Elon Musk: ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಎಲಾನ್ ಮಸ್ಕ್
ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್(Elon Musk) ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಮಸ್ಕ್ ಇಂದು ಟೆಕ್ ಜಗತ್ತಿನಲ್ಲಿ ಅತ್ಯಂತ ಮಾನ್ಯತೆ ಪಡೆದ ಮತ್ತು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, 90ರ ದಶಕದಿಂದ ನ್ಯಾಯಯುತವಾದ ಹೋರಾಟ ಮತ್ತು ಸಾಧಿಸುವ ಛಲದಿಂದಾಗಿ ಇಂದು ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್(Elon Musk) ಮತ್ತೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಮಸ್ಕ್ ಇಂದು ಟೆಕ್ ಜಗತ್ತಿನಲ್ಲಿ ಅತ್ಯಂತ ಮಾನ್ಯತೆ ಪಡೆದ ಮತ್ತು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, 90ರ ದಶಕದಿಂದ ನ್ಯಾಯಯುತವಾದ ಹೋರಾಟ ಮತ್ತು ಸಾಧಿಸುವ ಛಲದಿಂದಾಗಿ ಇಂದು ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ. ಸಾಮಾನ್ಯ ವ್ಯಕ್ತಿಗೂ ಅಸಾಮಾನ್ಯನಂತೆ ಬದುಕುವ ಆಯ್ಕೆಯಿದೆ ಎನನ್ನುವ ಒಂದು ಹೇಳಿಕೆಯಿಂದ ಎಲ್ಲರ ಗಮನ ಸೆಳೆದವರು ಎಲಾನ್ ಮಸ್ಕ್.
ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಹುಟ್ಟಿದ ಎಲಾನ್ ಮಸ್ಕ್ ಚಿಕ್ಕವನಿರುವಾಗಲೇ ಅವರ ಅಪ್ಪ ಅಮ್ಮ ವಿಚ್ಛೇದನ ಪಡೆದು ದೂರವಾಗುತ್ತಾರೆ. ನಮ್ಮಪ್ಪ ಒಬ್ಬ ಭಯಾನಕ ಮನುಷ್ಯ ಅಂತ ಹೇಳುತ್ತಲೇ , ಏಕಾಂಗಿಯಾಗಿಯೇ ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾರೆ ಮಸ್ಕ್. ಸಿಕ್ಕಸಿಕ್ಕ ಪುಸ್ತಕಗಳನ್ನು ಓದುತ್ತಾರೆ. ತನ್ನದೇ ಶೈಲಿಯಲ್ಲಿ ಸಂಶೋಧನೆಗಳನ್ನು ಮಾಡುತ್ತಾ ಹೋಗುತ್ತಾರೆ.
ಬೇರೆಯವರು ಹೇಳಿದ್ದನ್ನು ಒಪ್ಪುವುದಿಲ್ಲ, ನಡೆದ ದಾರಿಯಲ್ಲಿ ನಡೆಯುವುದಿಲ್ಲ. ಈಗ ಐವತ್ತರ ಹೊಸ್ತಿಲಲ್ಲಿರುವ ಮಸ್ಕ್ ಕಟ್ಟಿದ ಸಂಸ್ಥೆಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಅವನು ಎದುರಿಸಿರುವ ಮೆಚ್ಚುಗೆ ಮತ್ತು ಟೀಕೆಗಳನ್ನು ಕಂಡಾಗಲೂ ಭಯವಾಗುತ್ತದೆ. ಎಲ್ಲವನ್ನೂ ಮಾಡುತ್ತೇನೆ, ಆದರೆ ನನ್ನ ಶೈಲಿಯಲ್ಲಿಯೇ ಮಾಡುತ್ತೇನೆ. ನನ್ನ ದಾರಿಯೇ ಬೇರೆ ಎಂದವರು ಮಸ್ಕ್.
ಮತ್ತಷ್ಟು ಓದಿ: ‘ನಾಟು ನಾಟು..’ ಇಷ್ಟಪಟ್ಟ ಎಲಾನ್ ಮಸ್ಕ್; ನೂರಾರು ಟೆಸ್ಲಾ ಕಾರಲ್ಲಿ ಲೈಟ್ ಶೋ
ಎಲಾನ್ ಮಸ್ಕ್ ಪ್ರಾರಂಭಿಸಿದ ಮೊದಲ ಯೋಜನೆ ಎಲಾನ್ ಮಸ್ಕ್ ಪ್ರಾರಂಭಸಿದ ಮೊದಲ ಯೋಜನೆ Zip2, ಇದೊಂದು ಸಾಫ್ಟ್‌ವೇರ್ ಕಂಪನಿ. ಅಂತರ್ಜಾಲ ಆಧಾರಿತ ಪ್ಲಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಿತು. ಇದು ಆನ್‌ಲೈನ್ ಸಿಟಿ ಗೈಡ್‌ಗಳನ್ನು ವಿನ್ಯಾಸಗೊಳಿಸುವ ಮೂಲಕ ವೃತ್ತಪತ್ರಿಕೆ ಪ್ರಕಾಶನ ಉದ್ಯಮಕ್ಕೆ ಪ್ರಯೋಜನವನ್ನು ನೀಡಿತು. 1995 ರಲ್ಲಿ ಸ್ಥಾಪನೆಯಾದ ಈ ಕಂಪನಿಯನ್ನು 1999 ರಲ್ಲಿ ಕಾಂಪ್ಯಾಕ್ ಕಂಪ್ಯೂಟರ್ ಖರೀದಿಸಿತು.
ಟೆಸ್ಲಾ ಷೇರು ಏರಿಕೆ ಟೆಸ್ಲಾ ಷೇರುಗಳು ಒಂದು ತಿಂಗಳಲ್ಲಿ 25 ಪ್ರತಿಶತಕ್ಕಿಂತ ಹೆಚ್ಚಿನ ಏರಿಕೆ ಕಂಡಿದೆ. ಈ ಕಾರಣದಿಂದಾಗಿ ಒಂದು ತಿಂಗಳಲ್ಲಿ ಅವರ ಸಂಪತ್ತಿನಲ್ಲಿ 29 ಶತಕೋಟಿ ಡಾಲರ್ನಷ್ಟು ಹೆಚ್ಚಳವಾಗಿದೆ. ಮತ್ತೊಂದೆಡೆ, ಮೇ 31 ರಂದು, ಬರ್ನಾರ್ಡ್ ಅರ್ನಾಲ್ಟ್ ಅವರ ಸಂಪತ್ತು 5.25 ಶತಕೋಟಿಯಷ್ಟು ಕುಸಿತವನ್ನು ಕಂಡಿದೆ ಮತ್ತು ಅವರ ಒಟ್ಟು ಸಂಪತ್ತು 190 ಶತಕೋಟಿಗೆ ಇಳಿದಿದೆ. ಭಾರತೀಯ ಉದ್ಯಮಿಗಳ ಬಗ್ಗೆ ಮಾತನಾಡುತ್ತಾ, ಗೌತಮ್ ಅದಾನಿ ಮತ್ತೆ ಚೀನಾದ ಉದ್ಯಮಿಗಿಂತ ಹಿಂದೆ ಬಿದ್ದಿದ್ದಾರೆ ಮತ್ತು ಈಗ ಅವರು ಏಷ್ಯಾದ ಎರಡನೇ ಶ್ರೀಮಂತ ಉದ್ಯಮಿಯಾಗಿಲ್ಲ.
ಇನ್ನೊಂದೆಡೆ ಸತತ ಎರಡ್ಮೂರು ದಿನಗಳಿಂದ ಅದಾನಿ ಗ್ರೂಪ್ ಕಂಪನಿಗಳ ಷೇರುಗಳ ಕುಸಿತದಿಂದ ಸಂಪತ್ತು ಕೂಡ ಕುಸಿದಿದೆ. ಇದರಿಂದಾಗಿ ಅವರು 18ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಮೇ 31 ರಂದು, ಅವರ ಸಂಪತ್ತಿನಲ್ಲಿ 310 ಮಿಲಿಯನ್ ಡಾಲರ್ ಕುಸಿತ ಕಂಡುಬಂದಿದೆ, ಇದರಿಂದಾಗಿ ಅವರ ಒಟ್ಟು ಸಂಪತ್ತು 61.3 ಶತಕೋಟಿಗೆ ಇಳಿಯಿತು. ಅಂದಹಾಗೆ, ಈ ವರ್ಷ ಅದಾನಿ ಸಂಪತ್ತಿನಲ್ಲಿ 59.3 ಬಿಲಿಯನ್ ಡಾಲರ್ ನಷ್ಟವಾಗಿದೆ. ಮತ್ತೊಂದೆಡೆ ಮುಖೇಶ್ ಅಂಬಾನಿ ಸಂಪತ್ತಿನಲ್ಲೂ ಇಳಿಕೆಯಾಗಿದೆ. ಬುಧವಾರ, ಅವರ ಸಂಪತ್ತಿನಲ್ಲಿ 1.73 ಶತಕೋಟಿ ಡಾಲರ್ ಕುಸಿತ ಕಂಡುಬಂದಿದೆ ಮತ್ತು ಒಟ್ಟು ಸಂಪತ್ತು 84.7 ಶತಕೋಟಿ ಡಾಲರ್ಗೆ ಏರಿದೆ.
2008 ರೋಡ್‌ಸ್ಟರ್ ಮೊದಲ ಉತ್ಪಾದನೆಯ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಕಾರ್ ಆಗಿ ಹೊರಹೊಮ್ಮಿತು.ಈ ಕಾರು ಫೆರಾರಿಗಿಂತ ವೇಗವಾಗಿ ಮತ್ತು ಪ್ರಿಯಸ್ ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಎಲಾನ್ ಸಂದರ್ಶನದ ವೇಳೆ ಹೇಳಿಕೊಂಡಿದ್ದರು.
2020ರ ಹೊತ್ತಿಗೆ ಟೆಸ್ಲಾ ಕಂಪನಿ ಟೊಯೊಟಾವನ್ನು ಹಿಂದಿಕ್ಕಿ ವಿಶ್ವದ ಅತ್ಯಮೂಲ್ಯ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿತು. 2008 ರಲ್ಲಿ ಮಸ್ಕ್‌ನ ಸ್ಪೇಸ್‌ಎಕ್ಸ್ ಕಂಪನಿಯ ಸ್ಥಾಪಿಸಿ ಮೂರು ವಿಫಲ ಉಡಾವಣಾ ಪ್ರಯತ್ನಗಳ ನಂತರ ತನ್ನ ಫಾಲ್ಕನ್ 1 ಅನ್ನು ಭೂಮಿಯ ಸುತ್ತ ಕಕ್ಷೆಗೆ ಯಶಸ್ವಿಯಾಗಿ ಉಡಾಯಿಸಿತು.
ಇತ್ತೀಚೆಗಿನ ಗಮನಾರ್ಹ ಬದಲಾವಣೆ ಎಂದರೆ ಸುಮಾರು 44 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದದ ನಂತರ ಮಸ್ಕ್ ಟ್ವಿಟ್ಟರ್‌ನ ಮಾಲೀಕರಾಗಿದ್ದಾರೆ. ಇದರ ನಂತರ, ಅವರು ಕಂಪನಿಯ ಸಿಇಒ ಪರಾಗ್ ಅಗರ್ವಾಲ್ ಸೇರಿದಂತೆ ನಾಲ್ವರು ಅಧಿಕಾರಿಗಳಿಗೆ ಪ್ರಮುಖ ಹುದ್ದೆಯಿಂದ ವಜಾಗೊಳಿಸಿದ್ದಾರೆ. ಇದಲ್ಲದೇ ನೀತಿ ಮತ್ತು ಕಾನೂನು ಮುಖ್ಯಸ್ಥ ವಿಜಯಾ ಗಡ್ಡೆ ಅವರನ್ನು ವಜಾಗೊಳಿಸಿದ್ದಾರೆ. ಇದು ಎಲಾನ್ ಮಸ್ಕ್ ಅವರ ವಿಚಿತ್ರ ನಿರ್ಧಾರಗಳು ಮತ್ತು ಹಠ ಸಾಧನೆಗೆ ಮತ್ತೊಂದು ಉದಾಹರಣೆ.
ಅವರು ಯಾರ ಮಾತನ್ನೂ ಕೇಳದೇ ತನ್ನದೇ ದಾರಿಯಲ್ಲಿ ಸಾಗಿ ಗೆದ್ದವರು ಎಂಬುದು ಹಲವರ ಅಭಿಪ್ರಾಯ. 12 ವರ್ಷದ ಹುಡುಗನಾಗಿದ್ದಾಗಲೇ ಅವನು ತಾನೇ ಡಿಸೈನ್ ಮಾಡಿದ ಕಂಪ್ಯೂಟರ್ ಗೇಮ್ ಮಾರಾಟ ಮಾಡಿದ್ದ. ಅಂಥವನು ಟೆಸ್ಲಾ ಮೋಟಾರ್ಸ್, ಪೇಪಾಲ್ ಮತ್ತು ಸ್ಪೇಸ್‌ಎಕ್ಸ್ ಕಟ್ಟಿದ್ದಾರೆಂದರೆ ಅಚ್ಚರಿ ಪಡಬೇಕಿಲ್ಲ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ