ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​

‘ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ಕೂಡ ಕೊರೊನಾ ಪಾಸಿಟಿವ್​ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದು ಐಶ್ವರ್ಯಾ ರಜನಿಕಾಂತ್​ ಅವರು ಮಾಹಿತಿ ನೀಡಿದ್ದಾರೆ.

ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​
ಐಶ್ವರ್ಯಾ ರಜನಿಕಾಂತ್
Follow us
TV9 Web
| Updated By: ಮದನ್​ ಕುಮಾರ್​

Updated on: Feb 02, 2022 | 11:02 AM

ಕೊರೊನಾ ವೈರಸ್​ (Coronavirus Positive) ಮೂರನೇ ಅಲೆಯಿಂದಾಗಿ ಅನೇಕರಿಗೆ ತೊಂದರೆ ಆಗಿದೆ. ಹಲವು ಸೆಲೆಬ್ರಿಟಿಗಳಿಗೆ ಕೊವಿಡ್​ ಪಾಸಿಟಿವ್​ ಆಗಿದೆ. ಸದಾ ಕಾಲ ಸಿನಿಮಾ ಚಟುವಟಿಕೆಗಳ ಸಲುವಾಗಿ ಹೊರಗಡೆ ಸುತ್ತಾಡುವ ಸೆಲೆಬ್ರಿಟಿಗಳಿಗೆ ಕೊರೊನಾ ಸೋಂಕು ತಗುಲುತ್ತಿದೆ. ರಜನಿಕಾಂತ್​ ಪುತ್ರಿ ಐಶ್ವರ್ಯಾ ರಜನಿಕಾಂತ್​ (Aishwarya Rajinikanth) ಅವರಿಗೆ ಈಗ ಕೊವಿಡ್​ ಪಾಸಿಟವ್​ ಆಗಿದೆ. ಕೆಲವೇ ದಿನಗಳ ಹಿಂದೆ ನಟ ಧನುಷ್​ (Dhanush) ಜೊತೆಗಿನ ದಾಂಪತ್ಯ ಜೀವನಕ್ಕೆ ಐಶ್ವರ್ಯಾ ಅವರು ಅಂತ್ಯ ಹಾಡಿದರು. ಡಿವೋರ್ಸ್​ ಪಡೆದಿರುವ ಅವರಿಗೆ ಈಗ ಅನಾರೋಗ್ಯದ ಸಮಸ್ಯೆ ಶುರುವಾಗಿದೆ. ತಮಗೆ ಕೊರೊನಾ ವೈರಸ್​ ತಗುಲಿರುವ ಬಗ್ಗೆ ಐಶ್ವರ್ಯಾ ರಜನಿಕಾಂತ್ ಅವರು ಸೋಶಿಯಲ್​ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಮಂಗಳವಾರ (ಫೆ.2) ರಾತ್ರಿ ಅವರು ಈ ಕುರಿತು ಪೋಸ್ಟ್​ ಮಾಡಿದ್ದಾರೆ. ತಾವು ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ. ಐಶ್ವರ್ಯಾ ಅವರು ಬೇಗ ಗುಣಮುಖರಾಗಲಿ ಎಂದು ಅವರ ಫ್ಯಾನ್ಸ್​ ಪ್ರಾರ್ಥಿಸಿದ್ದಾರೆ.

‘ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ಕೂಡ ಕೊರೊನಾ ಪಾಸಿಟಿವ್​ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ದಯವಿಟ್ಟು ಎಲ್ಲರೂ ಮಾಸ್ಕ್​ ಧರಿಸಿ. ವ್ಯಾಕ್ಸಿನ್​ ಪಡೆದು ಹುಷಾರಾಗಿರಿ’ ಎಂದು ಐಶ್ವರ್ಯಾ ಅವರು ಪೋಸ್ಟ್ ಮಾಡಿದ್ದಾರೆ. ಬೇಸರದ ಮುಖ ಹೊತ್ತುಕೊಂಡು ಅವರು ಫೋಟೋ ಹಂಚಿಕೊಂಡಿದ್ದಾರೆ.

ಧನುಷ್​ ಅವರಿಂದ ದೂರಾಗಿದ್ದರೂ ಕೂಡ ಐಶ್ವರ್ಯಾ ಅವರು ಇನ್ನೂ ಸೋಶಿಯಲ್​ ಮೀಡಿಯಾದಲ್ಲಿ ಹೆಸರು ಬದಲಾಯಿಸಿಕೊಂಡಿಲ್ಲ. ಕೆಲವೇ ದಿನಗಳ ಹಿಂದೆ ಧನುಷ್​ ಅವರ ತಂದೆ ಕಸ್ತೂರಿ ರಾಜ ಪ್ರತಿಕ್ರಿಯೆ ನೀಡಿದ್ದರು. ಅವರ ಮಾತು ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿತ್ತು. ಮಗ-ಸೊಸೆಯ ಡಿವೋರ್ಸ್​ ಸುದ್ದಿಯನ್ನು ಕಸ್ತೂರಿ ರಾಜ ತಳ್ಳಿ ಹಾಕಿದ್ದರು.

‘ಪರಸ್ಪರ ವೈಮನಸ್ಸಿನ ಕಾರಣಕ್ಕೆ ಹೀಗೆ ಆಗಿದೆ. ಇದು ಒಂದು ಕುಟುಂಬದ ಜಗಳ ಅಷ್ಟೇ. ಗಂಡ-ಹೆಂಡತಿ ನಡುವೆ ಇದೆಲ್ಲ ಸಹಜ. ಇದು ಡಿವೋರ್ಸ್​ ಅಲ್ಲ. ಅವರಿಬ್ಬರು ಈಗ ಚೆನ್ನೈನಲ್ಲಿ ಇಲ್ಲ. ಹೈದರಾಬಾದ್​​ನಲ್ಲಿ ಇದ್ದಾರೆ. ಅವರಿಗೆ ನಾನು ಒಂದಷ್ಟು ಸಲಹೆ ನೀಡಿದ್ದೇನೆ’ ಎಂದು ಕಸ್ತೂರಿ ರಾಜ ಹೇಳಿದ್ದರು.

ಇದನ್ನೂ ಓದಿ:

ಧನುಷ್​​ರಿಂದ ಬೇರ್ಪಟ್ಟ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಐಶ್ವರ್ಯಾ; ಇಲ್ಲಿದೆ ಫೋಟೋ

ವಿಚ್ಛೇದನದ ಬಳಿಕವೂ ಒಂದೇ ಹೋಟೆಲ್​ನಲ್ಲಿ ಉಳಿದುಕೊಳ್ಳುತ್ತಿದ್ದಾರೆ ಧನುಷ್​-ಐಶ್ವರ್ಯಾ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ