Aishwaryaa Rajinikanth: ರಜನಿಕಾಂತ್​ ಮನೆಯ ಲಾಕರ್​ನಲ್ಲಿ ಪುತ್ರಿ ಐಶ್ವರ್ಯಾ ಇಟ್ಟಿದ್ದ ಒಡವೆ ಕಳ್ಳತನ; ಯಾರ ಮೇಲೆ ಅನುಮಾನ?

Rajinikanth | Dhanush: ಕಳೆದ 4 ವರ್ಷಗಳಿಂದ ಈ ಲಾಕರ್​ ಅನ್ನು ಬೇರೆ ಬೇರೆ ಮನೆಗಳಿಗೆ ಶಿಫ್ಟ್​ ಮಾಡಲಾಗಿತ್ತು. ಐಶ್ವರ್ಯಾ ಅವರ ಮಾಜಿ ಪತಿ ಧನುಶ್​ ಮನೆಯಲ್ಲೂ ಕೆಲ ದಿನಗಳ ಕಾಲ ಲಾಕರ್ ಇರಿಸಲಾಗಿತ್ತು.

Aishwaryaa Rajinikanth: ರಜನಿಕಾಂತ್​ ಮನೆಯ ಲಾಕರ್​ನಲ್ಲಿ ಪುತ್ರಿ ಐಶ್ವರ್ಯಾ ಇಟ್ಟಿದ್ದ ಒಡವೆ ಕಳ್ಳತನ; ಯಾರ ಮೇಲೆ ಅನುಮಾನ?
ಐಶ್ವರ್ಯಾ ರಜನಿಕಾಂತ್
Follow us
ಮದನ್​ ಕುಮಾರ್​
|

Updated on: Mar 20, 2023 | 1:49 PM

ನಟ ರಜನಿಕಾಂತ್​ (Rajinikanth) ಅವರ ಮನೆಯಲ್ಲಿ ಕಳ್ಳತನ (Theft) ಆಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್​ ದೂರು ನೀಡಿದ್ದಾರೆ. ಐಶ್ವರ್ಯಾ ಅವರ ಆಭರಣಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನ, ಡೈಮಂಡ್​ ಮುಂತಾದ ಒಡವೆಗಳು ಮಿಸ್​ ಆಗಿವೆ. ಈ ಪ್ರಕರಣದಲ್ಲಿ ಕೆಲವರ ಮೇಲೆ ಐಶ್ವರ್ಯಾ ರಜನಿಕಾಂತ್​ (Aishwaryaa Rajinikanth) ಅನುಮಾನ ವ್ಯಕ್ತಪಡಿಸಿದ್ದಾರೆ. ಮನೆ ಕೆಲಸದ ಇಬ್ಬರು ವ್ಯಕ್ತಿಗಳು ಹಾಗೂ ಕಾರು ಚಾಲಕನ ಮೇಲೆ ಗುಮಾನಿ ಇದ್ದು, ಪೊಲೀಸರಿಗೆ ನೀಡಿದ ದೂರಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಐಪಿಸಿ ಸೆಕ್ಷನ್​ 381ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಜನಿಕಾಂತ್​ ಮನೆಯಲ್ಲಿ ಕಳ್ಳತನ ಆಗಿರುವ ಆಭರಣಗಳ ಮೌಲ್ಯವನ್ನು 3.60 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಕೊನೇ ಬಾರಿ ಐಶ್ವರ್ಯಾ ರಜನಿಕಾಂತ್​ ಅವರು ಈ ಒಡವೆಗಳನ್ನು ಧರಿಸಿದ್ದು 2019ರಲ್ಲಿ! ಸಹೋದರಿ ಸೌಂದರ್ಯಾ ಅವರ ಮದುವೆಯಲ್ಲಿ ಈ ಆಭರಣಗಳನ್ನು ಧರಿಸಿದ ಬಳಿಕ ಅವುಗಳನ್ನು ಮನೆಯ ಲಾಕರ್​ನಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: Rajinikanth: ‘ಕಾಂತಾರ 2’ ಚಿತ್ರದಲ್ಲಿ ರಜನಿಕಾಂತ್​ ನಟಿಸ್ತಾರಾ? ರಿಷಬ್​ ಶೆಟ್ಟಿ ಸಿನಿಮಾ ಬಗ್ಗೆ ಹೊಸ ಚರ್ಚೆ ಶುರು

ಇದನ್ನೂ ಓದಿ
Image
Rajinikanth: ರಜನಿಕಾಂತ್​ಗೆ ಆದಾಯ ತೆರಿಗೆ ಇಲಾಖೆ ಮೆಚ್ಚುಗೆ; ತಂದೆ ಪರವಾಗಿ ಪ್ರಶಸ್ತಿ ಪಡೆದ ಪುತ್ರಿ ಐಶ್ವರ್ಯಾ
Image
Jailer: ಶಿವಣ್ಣ-ರಜನಿಕಾಂತ್​ ಸಿನಿಮಾಗೆ ‘ಜೈಲರ್​’ ಶೀರ್ಷಿಕೆ: ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ ಪೋಸ್ಟರ್​
Image
ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
Image
ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

ಕಳೆದ ನಾಲ್ಕು ವರ್ಷಗಳಿಂದ ಈ ಲಾಕರ್​ ಅನ್ನು ಬೇರೆ ಬೇರೆ ಮನೆಗಳಿಗೆ ಶಿಫ್ಟ್​ ಮಾಡಲಾಗಿತ್ತು. ಐಶ್ವರ್ಯಾ ಅವರ ಮಾಜಿ ಪತಿ, ನಟ ಧನುಶ್​ ಅವರ ಮನೆಯಲ್ಲೂ ಕೆಲವು ದಿನಗಳ ಕಾಲ ಈ ಲಾಕರ್ ಇರಿಸಲಾಗಿತ್ತು. ಅಂತಿಮವಾಗಿ ಅದನ್ನು ರಜನಿಕಾಂತ್​ ಅವರ ನಿವಾಸಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಅವರ ಕೀ ಅನ್ನು ಐಶ್ವರ್ಯಾ ಅವರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಇರಿಸಿಕೊಂಡಿದ್ದರು. ಮನೆಯ ಸಿಬ್ಬಂದಿಗೆ ಈ ಲಾಕರ್​ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು ಎಂದು ವರದಿ ಆಗಿದೆ.

ಇದನ್ನೂ ಓದಿ: Rajinikanth: ರಜನಿಕಾಂತ್ 170ನೇ ಚಿತ್ರ ಘೋಷಣೆ; ‘ಜೈ ಭೀಮ್​’ ನಿರ್ದೇಶಕನ ಜೊತೆ ಸೂಪರ್​ ಸ್ಟಾರ್ ಸಿನಿಮಾ  

ಡೈಮಂಡ್​ ಸೆಟ್​ಗಳು, ಪ್ರಾಚೀನ ಶೈಲಿಯ ಬಂಗಾರದ ಆಭರಣಗಳು, ನವರತ್ನದ ಸೆಟ್​ಗಳು, ಬಳೆಗಳು ಸೇರಿದಂತೆ ಅನೇಕ ಜ್ಯುವೆಲ್ಲರಿಗಳನ್ನು ಕಳ್ಳತನ ಮಾಡಲಾಗಿದೆ. ತನಿಖೆಯಲ್ಲಿ ಯಾರ ಹೆಸರುಗಳು ಹೊರಬರಲಿವೆ ಎಂಬ ಕೌತುಕ ಮೂಡಿದೆ. ರಜನಿಕಾಂತ್ ಅವರಂತಹ ಸ್ಟಾರ್​ ನಟನ ಮನೆಯಲ್ಲಿ ಕಳ್ಳತನ ಮಾಡಲು ಧೈರ್ಯ ತೋರಿಸಿರುವವರು ಯಾರು ಎಂಬುದು ತನಿಖೆ ಬಳಿಕ ಗೊತ್ತಾಗಲಿದೆ.

ಇದನ್ನೂ ಓದಿ: Rajinikanth: ಕರ್ನಾಟಕದ ಧಾರ್ಮಿಕ ಕ್ಷೇತ್ರಗಳಿಗೆ ರಜನಿಕಾಂತ್​ ಭೇಟಿ; ‘ಜೈಲರ್​’ ಶೂಟಿಂಗ್​ ನಡುವೆ ‘ತಲೈವಾ’ ಸುತ್ತಾಟ

ತಮಿಳು ಚಿತ್ರರಂಗದಲ್ಲಿ ನಿರ್ದೇಶಕಿಯಾಗಿ ಐಶ್ವರ್ಯಾ ರಜನಿಕಾಂತ್​ ಅವರು ಗುರುತಿಸಿಕೊಂಡಿದ್ದಾರೆ. ‘3’, ‘ವೈ ರಾಜ ವೈ’ ಮುಂತಾದ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದಾರೆ. ಕೆಲವು ಹಾಡುಗಳಿಗೆ ಅವರು ಧ್ವನಿ ನೀಡಿದ್ದಾರೆ. ಪ್ರಸ್ತುತ ತಮಿಳಿನ ‘ಲಾಲ್​ ಸಲಾಂ’ ಸಿನಿಮಾಗೆ ಐಶ್ವರ್ಯಾ ನಿರ್ದೇಶನ ಮಾಡುತ್ತಿದ್ದಾರೆ. ಬಹುವರ್ಷಗಳ ಬಳಿಕ ಅವರು ಡೈರೆಕ್ಷನ್​ ಮಾಡುತ್ತಿರುವುದು ವಿಶೇಷ. ಈ ಚಿತ್ರದಲ್ಲಿ ರಜನಿಕಾಂತ್​ ಅವರ ಅತಿಥಿ ಪಾತ್ರ ಇರಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ