AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajinikanth: ಕರ್ನಾಟಕದ ಧಾರ್ಮಿಕ ಕ್ಷೇತ್ರಗಳಿಗೆ ರಜನಿಕಾಂತ್​ ಭೇಟಿ; ‘ಜೈಲರ್​’ ಶೂಟಿಂಗ್​ ನಡುವೆ ‘ತಲೈವಾ’ ಸುತ್ತಾಟ

Rajinikanth | Art of Living: ಚಿಕ್ಕಬಳ್ಳಾಪುರದ ಆವಲಕುರ್ಕಿಯಲ್ಲಿ ಇರುವ ಬೃಹತ್​ ಆದಿಯೋಗಿ ಪ್ರತಿಮೆ ಎಲ್ಲರನ್ನೂ ಸೆಳೆಯುತ್ತಿದೆ. ರಜನಿಕಾಂತ್ ಕೂಡ ಇಲ್ಲಿಗೆ ಭೇಟಿ ನೀಡಿದ್ದಾರೆ.

Rajinikanth: ಕರ್ನಾಟಕದ ಧಾರ್ಮಿಕ ಕ್ಷೇತ್ರಗಳಿಗೆ ರಜನಿಕಾಂತ್​ ಭೇಟಿ; ‘ಜೈಲರ್​’ ಶೂಟಿಂಗ್​ ನಡುವೆ ‘ತಲೈವಾ’ ಸುತ್ತಾಟ
ರಜನಿಕಾಂತ್ ಮತ್ತು ಸಹೋದರ ಸತ್ಯನಾರಾಯಣ ರಾವ್
ಮದನ್​ ಕುಮಾರ್​
| Edited By: |

Updated on:Feb 20, 2023 | 2:15 PM

Share

‘ಸೂಪರ್​ ಸ್ಟಾರ್​’ ರಜನಿಕಾಂತ್​ (Rajinikanth) ಅವರಿಗೂ ಕರ್ನಾಟಕಕ್ಕೂ ಬಹಳ ಹತ್ತಿರದ ನಂಟು. ಬೆಂಗಳೂರಿನ ಸ್ಥಳಗಳು ಅವರಿಗೆ ಚಿರಪರಿಚಿತ. ಕನ್ನಡ ಚಿತ್ರರಂಗದ ಜೊತೆಗೆ ಅವರು ಉತ್ತಮ ಒಡನಾಟ ಹೊಂದಿದ್ದಾರೆ. ಈಗ ‘ಜೈಲರ್​’ ಸಿನಿಮಾ ಸಲುವಾಗಿ ಅವರು ಕರುನಾಡಿನಲ್ಲಿ ತಂಗಿದ್ದಾರೆ. ಇದೇ ಸಮಯದಲ್ಲಿ ಅವರು ಹಲವು ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಚಿಕ್ಕಬಳ್ಳಾಪುರದ ಆದಿಯೋಗಿ (Adiyogi) ಪ್ರತಿಮೆಯನ್ನು ಅವರು ನೋಡಿಕೊಂಡು ಬಂದಿದ್ದಾರೆ. ಆ ಬಳಿಕ ರಜನಿಕಾಂತ್​ ಅವರು ಬೆಂಗಳೂರಿನ ‘ಆರ್ಟ್​​ ಆಫ್​ ಲಿವಿಂಗ್​’ (Art of Living) ಧ್ಯಾನ ಕೇಂದ್ರಕ್ಕೂ ಭೇಟಿ ಕೊಟ್ಟಿದ್ದಾರೆ. ಅದಕ್ಕೂ ಮುನ್ನ ಯಾರಿಗೂ ತಿಳಿಯದಂತೆ ಮಾರುವೇಷದಲ್ಲಿ ಏರೋ ಶೋ ಕೂಡ ವೀಕ್ಷಿಸಿದ್ದಾರೆ ಎನ್ನಲಾಗುತ್ತಿದೆ!

ರಜನಿಕಾಂತ್​ ಅವರಿಗೆ ಅಧ್ಯಾತ್ಮದಲ್ಲಿ ಹೆಚ್ಚು ನಂಬಿಕೆ ಇದೆ. ದೇವರ ಬಗ್ಗೆ ಅವರು ಅನೇಕ ಬಾರಿ ಮಾತನಾಡಿದ್ದಿದೆ. ಹಲವು ವಿಶೇಷ ಸಂದರ್ಭಗಳಲ್ಲಿ ಅವರು ದೇವಸ್ಥಾನಕ್ಕೆ ತೆರಳುತ್ತಾರೆ. ಶೂಟಿಂಗ್​ ನಿಮಿತ್ತ ಕರುನಾಡಿನಲ್ಲಿ ಇರುವಾಗಲೇ ಈ ವರ್ಷದ ಶಿವರಾತ್ರಿ ಹಬ್ಬ ಬಂದಿದ್ದರಿಂದ ಅವರು ಇಲ್ಲಿಯೇ ಹಬ್ಬ ಆಚರಿಸಿದ್ದಾರೆ. ಅವರ ಒಂದಷ್ಟು ಹೊಸ ಫೋಟೋಗಳು ಲಭ್ಯವಾಗಿವೆ. ಎಂದಿನಂತೆ ಅವರು ಸರಳತೆ ಮೆರೆಯುವ ಮೂಲಕ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ.

ಇದನ್ನೂ ಓದಿ: Jailer: ಮಂಗಳೂರಿನಲ್ಲಿ ‘ಜೈಲರ್​’ ಶೂಟಿಂಗ್; ಒಟ್ಟಿಗೆ ಕುಳಿತು ಹರಟೆ ಹೊಡೆದ ಶಿವಣ್ಣ-ರಜನಿ

ಇದನ್ನೂ ಓದಿ
Image
Jailer: ಶಿವಣ್ಣ-ರಜನಿಕಾಂತ್​ ಸಿನಿಮಾಗೆ ‘ಜೈಲರ್​’ ಶೀರ್ಷಿಕೆ: ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ ಪೋಸ್ಟರ್​
Image
ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
Image
ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​
Image
ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

ಚಿಕ್ಕಬಳ್ಳಾಪುರದ ಆವಲಕುರ್ಕಿಯಲ್ಲಿ ಇರುವ ಬೃಹತ್​ ಆದಿಯೋಗಿ ಪ್ರತಿಮೆಯು ಎಲ್ಲರನ್ನೂ ಸೆಳೆಯುತ್ತಿದೆ. ಪ್ರತಿದಿನ ಅನೇಕ ಭಕ್ತಾದಿಗಳು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ರಜನಿಕಾಂತ್ ಅವರನ್ನೂ ಈ ಸ್ಥಳ ಆಕರ್ಷಿಸಿದೆ. ಸಹೋದರ ಸತ್ಯನಾರಾಯಣ ಜೊತೆ ರಜನಿಕಾಂತ್​ ಅವರು ಆದಿಯೋಗಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರನ್ನು ಸನ್ಮಾನಿಸಲಾಗಿದೆ.

ಇದನ್ನೂ ಓದಿ: ‘ಜೈಲರ್’ ಸಿನಿಮಾ ಸೆಟ್​ನ ಫೋಟೋ ವೈರಲ್; ಬಾಡಿಗಾರ್ಡ್ಸ್​ ಜತೆ ಮಿಂಚಿದ ಶಿವಣ್ಣ, ರಜನಿಕಾಂತ್

‘ಜೈಲರ್’​ ಸಿನಿಮಾದಲ್ಲಿ ರಜನಿಕಾಂತ್​-ಶಿವಣ್ಣ:

ರಜನಿಕಾಂತ್​ ಅವರ ಹೊಸ ಸಿನಿಮಾ ‘ಜೈಲರ್​’ ಶೂಟಿಂಗ್​ ಭರದಿಂದ ಸಾಗುತ್ತಿದೆ. ನೆಲ್ಸನ್​ ದಿಲೀಪ್​ ಕುಮಾರ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಇದರ ಶೂಟಿಂಗ್​ ನಡೆಯುತ್ತಿದೆ. ಈ ಸಿನಿಮಾದಲ್ಲಿ ರಜನಿಕಾಂತ್ ಅವರ ಜೊತೆ ಶಿವರಾಜ್​ಕುಮಾರ್​ ಕೂಡ ನಟಿಸುತ್ತಿರುವುದು ವಿಶೇಷ. ಕೆಲವೇ ದಿನಗಳ ಹಿಂದೆ ಶಿವಣ್ಣ ಮತ್ತು ರಜನಿಕಾಂತ್​ ಅವರು ಒಟ್ಟಿಗೆ ಕಾಲ ಕಳೆದ ವಿಡಿಯೋ ವೈರಲ್​ ಆಗಿತ್ತು. ಈ ಸಿನಿಮಾದ ಶೂಟಿಂಗ್​ ಬಿಡುವಿನಲ್ಲಿ ಕರುನಾಡಿನ ಅನೇಕ ಸ್ಥಳಗಳಿಗೆ ರಜನಿಕಾಂತ್​ ಭೇಟಿ ನೀಡುತ್ತಿದ್ದಾರೆ.

‘ಜೈಲರ್’ ಸಿನಿಮಾಗೆ ಸನ್​ ಪಿಕ್ಚರ್ಸ್​ ಬಂಡವಾಳ ಹೂಡುತ್ತಿದೆ. ಇದೇ ಮೊದಲ ಬಾರಿಗೆ ಶಿವರಾಜ್​ಕುಮಾರ್​ ಮತ್ತು ರಜನಿಕಾಂತ್​ ಅವರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವುದರಿಂದ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಅವರ ಜೊತೆ ಸಾಧು ಕೋಕಿಲ, ಯೋಗಿ ಬಾಬು ಮುಂತಾದ ಜನಪ್ರಿಯ ಕಲಾವಿದರು ಕೂಡ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:42 pm, Sun, 19 February 23

Follow Us
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಕಾಂಜಾವಾಲಾ ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ಬೆಂಕಿ ಅವಘಡ
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್‌ ಸದಸ್ಯ ಸಾವು
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಇಂಧನ ಉಳಿಸಲು ಕಡಿಮೆ ಬೆಂಗಾವಲು ಪಡೆಯೊಂದಿಗೆ ಹೊರಟ ಪ್ರಧಾನಿ ಮೋದಿ
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಬಹುಭಾಷೆಯಲ್ಲಿ ರೈತನ ಅಹವಾಲು ಕೇಳಿ ಶಾಸಕರಿಗೇ ಅಚ್ಚರಿ!
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ವಯನಾಡು 'ಕೈ' ಕಚೇರಿ ಬಳಿಯೇ ರಾಹುಲ್​​, ಪ್ರಿಯಾಂಕಾ ವಿರುದ್ಧ ಪೋಸ್ಟರ್​​!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ಕಾಫಿ ತೋಟದತ್ತ ಹೆಜ್ಜೆಹಾಕಿದ 25ಕ್ಕೂ ಹೆಚ್ಚು ಆನೆಗಳ ದಿಂಡು!
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ರಾಮನಗರದ ತೋಟದಲ್ಲಿ ನಡೆಯಲಿದೆ ದಿಲೀಪ್ ರಾಜ್ ಅಂತ್ಯಕ್ರಿಯೆ; ಸಕಲ ಸಿದ್ಧತೆ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ಅರ್ಧ ಗಂಟೆ ಸಿಕ್ಕಿದ್ರೂ ಜಿಮ್​​ಗೆ ಹೋಗ್ತಾ ಇದ್ದ,ಯಾವುದೇ ದುರಭ್ಯಾಸ ಇರಲಿಲ್ಲ
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​