ಕಾಂಗ್ರೆಸ್ ಪಕ್ಷದಲ್ಲಿ ಇರುವ ಅಸುರರ ಪಟ್ಟಿ ಬಹಳ ದೊಡ್ಡದಿದೆ: ಸಿಎಂ ಬೊಮ್ಮಾಯಿ
ಜನರಿಗೆ ಅಸುರ ಯಾರು, ದೇವತೆ ಯಾರು ಎಂಬುದು ಗೊತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಅಸುರರ ಪಟ್ಟಿ ಬಹಳ ದೊಡ್ಡದಿದೆ. ಕಾಂಗ್ರೆಸ್ ಜನರನ್ನು ನರಕದಲ್ಲಿ ಇಟ್ಟಿದ್ದಕ್ಕೆ ಮನೆಗೆ ಕಳಿಸಿದ್ದಾರೆ. 70 ವರ್ಷ ಆಡಳಿತ ಮಾಡಿದ ಪಕ್ಷವನ್ನು ಜನರು ಕಿತ್ತೊಗೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿ: ಜನರಿಗೆ ಅಸುರ ಯಾರು, ದೇವತೆ ಯಾರು ಎಂಬುದು ಗೊತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಅಸುರರ ಪಟ್ಟಿ ಬಹಳ ದೊಡ್ಡದಿದೆ. ಕಾಂಗ್ರೆಸ್ ಜನರನ್ನು ನರಕದಲ್ಲಿ ಇಟ್ಟಿದ್ದಕ್ಕೆ ಮನೆಗೆ ಕಳಿಸಿದ್ದಾರೆ. 70 ವರ್ಷ ಆಡಳಿತ ಮಾಡಿದ ಪಕ್ಷವನ್ನು ಜನರು ಕಿತ್ತೊಗೆದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದ್ದಾರೆ.
“ಬಿಜೆಪಿಯದ್ದು ರಾಕ್ಷಸ ಸರ್ಕಾರ. ಜನರ ಹಣ ಸುಲಿಗೆ ಮಾಡುತ್ತಿರುವ ಅವರಿಗೆ ಮುಂದೆ ನರಕದಲ್ಲೂ ಜಾಗ ಸಿಗುವುದಿಲ್ಲ. ಇವರಿಗಾಗಿ ಪ್ರತ್ಯೇಕ ನರಕ ಸೃಷ್ಟಿಸಬೇಕಾಗುತ್ತದೆ” ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ (Randeep singh surjewala) ಹೇಳಿಕೆಗೆ, ಹುಬ್ಬಳ್ಳಿಯ ಆದರ್ಶ ನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಕರ್ನಾಟಕದ ಬಗ್ಗೆ ರಣದೀಪ್ ಸುರ್ಜೇವಾಲಗೆ ಏನು ಗೊತ್ತಿದೆ. ಮೊದಲು ಕಾಂಗ್ರೆಸ್ ಒಳ ಜಗಳ ಸರಿ ಮಾಡಲಿ. ಆಮೇಲೆ ಕರ್ನಾಟಕದ ಬಗ್ಗೆ ಮಾತನಾಡಲಿ. ಕಾಂಗ್ರೆಸ್ ಬೇಜಾವ್ದಾರಿ ವಿರೋಧ ಪಕ್ಷ ಅಗಿದೆ. ಜನರಿಗೆ ತಮ್ಮ ಸಾಧನೆ ನಮ್ಮ ವೈಫಲ್ಯ ತೋರಿಸುವ ಬದಲು ಈ ತರಹದ ಮಾತು ಸರಿ ಅಲ್ಲ ಎಂದು ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಚುನಾವಣೋಗಸ್ಕರ ಜನರಿನ್ನು ಮರಳು ಮಾಡುತ್ತಿದೆ. ಅವರಿಗೂ ನಮಗೂ ಬಹಳ ವ್ಯತ್ಯಾಸ ಇದೆ. ನಾವು ಯಾಕೆ, ಯಾರಿಗೆ ಹಣ ಕೊಡುತ್ತೇವೆ ಅನ್ನೋದನ್ನ ಹೇಳಿದ್ದೇವೆ. ನನ್ನ ನಕಲು ಕಾಂಗ್ರೆಸ್ ಮಾಡಿದೆ. ಸುರ್ಜೇವಾಲಾಗೆ ಸ್ವಲ್ಪ ನೆನೆಪಿನ ಶಕ್ತಿ ಕಡಿಮೆ ಇದೆ. ಜನ ಕಾಂಗ್ರೆಸ್ಗೆ ಪರ್ಮನೆಂಟ್ ಆಗಿ ಹೂ ಇಡುತ್ತಾರೆ. ಚುನಾವಣೆ ಆದ ಮೇಲೂ ಕಾಂಗ್ರೆಸ್ ಕಿವಿ ಮೇಲೆ ಹೂ ಇರುತ್ತದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ