‘ನೋಡೋಕೆ ಅಷ್ಟೇ ಪಾಪ, ತುಂಬಾ ಡೇಂಜರ್’; ಗಮನ ಸೆಳೆದ ವೈಷ್ಣವಿ ಹೊಸ ಸೀರಿಯಲ್ ಪ್ರೋಮೋ

‘ಸೀತಾ ರಾಮ’ ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ವೈಷ್ಣವಿ ಹಾಗೂ ಗಗನ್ ಚಿನ್ನಪ್ಪ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ಮಾಡುತ್ತಿದ್ದಾರೆ.

‘ನೋಡೋಕೆ ಅಷ್ಟೇ ಪಾಪ, ತುಂಬಾ ಡೇಂಜರ್’; ಗಮನ ಸೆಳೆದ ವೈಷ್ಣವಿ ಹೊಸ ಸೀರಿಯಲ್ ಪ್ರೋಮೋ
ವೈಷ್ಣವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 21, 2023 | 9:38 AM

ವೈಷ್ಣವಿ ಗೌಡ (Vaishnavi Gowda) ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡ ‘ಅಗ್ನಿಸಾಕ್ಷಿ’ ಧಾರಾವಾಹಿ ಮೂಲಕ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ನಂತರ ಬಿಗ್ ಬಾಸ್​ಗೆ ಬಂದು ಎಲ್ಲರ ಗಮನ ಸೆಳೆದರು. ಈಗ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ‘ಸೀತಾ ರಾಮ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರ ಪ್ರೋಮೋನ ವಾಹಿನಿ ಹಂಚಿಕೊಂಡಿದೆ. ಇದು ಸಾಕಷ್ಟು ಸೌಂಡ್ ಮಾಡುತ್ತಿದೆ. ವೈಷ್ಣವಿ ಗೌಡ ಅವರು ಸೈಲೆಂಟ್ ಅಮ್ಮ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಸೀತಾ ನೋಡೋಕೆ ಅಷ್ಟೇ ಪಾಪ ಅಂತೆ!

‘ಸೀತಾ ರಾಮ’ ಧಾರಾವಾಹಿ ಬಗ್ಗೆ ವೀಕ್ಷಕರಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ವೈಷ್ಣವಿ ಹಾಗೂ ಗಗನ್ ಚಿನ್ನಪ್ಪ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ಮಾಡುತ್ತಿದ್ದಾರೆ. ರೀತು ಸಿಂಗ್ ಹೆಸರಿನ ಬಾಲಕಿ ಕೂಡ ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಸದ್ಯ ಹೊಸ ಪ್ರೋಮೋಗೆ ಸಾಕಷ್ಟು ಮೆಚ್ಚುಗೆ ಕೇಳಿ ಬಂದಿದೆ.

ಇದನ್ನೂ ಓದಿ: Vaishnavi Gowda: ಕ್ಯೂಟ್ ಲುಕ್​ನಲ್ಲಿ ಗಮನ ಸೆಳೆದ ನಟಿ ವೈಷ್ಣವಿ ಗೌಡ; ಇಲ್ಲಿದೆ ಫೋಟೋ ಗ್ಯಾಲರಿ

ಕಥಾ ನಾಯಕಿ ಸೀತಾ (ವೈಷ್ಣವಿ) ಹಾಗೂ ಅವಳ ಮಗಳು (ರೀತು ಸಿಂಗ್) ತಮ್ಮ ಪಾಡಿಗೆ ತಾವಿರುತ್ತಾರೆ. ಆಗ ಕಥಾ ನಾಯಕ ರಾಮನ (ಗಗನ್) ಎಂಟ್ರಿ ಆಗುತ್ತದೆ. ಸೀತಾಳ ಮದುವೆ ಆಗಬೇಕು ಎಂದರೆ ಅವಳ ಮಗಳ ಒಪ್ಪಿಗೆ ಪಡೆಯಬೇಕು. ಸದ್ಯಕ್ಕೆ ಪ್ರೋಮೋ ನೋಡಿದವರು ಧಾರಾವಾಹಿ ಕಥೆಯನ್ನು ಈ ರೀತಿ ಊಹಿಸುತ್ತಿದ್ದಾರೆ. ಅಸಲಿ ಕಥೆ ಬೇರೆಯದೇ ಇರಬಹುದೇ ಎಂಬುದನ್ನು ಕಾದು ನೋಡಬೇಕಿದೆ.

View this post on Instagram

A post shared by Zee Kannada (@zeekannada)

‘ಇವಳು ನೋಡೋಕೆ ಪಾಪದವಳ ತರ ಕಾಣಿಸ್ತಾಳೆ. ಆದರೆ ತುಂಬಾ ಡೇಂಜರ್. ಕೋಪ ಬಂದ್ರೆ ಟೀಚರ್​ಗಿಂತ ಜೋರಾಗಿ ಹೊಡಿತಾಳೆ. ಎಷ್ಟು ಉರಿಯತ್ತೆ ಗೊತ್ತಾ? ನೋಡು ಇವಳು ನನ್ನಮ್ಮ. ನಂಗೇ ಇಷ್ಟು ಹೊಡೀತಾಳೆ. ಮದುವೆ ಆದ್ಮೇಲೆ ನಿಂಗೆ ಎಷ್ಟು ಕಾಟ ಕೊಡಬಹುದು. ಯೋಚನೆ ಮಾಡು’ ಎಂದು ಅಮ್ಮನ ಬಗ್ಗೆ ಮಗಳು ಹೇಳುವ ರೀತಿಯಲ್ಲಿ ಪ್ರೋಮೋ ಇದೆ.

ಇದನ್ನೂ ಓದಿ: ದಿವ್ಯಾ-ಅರವಿಂದ್ ಜತೆ ವೈಷ್ಣವಿ ಗೌಡ, ರಘು ಮೋಜು-ಮಸ್ತಿ ; ಫೋಟೋ ವೈರಲ್

‘ಸೀತಾ ರಾಮ’ ಮೊದಲ ಪ್ರೋಮೋ ರಿಲೀಸ್ ಆಗಿ ಕೆಲವು ತಿಂಗಳು ಕಳೆದಿದೆ. ಅಂದಿನಿಂದ ಇಂದಿನವರೆಗೆ ಧಾರಾವಾಹಿ ಆರಂಭ ದಿನಾಂಕ ರೀವಿಲ್ ಆಗಿಲ್ಲ. ಈಗ ರಿಲೀಸ್ ಆದ ಹೊಸ ಪ್ರೋಮೋದಲ್ಲೂ ಧಾರಾವಾಹಿಯ ಪ್ರಸಾರದ ದಿನಾಂಕ ಇಲ್ಲ. ದಯವಿಟ್ಟು ಧಾರಾವಾಹಿ ರಿಲೀಸ್ ದಿನಾಂಕ ತಿಳಿಸಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ. ಈ ಮುದ್ದಾದ ಸ್ಟೋರಿನ ನೋಡೋಕೆ ವೀಕ್ಷಕರು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ