Ramesh Jarkiholi: ರಾಜ್ಯದಲ್ಲಿ ಚುನಾವಣೆ ನಂತರ ಮತ್ತೆ ಆಪರೇಷನ್ ಕಮಲ ಆಗುತ್ತಾ? ರಮೇಶ್ ಜಾರಕಿಹೊಳಿ ಹೇಳಿದ್ದೇನು?

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ನಿಂದ ಬಿಜೆಪಿಗೆ ಮತ್ತೆ ಯಾರಾದ್ರೂ ಬರ್ತಾರಾ ಎಂಬ ಪ್ರಶ್ನೆಗೆ ರಮೇಶ್ ಜಾರಕಿಹೊಳಿ "ಈಗ ಯಾರು ಬರುವುದಿಲ್ಲ ಚುನಾವಣೆ ಫಲಿತಾಂಶ ಬಂದ ಬಳಿಕ ಯಾರು ಬರ್ತಾರೆ ಅಂತಾ ಹೇಳ್ತಿನಿ. ರಿಸಲ್ಟ್ ದಿನ ಯಾರು ನನ್ನ ಕಡೆಗೆ ಬರ್ತಾರೆ? ಎಷ್ಟು ಜನ ಬರ್ತಾರೆ ಅನ್ನೋದನ್ನ ಹೇಳ್ತಿನಿ " ಎಂದು ಪ್ರತಿಕ್ರಿಯಿಸಿದ್ದಾರೆ.

Ramesh Jarkiholi: ರಾಜ್ಯದಲ್ಲಿ ಚುನಾವಣೆ ನಂತರ ಮತ್ತೆ ಆಪರೇಷನ್ ಕಮಲ ಆಗುತ್ತಾ? ರಮೇಶ್ ಜಾರಕಿಹೊಳಿ ಹೇಳಿದ್ದೇನು?
ರಮೇಶ್ ಜಾರಕಿಹೊಳಿ Image Credit source: Tv9 Kannada
Follow us
ನಯನಾ ಎಸ್​ಪಿ
|

Updated on:Feb 19, 2023 | 11:38 AM

ಬೆಳಗಾವಿ: ರಾಜ್ಯದಲ್ಲಿ ಚುನಾವಣೆ ನಂತರ ಮತ್ತೆ ಆಪರೇಷನ್ ಕಮಲ (Operation Kamala) ಆಗುತ್ತಾ ಎಂಬ ಪ್ರಶ್ನೆಗೆ ರಮೇಶ್ ಜಾರಕಿಹೊಳಿ (Ramesh Jarkiholi)ಅವರು ಬೆಳಗಾವಿಯಲ್ಲಿ (Belagavi) ಟಿವಿ9 ಜೊತೆ ಮಾತನಾಡುವಾಗ ಎಕ್ಸ್‌ಕ್ಲೂಸಿವ್ ಹೇಳಿಕೆಯೊಂದನ್ನು ನೀಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಮತ್ತೆ ಯಾರಾದ್ರೂ ಬರ್ತಾರಾ ಎಂದು ಕೇಳಿದಾಗ ಸಚಿವ ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಒಂದನ್ನು ಸಿಡಿಸಿದಂತೆ ಕಾಣುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ನಿಂದ ಬಿಜೆಪಿಗೆ ಮತ್ತೆ ಯಾರಾದ್ರೂ ಬರ್ತಾರಾ ಎಂಬ ಪ್ರಶ್ನೆಗೆ ರಮೇಶ್ ಜಾರಕಿಹೊಳಿ “ಈಗ ಯಾರು ಬರುವುದಿಲ್ಲ ಚುನಾವಣೆ ಫಲಿತಾಂಶ ಬಂದ ಬಳಿಕ ಯಾರು ಬರ್ತಾರೆ ಅಂತಾ ಹೇಳ್ತಿನಿ. ರಿಸಲ್ಟ್ ದಿನ ಯಾರು ನನ್ನ ಕಡೆಗೆ ಬರ್ತಾರೆ? ಎಷ್ಟು ಜನ ಬರ್ತಾರೆ ಅನ್ನೋದನ್ನ ಹೇಳ್ತಿನಿ ” ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಮ್ಮೆ ಆಪರೇಷನ್ ಕಮಲ ಆಗುತ್ತಾ?

ಮತ್ತೊಮ್ಮೆ ಆಪರೇಷನ್‌ ಕಮಲ ಆಗುತ್ತಾ ಎಂದು ಕೇಳಿದಾಗ ರಮೇಶ್ ಜಾರಕಿಹೊಳಿ, “ಹಂಡ್ರೆಡ್ ಪರ್ಸಂಟ್ ಆಗುತ್ತೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನಾನು ಬಿಡುವುದಿಲ್ಲ. ಕಾಂಗ್ರೆಸ್‌ಗೆ ಯಾವುದೇ ಪರಿಸ್ಥಿತಿಯಲ್ಲಿ ಸರ್ಕಾರ ಕಟ್ಟಲು ಆಗೋದಿಲ್ಲ. ನನ್ನ ಬಳಿ ಎನೂ ಇಲ್ಲದಾಗ ನಾನು ಹದಿನೇಳು ಜನರನ್ನ ಬಿಜೆಪಿಗೆ ತಂದು ಕುಡಿಸಿದ್ದೇನೆ. ಆದರೆ ಈಗ ಹೈಕಮಾಂಡ್ ಅವರ ದೊಡ್ಡ ಪ್ರಮಾಣದಆಶೀರ್ವಾದ ನನ್ನ ಮೇಲಿದೆ, ಹಾಗಾಗಿ ಮುಂದೇನಾಗುತ್ತೆ ಅಂತ ನೀವೇ ನೋಡಿ” ಎಂದು ರಮೇಶ್ ಜಾರಕಿಹೊಳಿ ಹೊಸ ಬಾಂಬ್ ಅನ್ನು ಸಿಡಿಸಿದ್ದಾರೆ.

“ಈ ಸಲುವಾಗಿ ಡಿಕೆ ಶಿವಕುಮಾರ್ ಗಡಬಡಾಯಿಸುತ್ತಿದ್ದಾನೆ. ಆಪರೇಷನ್ ಕಮಲ ಮಾಡಿ ಕಾಂಗ್ರೆಸ್‌ದಿಂದ ಮತ್ತೆ ಶಾಸಕರನ್ನ ಬಿಜೆಪಿಗೆ ತಂದೆ ತರುತ್ತೇನೆ” ಎಂದು ಟಿವಿ9 ಜೊತೆ ಮಾತನಾಡುವಾಗ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಪರಮೇಶ್ವರ್ ಬಿಜೆಪಿಗೆ ಬರ್ತಾರಾ ಎಂಬ ಪ್ರಶ್ನೆಗೆ, ” ಈ ಸಂದರ್ಭದಲ್ಲಿ ಯಾರ ಬಗ್ಗೆ ಹೇಳುವುದು ಬೇಡಾ. ಪರಮೇಶ್ವರ ಅವರು ಬಹಳ ದಿನ ಆಯ್ತು ಭೇಟಿಯಾಗಿಲ್ಲ. ಪರಮೇಶ್ವರ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ” ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಗೋಕಾಕ್‌ದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ವಿಚಾರ

ಗೋಕಾಕ್‌ದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆ ಮಾಡಲಿ ಎಂಬ ಪಂಚಮಸಾಲಿ ಸಮುದಾಯದ ಮುಖಂಡರ ಆಗ್ರಹ ವಿಚಾರವಾಗಿ ಮಾತನಾಡುವಾಗ ಬೆಳಗಾವಿಯಲ್ಲಿ ಟಿವಿ9‌ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ “ಅವರು ಬರಲಿ ಸ್ವಾಗತ, ಬಂದ್ರೇ ಬಹಳ ಚುಲೋ” ಎಂದು ಹೆಬ್ಬಾಳ್ಕರ್‌ಗೆ ಗೋಕಾಕ್‌ ಕ್ಷೇತ್ರಕ್ಕೆ ಆಹ್ವಾನ ಕೊಟ್ಟಿದ್ದಾರೆ.

ಇದನ್ನೂ ಓದಿ: ಆತ ಸಣ್ಣ ಹುಡುಗ, ಗಾಡಿ ಹೊಡೆದು ಬಾಗಿಲು ಕಾದು ಎಂಎಲ್‌ಸಿ ಆದವ: ಚನ್ನರಾಜ್ ಹಟ್ಟಿಹೊಳಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

ಆಪರೇಷನ್ ಕಮಲ

ದೇಶಕ್ಕೆ ಮೊದಲ ಬಾರಿ ಆಪರೇಷನ್ ಕಮಲ ಪರಿಚಯಿಸಿ ಬಿಎಸ್. ಯಡಿಯೂರಪ್ಪ ಯಶಸ್ಸು ಗಳಿಸಿದ ಬಳಿಕ ಬಿಜೆಪಿ ದೇಶದ ರಾಜಕಾರಣದ ಮೇಲೆ ಪ್ರಯೋಗಿಸುತ್ತಿದೆ. 2018 ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರ ರಚನೆಯಾದ ಸಂದರ್ಭದಲ್ಲಿ 17 ಜನ ಶಾಸಕರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಇದರಿಂದ ಅಂದಿನ ಸಮಿಶ್ರ ಸರ್ಕಾರವು ಉರುಳಿತು. ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್‌, ಜೆಡಿಎಸ್‌ನ 17 ಶಾಸಕರ ಪೈಕಿ ರಮೇಶ್ ಜಾರಕಿಹೊಳಿ ಕೂಡ ಒಬ್ಬರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 am, Sun, 19 February 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ