ರಜನಿಕಾಂತ್ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಮಾಡೋದು ಯಾವಾಗ? ಉತ್ತರ ಕೊಟ್ಟ ಉಪ್ಪಿ

Rajinikanth: ರಜನಿಕಾಂತ್ ಅವರು ನಿರ್ದೇಶಕನಾಗಿ ಗುರುತಿಸಿಕೊಂಡವರು. ನಂತರ ಆ್ಯಕ್ಟಿಂಗ್​ನಲ್ಲಿ ಬ್ಯುಸಿ ಆದರು. ಇತ್ತೀಚಿನ ವರ್ಷಗಳಲ್ಲಿ ಅವರ ಸಂಪೂರ್ಣ ಗಮನ ನಟನೆಮೇಲಿತ್ತು.

ರಜನಿಕಾಂತ್ ಚಿತ್ರಕ್ಕೆ ಉಪೇಂದ್ರ ನಿರ್ದೇಶನ ಮಾಡೋದು ಯಾವಾಗ? ಉತ್ತರ ಕೊಟ್ಟ ಉಪ್ಪಿ
ರಜನಿ-ಉಪೇಂದ್ರ
Follow us
ರಾಜೇಶ್ ದುಗ್ಗುಮನೆ
|

Updated on:Mar 21, 2023 | 9:57 AM

ರಜನಿಕಾಂತ್ (Rajinikanth) ಅವರು ತಮಿಳಿನ ಸೂಪರ್​ಸ್ಟಾರ್​. ಆರಂಭದ ದಿನಗಳಲ್ಲಿ ಅವರು ಕನ್ನಡದ ಚಿತ್ರಗಳಲ್ಲೂ ನಟಿಸಿದ್ದರು. ಅವರ ಜೊತೆ ಕೆಲಸ ಮಾಡಬೇಕು ಎಂಬುದು ಅನೇಕ ನಿರ್ದೇಶಕರು ಹಾಗೂ ನಿರ್ಮಾಪಕರ ಆಸೆ. ಆದರೆ, ಎಲ್ಲರಿಗೂ ರಜನಿಕಾಂತ್ ಅವರ ಕಾಲ್​ಶೀಟ್ ಸಿಗೋದಿಲ್ಲ. ಅದಕ್ಕೆ ಸಾಕಷ್ಟು ಶ್ರಮ ಬೇಕು. ಉಪೇಂದ್ರ ಅವರು ರಜನಿಯ ಸಿನಿಮಾಗೆ ಆ್ಯಕ್ಷನ್​ಕಟ್ ಹೇಳೋದು ಯಾವಾಗ ಅನ್ನೋ ಪ್ರಶ್ನೆ ಮೂಡಿದೆ. ಇದಕ್ಕೆ ಸ್ವತಃ ಉಪೇಂದ್ರ (Upendra) ಅವರು ಉತ್ತರ ನೀಡಿದ್ದಾರೆ. ಈ ಉತ್ತರದಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.

ಉಪೇಂದ್ರ ಅವರು ನಿರ್ದೇಶಕನಾಗಿ ಗುರುತಿಸಿಕೊಂಡವರು. ನಂತರ ಆ್ಯಕ್ಟಿಂಗ್​ನಲ್ಲಿ ಬ್ಯುಸಿ ಆದರು. ಇತ್ತೀಚಿನ ವರ್ಷಗಳಲ್ಲಿ ಅವರ ಸಂಪೂರ್ಣ ಗಮನ ನಟನೆಮೇಲಿತ್ತು. ಈಗ ಅವರು ‘ಯುಐ’ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ರಜನಿಕಾಂತ್ ಸಿನಿಮಾಗೆ ನಿರ್ದೇಶನ ಮಾಡುವ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: Aishwaryaa Rajinikanth: ರಜನಿಕಾಂತ್​ ಮನೆಯ ಲಾಕರ್​ನಲ್ಲಿ ಪುತ್ರಿ ಐಶ್ವರ್ಯಾ ಇಟ್ಟಿದ್ದ ಒಡವೆ ಕಳ್ಳತನ; ಯಾರ ಮೇಲೆ ಅನುಮಾನ?

ಮಾರ್ಚ್​ 17ರಂದು ರಿಲೀಸ್ ಆದ ಉಪೇಂದ್ರ, ಸುದೀಪ್ ಹಾಗೂ ಶಿವರಾಜ್​ಕುಮಾರ್ ನಟನೆಯ ‘ಕಬ್ಜ’ ಸಿನಿಮಾ ಯಶಸ್ಸು ಕಂಡಿದೆ. ಎರಡೇ ದಿನಕ್ಕೆ ಸಿನಿಮಾ 100 ಕೋಟಿ ರೂಪಾಯಿ ಬಾಚಿದೆ. ಈ ಚಿತ್ರದಿಂದ ಉಪೇಂದ್ರ ಅವರು ಗೆದ್ದು ಬೀಗಿದ್ದಾರೆ. ಈ ಚಿತ್ರಕ್ಕಾಗಿ ಅವರು ಭರ್ಜರಿ ಪ್ರಮೋಷನ್ ಮಾಡಿದ್ದಾರೆ. ಈ ವೇಳೆ ಅವರಿಗೆ ವಿವಿಧ ಪ್ರಶ್ನೆಗಳು ಎದುರಾಗಿವೆ. ಇದರಲ್ಲಿ ಉಪೇಂದ್ರಗೆ ರಜನಿ ಜೊತೆ ಸಿನಿಮಾ ಮಾಡುವ ಬಗ್ಗೆಯೂ ಪ್ರಶ್ನೆ ಎದುರಾಯಿತು.

‘ಓಂ’ ‘ಶ್​’, ‘ಉಪೇಂದ್ರ’ ಅಂತಹ ಸೂಪರ್ ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಉಪೇಂದ್ರ ಅವರಿಗೆ ಇದೆ. 2010ರಲ್ಲಿ ರಿಲೀಸ್ ಆದ ‘ಸೂಪರ್’ ಚಿತ್ರ ನೋಡಿ ರಜನಿ ಇಷ್ಟಪಟ್ಟರು. ಒಳ್ಳೆಯ ಸ್ಕ್ರಿಪ್ಟ್ ಬಂದರೆ ಉಪೇಂದ್ರ ಜೊತೆ ಕೆಲಸ ಮಾಡುವ ಇಚ್ಛೆಯನ್ನು ರಜನಿ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರಶ್ನೆ ಮಾಡಲಾಯಿತು.

ಇದನ್ನೂ ಓದಿ: Rajinikanth: ರಜನಿಕಾಂತ್ 170ನೇ ಚಿತ್ರ ಘೋಷಣೆ; ‘ಜೈ ಭೀಮ್​’ ನಿರ್ದೇಶಕನ ಜೊತೆ ಸೂಪರ್​ ಸ್ಟಾರ್ ಸಿನಿಮಾ  

‘ಅವರ ಆ ಹೇಳಿಕೆಯೇ ನಂಗೆ ಖುಷಿ ನೀಡಿತು’ ಎಂದಿದ್ದಾರೆ ಉಪೇಂದ್ರ. ‘ನನಗೆ ಹೊಸ ಆಲೋಚನೆಗಳು ಬರಬೇಕು. ಇಲ್ಲದಿದ್ದರೆ, ನಾನು ಸಿನಿಮಾ ನಿರ್ದೇಶನ ಮಾಡುವುದಿಲ್ಲ’ ಎಂದಿದ್ದಾರೆ ಉಪೇಂದ್ರ. ಅವರಿಗೆ ಒಳ್ಳೆಯ ಐಡಿಯಾ ಹೊಳೆಯಲಿ ಎಂದು ಫ್ಯಾನ್ಸ್ ಬೇಡಿಕೊಳ್ಳುತ್ತಿದ್ದಾರೆ. ರಜನಿಕಾಂತ್ ಅವರು ‘ಜೈಲರ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಕೂಡ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:16 am, Tue, 21 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ