಗಳ ಈ ಕೋಪಕ್ಕೆ ಕುತೂಹಲ ಎನಿಸುವ ಕಾರಣಗಳಿವೆ. ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ, ಈ ಪ್ರತಿಭಟನಾನಿರತ ಉದ್ಯೋಗಿಗಳಿಗೆ ಎರಡು ಪ್ರಮುಖ ಅಸಮಾಧಾನಗಳಿವೆ. ಒಂದು, ವರ್ಕ್ ಫ್ರಂ ಆಫೀಸ್ ಅನ್ನು ಕಡ್ಡಾಯಗೊಳಿಸಿದ್ದು. ಇನ್ನೊಂದು, ಉದ್ಯೋಗಕಡಿತವನ್ನು ಎಗ್ಗಿಲ್ಲದೇ ನಡೆಸುತ್ತಿರುವುದು.

ಅಮೇಜಾನ್ ಉದ್ಯೋಗಿಗಳ ಪ್ರತಿಭಟನೆಗೆ ಕಿಚ್ಚು ಹಚ್ಚಿದ್ದು ಎಇಸಿಜೆ ಎಂಬ ಗುಂಪು. ಅಮೇಜಾನ್ ಎಂಪ್ಲಾಯೀಸ್ ಫಾರ್ ಕ್ಲೈಮೇಟ್ ಜಸ್ಟೀಸ್ ಎಂಬ ಈ ಗುಂಪಿನಲ್ಲಿರುವ ಅಮೇಜಾನ್ ಉದ್ಯೋಗಿಗಳು ಕಂಪನಿಯ ಕ್ಲೈಮೇಟ್ ನೀತಿ ವಿರುದ್ದ ರೂಪಿಸಿದ ಹೋರಾಟಕ್ಕೆ ಇತರ ಹಲವು ಉದ್ಯೋಗಿಗಳೂ ಜೋಡಿಸಿದ್ದಾರೆ. ಇದರ ಪರಿಣಾಮವಾಗಿ 1900ಕ್ಕೂ ಹೆಚ್ಚು ಅಮೇಜಾನ್ ಉದ್ಯೋಗಿಗಳು ಪ್ರತಿಭಟನೆಗೆ ಕೈಜೋಡಿಸಿದ್ದಾರೆ.

ಇದನ್ನೂ ಓದಿRecord: ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಹಾರಧಾನ್ಯ ಸಂಗ್ರಹ ಯೋಜನೆಗೆ ಕೇಂದ್ರ ಅನುಮೋದನೆ

ಅಮೇಜಾನ್ ಉದ್ಯೋಗಿಗಳ ವಾಕೌಟ್ ಹಿಂದೆ ಕ್ಲೈಮೇಟ್ ಭೂತ

ಇಲ್ಲಿ ಹವಾಮಾನ ವಿಚಾರ ಯಾಕೆ ಬಂತು ಎಂಬುದು ಕುತೂಹಲ. ಹವಾಮಾನ ಬದಲಾವಣೆ ಸಮಸ್ಯೆ ನಿವಾರಿಸಬೇಕಾದರೆ ಕಂಪನಿಗಳ ಕಾರ್ಯಾಚರಣೆ ಮಾಲಿನ್ಯ ಮುಕ್ತವಾಗಿರಬೇಕೆಂಬ ನಿಯಮ ಇದೆ. ಅದರೆ, ಅಮೇಜಾನ್ ಸಂಸ್ಥೆ ಈ ನಿಟ್ಟಿನಲ್ಲಿ ನಿಗಾ ವಹಿಸುತ್ತಿಲ್ಲ ಎಂದು ಈ ಉದ್ಯೋಗಿಗಳು ದೂರುತ್ತಿದ್ದಾರೆ. ಮನೆಯಿಂದ ಕೆಲಸ ಮಾಡುತ್ತಿದ್ದವರನ್ನು ಕಚೇರಿಗೆ ಬರಲು ಹೇಳುವ ಮೂಲಕ ವಾಹನ ಸಂಚಾರ ಹೆಚ್ಚುವಂತಾಗಿದೆ. ಇದಕ್ಕೆ ಕಂಪನಿಯೇ ಹೊಣೆ ಎಂಬುದು ಎಇಸಿಜೆ ಆರೋಪ.

ಲೇ ಆಫ್​ನಿಂದ ಭಯಭೀತರಾದ ಉದ್ಯೋಗಿಗಳು

ಅಮೇಜಾನ್ ಕಳೆದ 1 ವರ್ಷದಿಂದ 27,000 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದೆ. ಯಾರಿಗೆ ಯಾವಾಗ ಕೆಲಸ ಹೋಗುತ್ತೋ ಎನ್ನುವ ಭೀತಿ ಆವರಿಸಿದೆ. ಎರಡು ವರ್ಷದಿಂದ ಮನೆಯಿಂದ ಕೆಲಸ ಮಾಡುತ್ತಿದ್ದವರನ್ನು ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳುತ್ತಿದ್ದಾರೆ. ಇದರಿಂದ ಮನೆ ಬದಲಾಯಿಸಬೇಕು, ಅಥವಾ ಕಚೇರಿ ಸಮೀಪ ಮನೆ ಮಾಡಬೇಕು. ಮನೆ ಬದಲಾಯಿಸಿದರೆ ಕಂಪನಿಯಲ್ಲಿ ಕೆಲಸ ಉಳಿಯುತ್ತಾ ಇಲ್ಲವಾ ಎಂಬ ಅನುಮಾನ. ಇಂಥ ಪರಿಸ್ಥಿತಿಯಲ್ಲಿ ಕಚೇರಿಯಲ್ಲಿ ಸಮಾಧಾನದಿಂದ ಕೆಲಸ ಮಾಡಲು ಹೇಗೆ ಸಾಧ್ಯ ಎಂಬುದು ಪ್ರತಿಭಟನಾನಿರತ ಅಮೇಜಾನ್ ಉದ್ಯೋಗಿಗಳ ಪ್ರಶ್ನೆ.

ಇದನ್ನೂ ಓದಿ7th Pay Commission: ಸರ್ಕಾರಿ ನೌಕರರಿಗೆ ಈ ಬಾರಿ ಡಬಲ್ ಧಮಾಕ; ಡಿಎ ಜೊತೆಗೆ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಹೆಚ್ಚಳ ಸಾಧ್ಯತೆ

ಅಮೇಜಾನ್ ಸಮಜಾಯಿಷಿ ನೀಡುವುದು ಇದು….

ತನ್ನಿಂದ ಪರಿಸರಕ್ಕೆ ಹಾನಿಯಾಗುತ್ತಿರವುದನ್ನು ಅಮೇಜಾನ್ ಒಪ್ಪಿಕೊಂಡಿದೆ. ಆದರೆ, ಅಗಾಧ ವ್ಯವಹಾರಗಳಿರುವ ಮತ್ತು ಭಾರೀ ವಿದ್ಯುತ್ ಬಳಸುವ ನಮ್ಮ ಕಂಪನಿ ದಿಢೀರನೇ ಕಾರ್ಬನ್ ಮುಕ್ತವಾಗುವುದು ಕಷ್ಟ. ಅದಕ್ಕೆ ಸಮಯ ತಗುಲುತ್ತದೆ. 2025ರಷ್ಟರಲ್ಲಿ ನೂರು ಪ್ರತಿಶತದಷ್ಟು ಮರುಬಳಕೆ ಶಕ್ತಿ ಬಳಸುವಂತಹ ವ್ಯವಸ್ಥೆಯತ್ತ ನಾವು ಸಾಗುತ್ತಿದ್ದೇವೆ ಎಂದು ಅಮೇಜಾನ್ ವಕ್ತಾರರು ಹೇಳಿದ್ದಾರೆ.

ಇನ್ನು, ವರ್ಕ್ ಫ್ರಂ ಆಫೀಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಅಮೇಜಾನ್ ವಕ್ತಾರರು, ಕಚೇರಿಯಿಂದ ಕೆಲಸ ಮಾಡಿದಾಗ ಹೆಚ್ಚು ಅನುಕೂಲತೆಗಳಿವೆ. ಹೆಚ್ಚು ಸಂಘಟಿತವಾಗಿ ಮತ್ತು ಯೋಜಿತವಾಗಿ ಕೆಲಸಗಳು ಆಗುತ್ತವೆ. ಮನೆಯಿಂದ ಕೆಲಸ ಮಾಡುತ್ತಿದ್ದವರಿಗೆ ಕಚೇರಿಯಲ್ಲಿ ಬಂದು ಕೆಲಸ ಮಾಡಿದಾಗ ಅವರಿಗೆ ನೆರವಾಗುವ ದೊಡ್ಡ ತಂಡಗಳೇ ಕಚೇರಿಯಲ್ಲಿದೆ ಎಂದು ಈ ವಕ್ತಾರರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ