7th Pay Commission: ಸರ್ಕಾರಿ ನೌಕರರಿಗೆ ಈ ಬಾರಿ ಡಬಲ್ ಧಮಾಕ; ಡಿಎ ಜೊತೆಗೆ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಹೆಚ್ಚಳ ಸಾಧ್ಯತೆ

Central Government Employees To See Huge Salary Hike: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ವೇತನ ಹೆಚ್ಚಳದ ಖುಷಿ ಸಿಗಲಿದೆ. ಈ ಬಾರಿ ಡಿಎ ಹೆಚ್ಚಳದ ಜೊತೆಗೆ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಏರಿಕೆ ಆಗಬಹುದು ಎಂದು ವರದಿಗಳು ಹೇಳುತ್ತಿವೆ.

7th Pay Commission: ಸರ್ಕಾರಿ ನೌಕರರಿಗೆ ಈ ಬಾರಿ ಡಬಲ್ ಧಮಾಕ; ಡಿಎ ಜೊತೆಗೆ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಹೆಚ್ಚಳ ಸಾಧ್ಯತೆ
ಸಂಬಳ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2023 | 12:10 PM

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಡಬಲ್ ಧಮಾಕ ಪಡೆಯುವ ಖುಷಿ ಸುದ್ದಿ ಇದೆ. ಬಹಳ ಶೀಘ್ರದಲ್ಲೇ ಕೇಂದ್ರ ಸರ್ಕಾರಿ ನೌಕರರ ಸಂಬಳ ಹೆಚ್ಚಾಗಲಿದೆ. ತುಟ್ಟಿಭತ್ಯೆ (DA- Dearness Allowance) ಮತ್ತು ಫಿಟ್ಮೆಂಟ್ ಫ್ಯಾಕ್ಟರ್ ಎರಡೂ ಕೂಡ ಈ ಬಾರಿ ಹೆಚ್ಚಲಿದೆ ಎಂದು ವರದಿಗಳು ಹೇಳುತ್ತಿವೆ. ಡಿಯರ್ನೆಸ್ ಅಲೋಯನ್ಸ್ ಅಥವಾ ತುಟ್ಟಿಭತ್ಯೆ ಸದ್ಯ ಶೇ. 42ರಷ್ಟಿದೆ. ಈ ಬಾರಿ ಮಾಮೂಲಿಯಂತೆ ಶೇ. 4ರಷ್ಟು ಹೆಚ್ಚಾಗಬಹುದು. ಶೇ. 4ರಷ್ಟು ಹೆಚ್ಚಾದರೆ ಸರ್ಕಾರಿ ನೌಕರರ ಒಟ್ಟು ತುಟ್ಟಿಭತ್ಯೆ ಶೇ. 46ಕ್ಕೆ ಏರಲಿದೆ. ಇದರ ಜೊತೆಗೆ ಬಹಳ ಮುಖ್ಯವೆನಿಸಿರುವ ಫಿಟ್ಮೆಂಟ್ ಫ್ಯಾಕ್ಟರ್ ಕೂಡ ಹೆಚ್ಚುವ ನಿರೀಕ್ಷೆ ಇರುವುದು ಸರ್ಕಾರಿ ನೌಕರರಿಗೆ ಡಬಲ್ ಸಂತಸವಾಗುವುದರಲ್ಲಿ ಅನುಮಾನವಿಲ್ಲ.

ಏನಿದು ಫಿಟ್ಮೆಂಟ್ ಫ್ಯಾಕ್ಟರ್?

ಮೂಲ ವೇತನ ಶ್ರೇಣಿಯನ್ನು ಹೆಚ್ಚಿಸಲು ಇರುವ ಲೆಕ್ಕಾಚಾರವೇ ಫಿಟ್ಮೆಂಟ್ ಫ್ಯಾಕ್ಟರ್. ಒಬ್ಬ ನೌಕರನ ಮೂಲ ವೇತನ ಹಾಗೂ ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಗುಣಿಸಿ ಬರುವ ಮೊತ್ತವು ಅವರ ವೇತನವಾಗಿರುತ್ತದೆ. ಆರನೇ ವೇತನ ಆಯೋಗ ಫಿಟ್ಮೆಂಟ್ ಫ್ಯಾಕ್ಟರ್ 1.86 ಇರಲಿ ಎಂದು ಶಿಫಾರಸು ಮಾಡಿತ್ತು. ಆದರೆ, ಏಳನೇ ವೇತನ ಆಯೋಗ ಜಾರಿಯಾದ ಮೇಲೆ ಫಿಟ್ಮೆಂಟ್ ಫ್ಯಾಕ್ಟರ್ 2.57 ಇದೆ.

ಉದ್ಯೋಗಿಗಳು ಫಿಟ್ಮೆಂಟ್ ಫ್ಯಾಕ್ಟರ್ ಅನ್ನು 3.68ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸುತ್ತಿವೆ. ಸರ್ಕಾರ ಎಷ್ಟು ಹೆಚ್ಚಳ ಮಾಡಬಹುದು ಎಂಬ ಕುತೂಹಲವಂತೂ ಇದೆ. ಸರ್ಕಾರಿ ನೌಕರರ ಒತ್ತಾಯದಷ್ಟು ಫಿಟ್ಮೆಂಟ್ ಫ್ಯಾಕ್ಟರ್ ಹೆಚ್ಚಾದಲ್ಲಿ ಕನಿಷ್ಠ ವೇತನವು 18,000 ರೂ ಇದ್ದದ್ದು 26,000 ರೂಗೆ ಏರಲಿದೆ.

ಇದನ್ನೂ ಓದಿRecord: ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಹಾರಧಾನ್ಯ ಸಂಗ್ರಹ ಯೋಜನೆಗೆ ಕೇಂದ್ರ ಅನುಮೋದನೆ

ಫಿಟ್ಮೆಂಟ್ ಫ್ಯಾಕ್ಟರ್ ಎಣಿಕೆ ಉದಾಹರಣೆ

ಒಬ್ಬ ನೌಕರ ಮೂಲ ವೇತನ 20,000 ರೂ ಇದೆ. 2.57 ಫಿಟ್ಮೆಂಟ್ ಫ್ಯಾಕ್ಟರ್ ಅಳವಡಿಸಿದಾಗ:

20,000 X 2.57 = 51,400 ರೂ

ಅದೇ 3.68ಕ್ಕೆ ಫಿಟ್ಮೆಂಟ್ ಫ್ಯಾಕ್ಟರ್ ಏರಿಕೆಯಾದಾಗ:

20,000 X 3.68 = 73,600 ರೂ

ಇದನ್ನೂ ಓದಿElon Musk: ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಎಲಾನ್ ಮಸ್ಕ್​

ಡಿಎ ಹೆಚ್ಚಳ ಹೇಗೆ?

ಡಿಯರ್ನೆಸ್ ಅಲೋಯನ್ಸ್ ಅಥವಾ ತುಟ್ಟಿಭತ್ಯೆ ಎಂಬುದು ಒಂದು ವರ್ಷದಲ್ಲಿ ಆಗುವ ಬೆಲೆ ಏರಿಕೆಯ ಹೊರೆ ಒಬ್ಬ ಉದ್ಯೋಗಿಗೆ ಆಗದಿರಲಿ ಎಂಬ ಉದ್ದೇಶದಿಂದ ಕಾಲಕಾಲಕ್ಕೆ ಸರ್ಕಾರ ಕೊಡುವ ಭತ್ಯೆಯಾಗಿದೆ. ಅಂದರೆ ಒಂದು ವರ್ಷದಲ್ಲಿ ಶೇ. 8ರಷ್ಟು ಹಣದುಬ್ಬರ ಆಗಿದೆ ಎಂದರೆ ಜೀವನ ವೆಚ್ಚ ಹೆಚ್ಚಿದೆ ಎಂದರ್ಥ. ಹೀಗಾಗಿ, ಪರಿಹಾರವಾಗಿ ಡಿಎ ನೀಡಲಾಗುತ್ತದೆ.

ಕಳೆದ 12 ತಿಂಗಳ ಗ್ರಾಹಕ ಬೆಲೆ ಅನುಸೂಚಿ (Consumer Price Index) ದರದ ಆಧಾರದ ಮೇಲೆ ತುಟ್ಟಿಭತ್ಯೆಯನ್ನು ನಿರ್ಧರಿಸಲಾಗುತ್ತದೆ. ಸದ್ಯ ಶೇ. 42ರಷ್ಟು ಡಿಎ ಅನ್ನು ಕೇಂದ್ರ ಸರ್ಕಾರಿ ನೌಕರರು ಪಡೆಯುತ್ತಿದ್ದಾರೆ. ಅಂದರೆ ಇವರ ವೇತನದ ಶೇ. 42ರಷ್ಟು ಮೊತ್ತ ಹೆಚ್ಚುವರಿಯಾಗಿ ಇವರಿಗೆ ಬರುತ್ತದೆ. ಇವರ ವೇತನ 40,000 ರೂ ಇದ್ದರೆ ಅದಕ್ಕೆ ಶೇ. 42 ಎಂದರೆ 16,800 ರೂನಷ್ಟು ಡಿಎ ಸಿಗುತ್ತದೆ. ಇವರ ವೇತನ 56,800 ರೂ ಆಗುತ್ತದೆ. ಕೇಂದ್ರ ಸರ್ಕಾರ ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಳ ಮಾಡುತ್ತದೆ. ಜನವರಿ ಮತ್ತು ಜುಲೈನಲ್ಲಿ ಇದರ ಏರಿಕೆ ಆಗುತ್ತದೆ. ಜುಲೈನಲ್ಲಿ ಆಗಬಹುದಾದ ಡಿಎ ಬಗ್ಗೆ ಕೆಲ ವಾರಗಳಲ್ಲಿ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು