AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajinikanth: ರಜನಿಕಾಂತ್​ಗೆ ಆದಾಯ ತೆರಿಗೆ ಇಲಾಖೆ ಮೆಚ್ಚುಗೆ; ತಂದೆ ಪರವಾಗಿ ಪ್ರಶಸ್ತಿ ಪಡೆದ ಪುತ್ರಿ ಐಶ್ವರ್ಯಾ

Aishwaryaa Rajinikanth: ತೆರಿಗೆ ಪಾವತಿಸುವ ವಿಚಾರದಲ್ಲಿ ರಜನಿಕಾಂತ್ ಪ್ರಶಸ್ತಿ ಪಡೆದಿದ್ದಾರೆ. ಅವರಿಗೆ ಗೌರವ ಸಲ್ಲಿಸಿದ್ದಕ್ಕಾಗಿ ತಮಿಳುನಾಡು ಹಾಗೂ ಪಾಂಡಿಚೆರಿ ಆದಾಯ ತೆರಿಗೆ ಇಲಾಖೆಗೆ ಐಶ್ವರ್ಯಾ ರಜನಿಕಾಂತ್​ ಧನ್ಯವಾದ ತಿಳಿಸಿದ್ದಾರೆ.

Rajinikanth: ರಜನಿಕಾಂತ್​ಗೆ ಆದಾಯ ತೆರಿಗೆ ಇಲಾಖೆ ಮೆಚ್ಚುಗೆ; ತಂದೆ ಪರವಾಗಿ ಪ್ರಶಸ್ತಿ ಪಡೆದ ಪುತ್ರಿ ಐಶ್ವರ್ಯಾ
ರಜನಿಕಾಂತ್, ಐಶ್ವರ್ಯಾ ರಜನಿಕಾಂತ್,
TV9 Web
| Updated By: ಮದನ್​ ಕುಮಾರ್​|

Updated on: Jul 25, 2022 | 12:03 PM

Share

ನಟ ರಜನಿಕಾಂತ್​ (Rajinikanth) ಅವರು ಚಿತ್ರರಂಗದಲ್ಲಿ ಈಗಲೂ ಸಖತ್ ಬೇಡಿಕೆ ಹೊಂದಿದ್ದಾರೆ. ತಮಿಳು ನಾಡಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿ ಅವರಿಗೆ ಇದೆ. ಹಣ ಗಳಿಸುವುದು ಮಾತ್ರವಲ್ಲ, ತೆರಿಗೆ ಪಾವತಿಸುವುದರಲ್ಲೂ ಅವರೇ ನಂಬರ್​ ಒನ್​. ಹೌದು, ತಮಿಳುನಾಡಿನಲ್ಲಿ ಅತಿ ಹೆಚ್ಚು ಟ್ಯಾಕ್ಸ್​ ಕಟ್ಟಿದ ವ್ಯಕ್ತಿ ರಜನಿಕಾಂತ್ ಎಂದು ಆದಾಯ ತೆರಿಗೆ ಇಲಾಖೆ (Income Tax Department) ಹೇಳಿದೆ. ಸೂಕ್ತ ಸಮಯದಲ್ಲಿ ತೆರಿಗೆ ಪಾವತಿಸಿದ ಅವರಿಗೆ ಇಲಾಖೆ ಕಡೆಯಿಂದ ಮೆಚ್ಚುಗೆ ಸೂಚಿಸಲಾಗಿದೆ. ರಜನಿಕಾಂತ್​ ಪರವಾಗಿ ಅವರ ಪುತ್ರಿ ಐಶ್ವರ್ಯಾ (Aishwaryaa Rajinikanth) ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ. ಪ್ರಶಸ್ತಿ ಪಡೆದ ಬಳಿಕ ಆ ಫೋಟೋವನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರಿಗೆ ಅಭಿಮಾನಿಗಳು ಕಮೆಂಟ್​ಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಜುಲೈ 24ರಂದು ಚೆನ್ನೈನಲ್ಲಿ ‘ಆದಾಯ ತೆರಿಗೆ ದಿನ’ ಆಚರಿಸಲಾಯಿತು. ಈ ವೇಳೆ ಅತಿ ಹೆಚ್ಚು ತೆರಿಗೆ ಪಾವತಿಸುವ ಮತ್ತು ಸೂಕ್ತ ಸಮಯದಲ್ಲಿ ತೆರಿಗೆ ಪಾವತಿಸುವ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಯಿತು. ತೆಲಂಗಾಣ ಗವರ್ನರ್​ ತಮಿಳಿಸಾಯಿ ಸುಂದರರಾಜನ್​ ಅವರು ಪ್ರಶಸ್ತಿ ನೀಡಿದರು. ‘ಸೂಪರ್​ ಸ್ಟಾರ್​’ ರಜನಿಕಾಂತ್​ ಅವರ ಪರವಾಗಿ ಪ್ರಶಸ್ತಿ ಪಡೆದ ಐಶ್ವರ್ಯಾ ಅವರು, ‘ಅತಿ ಹೆಚ್ಚು ತೆರಿಗೆ ಪಾವತಿಸುವ ತಂದೆಯ ಹೆಮ್ಮೆಯ ಮಗಳು ನಾನು. ಅಪ್ಪನಿಗೆ ಗೌರವ ಸಲ್ಲಿಸಿದ್ದಕ್ಕಾಗಿ ತಮಿಳುನಾಡು ಹಾಗೂ ಪಾಂಡಿಚೆರಿ ಆದಾಯ ತೆರಿಗೆ ಇಲಾಖೆಗೆ ಧನ್ಯವಾದಗಳು’ ಎಂದು ಪೋಸ್ಟ್​ ಮಾಡಿದ್ದಾರೆ.

ರಜನಿಕಾಂತ್​ ಅವರಿಗೆ ಈಗ 71 ವರ್ಷ ವಯಸ್ಸು. ಈಗಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರು ನಟಿಸಿದ ‘ಅಣ್ಣಾತೆ’ ಸಿನಿಮಾ 2021ರಲ್ಲಿ ತೆರೆಕಂಡು ಯಶಸ್ಸು ಗಳಿಸಿತು. ಈಗ ಅವರು ‘ಜೈಲರ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ‘ಬೀಸ್ಟ್​’ ಖ್ಯಾತಿಯ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ
Image
Jailer: ಶಿವಣ್ಣ-ರಜನಿಕಾಂತ್​ ಸಿನಿಮಾಗೆ ‘ಜೈಲರ್​’ ಶೀರ್ಷಿಕೆ: ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ ಪೋಸ್ಟರ್​
Image
ರಜನಿಕಾಂತ್​ಗೆ ನಾಯಕಿ ಆದ ಐಶ್ವರ್ಯಾ ರೈ; ಹೊಸ ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ
Image
ಡಿವೋರ್ಸ್​ ಬಳಿಕ ರಜನಿ ಪುತ್ರಿಗೆ ಮತ್ತೆ ಕಂಟಕ; ಆಸ್ಪತ್ರೆಗೆ ದಾಖಲಾದ ಐಶ್ವರ್ಯಾ ರಜನಿಕಾಂತ್​
Image
ಕೋಟ್ಯಂತರ ರೂ. ಸಂಭಾವನೆ ಪಡೆಯುವ ರಜನಿಕಾಂತ್​ ಎಷ್ಟು ಆಸ್ತಿ ಹೊಂದಿದ್ದಾರೆ? ಇಲ್ಲಿದೆ ವಿವರ..

ಅಕ್ಷಯ್​ ಕುಮಾರ್​​ಗೂ ಆದಾಯ ತೆರಿಗೆ ಇಲಾಖೆ ಮೆಚ್ಚುಗೆ:

ಬಾಲಿವುಡ್​ನಲ್ಲಿ ಅತಿ ಹೆಚ್ಚು ಟ್ಯಾಕ್ಸ್​ ಪಾವತಿಸುವ ಸೆಲೆಬ್ರಿಟಿ ಎಂಬ ಖ್ಯಾತಿಗೆ ಅಕ್ಷಯ್​ ಕುಮಾರ್ ಅವರು ಪಾತ್ರರಾಗಿದ್ದಾರೆ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ ನೀಡಲಾಗಿದೆ. ಇಂಗ್ಲೆಂಡ್​ಗೆ ತೆರಳಿರುವ ಅಕ್ಷಯ್​ ಕುಮಾರ್ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಕಾರಣ ಅವರ ತಂಡದವರು ಈ ಮೆಚ್ಚುಗೆ ಪತ್ರವನ್ನು ಸ್ವೀಕರಿಸಿದ್ದಾರೆ. ಅಕ್ಕಿ ಫ್ಯಾನ್ಸ್ ವಲಯದಲ್ಲಿ ಇದರ ಫೋಟೋ ವೈರಲ್​ ಆಗುತ್ತಿದೆ.

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ