AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj: ಮೇಘನಾ ರಾಜ್​ ಹೊಸ ಚಿತ್ರಕ್ಕೆ ‘ತತ್ಸಮ ತದ್ಭವ’ ಶೀರ್ಷಿಕೆ; ಫಸ್ಟ್​ ಲುಕ್​ ಹಂಚಿಕೊಂಡ ನಟಿ

Tatsama Tadbhava | Meghana Raj Sarja: ನಟಿ ಮೇಘನಾ ರಾಜ್​ ಅಭಿನಯದ ಹೊಸ ಚಿತ್ರಕ್ಕೆ ‘ತತ್ಸಮ ತದ್ಭವ’ ಎಂದು ಹೆಸರು ಇಡಲಾಗಿದೆ. ಈ ಶೀರ್ಷಿಕೆಗೆ ‘ದಿ ಕನ್ಫೆಷನ್​’ ಎಂಬ ಟ್ಯಾಗ್​ ಲೈನ್​ ಇದೆ.

Meghana Raj: ಮೇಘನಾ ರಾಜ್​ ಹೊಸ ಚಿತ್ರಕ್ಕೆ ‘ತತ್ಸಮ ತದ್ಭವ’ ಶೀರ್ಷಿಕೆ; ಫಸ್ಟ್​ ಲುಕ್​ ಹಂಚಿಕೊಂಡ ನಟಿ
ತತ್ಸಮ ತದ್ಭವ ಫಸ್ಟ್​ಲುಕ್​, ಮೇಘನಾ ರಾಜ್​ ಸರ್ಜಾ
ಮದನ್​ ಕುಮಾರ್​
|

Updated on: Feb 19, 2023 | 11:36 AM

Share

ನಟಿ ಮೇಘನಾ ರಾಜ್​ ಸರ್ಜಾ (Meghana Raj Sarja) ಅವರು ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಪತಿ ಚಿರಂಜೀವಿ ಸರ್ಜಾ ನಿಧನದಿಂದ ಕುಗ್ಗಿದ್ದ ಅವರು, ಬಳಿಕ ಪುತ್ರನ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಈಗ ಸಿನಿಮಾಗಾಗಿಯೂ ಸಮಯ ಹೊಂದಿಸಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್ ಅವರ ಕಮ್​ಬ್ಯಾಕ್​ ಚಿತ್ರಕ್ಕೆ ಪನ್ನಗ ಭರಣ (Pannaga Bharana) ಬಂಡವಾಳ ಹೂಡಲಿದ್ದಾರೆ ಹಾಗೂ ವಿಶಾಲ್​ ಆತ್ರೇಯಾ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಒಂದಷ್ಟು ದಿನಗಳ ಹಿಂದೆ ಸುದ್ದಿ ಹೊರಬಿದ್ದಿತ್ತು. ಈಗ ಆ ಚಿತ್ರಕ್ಕೆ ಶೀರ್ಷಿಕೆ ಏನೆಂಬುದು ರಿವೀಲ್​ ಆಗಿದೆ. ‘ತತ್ಸಮ ತದ್ಭವ’ (Tatsama Tadbhava) ಎಂದು ಟೈಟಲ್​ ಇಡಲಾಗಿದೆ. ಈ ಚಿತ್ರದ ಫಸ್ಟ್​ ಲುಕ್​ ಪೋಸ್ಟರ್ ಕೂಡ ಬಿಡುಗಡೆ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸುವಂತಿದೆ.

ಮೇಘನಾ ರಾಜ್​ ಸರ್ಜಾ ಅವರು ಸ್ಕ್ರಿಪ್ಟ್​ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಾರೆ. ಈ ಬಾರಿ ಅವರು ಆಯ್ದುಕೊಂಡಿರುವ ‘ತತ್ಸಮ ತದ್ಭವ’ ಸಿನಿಮಾದ ಕತೆ ಕೂಡ ಸಖತ್​ ತೀವ್ರತೆಯಿಂದ ಕೂಡಿರುವಂತಿದೆ. ಮೇಘನಾ ಅವರ ಬಾಯಿಯನ್ನು ಯಾರೋ ಮುಚ್ಚಿರುವ ರೀತಿಯಲ್ಲಿ ಫಸ್ಟ್ ಲುಕ್​ ಪೋಸ್ಟರ್​ ಮೂಡಿಬಂದಿದೆ. ಅವರ ಕಣ್ಣುಗಳಲ್ಲಿ ಭಯ ಎದ್ದು ಕಾಣಿಸುತ್ತಿದೆ. ಈ ಶೀರ್ಷಿಕೆಗೆ ‘ದಿ ಕನ್ಫೆಷನ್​’ ಎಂಬ ಟ್ಯಾಗ್​ ಲೈನ್​ ಕೂಡ ಇದೆ. ಈ ಎಲ್ಲ ಕಾರಣಗಳಿಂದಾಗಿ ‘ತತ್ಸಮ ತದ್ಭವ’ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ.

ಇದನ್ನೂ ಓದಿ
Image
Meghana Raj: ಮೇಘನಾ ರಾಜ್​ ಕೈ ಮೇಲೆ ಶಾಶ್ವತವಾಗಿ ಅಚ್ಚಾಯಿತು ಚಿರು, ರಾಯನ್​ ಹೆಸರು; ಹೇಗಿದೆ ನೋಡಿ ಟ್ಯಾಟೂ
Image
ಎರಡನೇ ಮದುವೆ ಆಗಬೇಕೇ ಎಂಬ ಪ್ರಶ್ನೆಯನ್ನು ನನಗೆ ನಾನು ಕೇಳಿಕೊಂಡಿಲ್ಲ ಎಂದ ಮೇಘನಾ ರಾಜ್
Image
Meghana Raj: ಅಮ್ಮ ಅಂತ ಹೇಳಿಕೊಟ್ರೂ ಅಪ್ಪ ಎನ್ನುತ್ತಾನೆ ರಾಯನ್​ ರಾಜ್​ ಸರ್ಜಾ; ಇಲ್ಲಿದೆ ಮೇಘನಾ ರಾಜ್​ ಮಗನ ಕ್ಯೂಟ್​ ವಿಡಿಯೋ
Image
‘ಡಾನ್ಸಿಂಗ್​ ಚಾಂಪಿಯನ್​’ ಶೋ​ ನಡುವೆ ಮೇಘನಾ ರಾಜ್​ ಫೋಟೋಶೂಟ್​; ಇಲ್ಲಿವೆ ಚೆಂದದ ಫೋಟೋಗಳು

ಇದನ್ನೂ ಓದಿ: ಕ್ರಿಸ್​ಮಸ್​ ಪ್ರಯುಕ್ತ ಮೇಘನಾ ರಾಜ್​ ಸರ್ಪ್ರೈಸ್​; ಯೂಟ್ಯೂಬ್​ ಚಾನೆಲ್​ ಆರಂಭಿಸಿದ ನಟಿ

ಮೇಘನಾ ರಾಜ್​ ಅವರು ಮೊದಲಿನಂತೆ ಚಿತ್ರರಂಗದಲ್ಲಿ ಸಕ್ರಿಯರಾಗಿರುವುದಕ್ಕೆ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್​ಗೆ ಪಾಸಿಟಿವ್​ ಪ್ರತಿಕ್ರಿಯೆಗಳು ಬರುತ್ತಿವೆ. ಈ ಚಿತ್ರಕ್ಕೆ ವಾಸುಕಿ ವೈಭವ್​ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ್​ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ ಈ ಚಿತ್ರಕ್ಕೆ ಇರಲಿದೆ. ಕೆಆರ್​ಜಿ ಸ್ಟುಡಿಯೋಸ್​ ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಥೈಲ್ಯಾಂಡ್​​ನಲ್ಲಿ ಮೇಘನಾ ರಾಜ್ ಮೋಜು-ಮಸ್ತಿ; ಇಲ್ಲಿವೆ ಫೋಟೋಗಳು

ಅನೇಕ ಸೆಲೆಬ್ರಿಟಿಗಳು ಮೇಘನಾ ರಾಜ್​ ಅವರಿಗೆ ಶುಭ ಕೋರಿದ್ದಾರೆ. ನಟಿ ರಮ್ಯಾ ಅವರು ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್​ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ‘ಆಲ್​ ದಿ ಬೆಸ್ಟ್​’ ಹೇಳಿದ್ದಾರೆ. ಎಲ್ಲರಿಂದ ಸಿಗುತ್ತಿರುವ ಬೆಂಬಲ ಕಂಡು ಮೇಘನಾ ರಾಜ್​ ಖುಷಿ ಆಗಿದ್ದಾರೆ.

View this post on Instagram

A post shared by Meghana Raj Sarja (@megsraj)

ಮೇಘನಾ ರಾಜ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​:

ಹಲವು ಕಾರಣಗಳಿಂದಾಗಿ ‘ತತ್ಸಮ ತದ್ಭವ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ನಟ ಪ್ರಜ್ವಲ್​ ದೇವರಾಜ್​ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅವರಿಬ್ಬರನ್ನು ಒಂದೇ ಸಿನಿಮಾದಲ್ಲಿ ನೋಡಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ