‘ನಾಟು ನಾಟು..’ ಇಷ್ಟಪಟ್ಟ ಎಲಾನ್ ಮಸ್ಕ್​; ನೂರಾರು ಟೆಸ್ಲಾ ಕಾರಲ್ಲಿ ಲೈಟ್​ ಶೋ

‘ಆಸ್ಕರ್​’ ಗೆದ್ದ ಬಳಿಕ ಈ ಹಾಡನ್ನು ವಿದೇಶಿಗರು ಕೇಳುತ್ತಿದ್ದಾರೆ. ಎಲಾನ್ ಮಸ್ಕ್​ ಕೂಡ ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.

‘ನಾಟು ನಾಟು..’ ಇಷ್ಟಪಟ್ಟ ಎಲಾನ್ ಮಸ್ಕ್​; ನೂರಾರು ಟೆಸ್ಲಾ ಕಾರಲ್ಲಿ ಲೈಟ್​ ಶೋ
ಎಲಾನ್ ಮಸ್ಕ್​,
Follow us
ರಾಜೇಶ್ ದುಗ್ಗುಮನೆ
|

Updated on:Mar 21, 2023 | 10:57 AM

‘ಆರ್​ಆರ್​ಆರ್​’ ಚಿತ್ರದ (RRR Movie) ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ. ಭಾರತದಲ್ಲಿ ಸಿದ್ಧಗೊಂಡ ಹಾಡಿಗೆ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದು ಇದೇ ಮೊದಲು. ಆಸ್ಕರ್ ಅವಾರ್ಡ್ ಸಿಕ್ಕ ನಂತರದಲ್ಲಿ ನಿರ್ದೇಶಕ ಎಸ್​.ಎಸ್​. ರಾಜಮೌಳಿ (SS Rajamouli) ಹಾಗೂ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಅವರ ಖ್ಯಾತಿ ಹೆಚ್ಚಿದೆ. ಈ ಹಾಡನ್ನು ವಿಶ್ವದ ಅನೇಕರು ಇಷ್ಟಪಟ್ಟಿದ್ದಾರೆ. ವಿಶೇಷ ಎಂದರೆ, ಟ್ವಿಟರ್ ಸಿಇಒ ಎಲಾನ್ ಮಸ್ಕ್ ಅವರಿಗೂ ಈ ಹಾಡು ಇಷ್ಟವಾಗಿದೆ. ಅವರ ಒಡೆತನದ ಟೆಸ್ಲಾ ಕಾರಿನಲ್ಲಿ ವಿಶೇಷ ಲೈಟ್ ಶೋ ಕೂಡ ಮಾಡಿದ್ದಾರೆ.

‘ಆರ್​ಆರ್​ಆರ್’ ಸಿನಿಮಾ ಕಳೆದ ವರ್ಷ ಮಾರ್ಚ್ 25ರಂದು ತೆರೆಗೆ ಬಂತು. ಈ ಸಿನಿಮಾ ಸೂಪರ್​ಹಿಟ್ ಆಯಿತು. ಈ ಸಿನಿಮಾ ಆಸ್ಕರ್​ ಅವಾರ್ಡ್​ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿರಲಿಲ್ಲ. ಆದರೆ, ಫಾರ್​ ಯುವರ್ ಕನ್ಸಿಡರೇಷನ್ ಕ್ಯಾಂಪೇನ್ ಮೂಲಕ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್​ಗೆ ಆಯ್ಕೆ ಆಯಿತು. ನಂತರ ಶಾರ್ಟ್​ಲಿಸ್ಟ್ ಕೂಡ ಆಯಿತು. ಘಟಾನುಘಟಿ ಸಾಂಗ್ ಎದುರು ‘ಆರ್​ಆರ್​ಆರ್’ ಚಿತ್ರದ ಹಾಡು ಗೆದ್ದು ಬೀಗಿತು.

‘ಆಸ್ಕರ್​’ ಗೆದ್ದ ಬಳಿಕ ಈ ಹಾಡನ್ನು ವಿದೇಶಿಗರು ಕೇಳುತ್ತಿದ್ದಾರೆ. ಎಲಾನ್ ಮಸ್ಕ್​ ಕೂಡ ಈ ಹಾಡನ್ನು ಇಷ್ಟಪಟ್ಟಿದ್ದಾರೆ. ಟೆಸ್ಲಾ ಕಾರುಗಳನ್ನು ಒಂದು ಕಡೆ ನಿಲ್ಲಿಸಿ, ‘ನಾಟು ನಾಟು..’ ಹಾಡನ್ನು ಹಾಕಲಾಗಿದೆ. ಸಾಂಗ್​ನ ಬೀಟ್​ಗೆ ತಕ್ಕಂತೆ ಕಾರಿನ ಲೈಟ್ ಬ್ಲಿಂಕ್ ಆಗಿದೆ. ‘ನ್ಯೂಜರ್ಸಿಯಲ್ಲಿ ನಾಟು ನಾಟು ಹಾಡಿಗೆ ಟೆಸ್ಲಾ ಲೈಟ್ ಸಿಂಕ್​’ ಎಂದು ‘ಆರ್​ಆರ್​ಆರ್​’ ಸಿನಿಮಾದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಇದಕ್ಕೆ ಎಲಾನ್ ಮಸ್ಕ್​ ಕಮೆಂಟ್ ಮಾಡಿದ್ದು, ಹಾರ್ಟ್​ ಎಮೋಜಿ ಹಾಕಿದ್ದಾರೆ.

ಮಾರ್ಚ್ 12ರಂದು ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ಆಸ್ಕರ್ ಅವಾರ್ಡ್ ಕಾರ್ಯಕ್ರಮ ನಡೆಯಿತು. ರಾಮ್​ ಚರಣ್, ಜೂ.ಎನ್​ಟಿಆರ್​, ರಾಜಮೌಳಿ, ಎಂಎಂ ಕೀರವಾಣಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದ ನಂತರ ರಾಜಮೌಳಿ ಅವರು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಅನೇಕರು ಭಾಗಿ ಆಗಿದ್ದರು. ಈಗ ಎಲ್ಲರೂ ಭಾರತಕ್ಕೆ ಮರಳಿದ್ದಾರೆ. ರಾಜಮೌಳಿ ಅವರು ಶೀಘ್ರವೇ ಹೊಸ ಸಿನಿಮಾ ಕೆಲಸಗಳಲ್ಲಿ ಭಾಗಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:55 am, Tue, 21 March 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ