Lucky Man Teaser: ‘ನಿನಗೆ 2ನೇ ಚಾನ್ಸ್​ ಕೊಡ್ತೀನಿ’; ಲಕ್ಕಿ ಮ್ಯಾನ್​ಗೆ ದೇವರ ರೂಪದಲ್ಲಿ ವರ ನೀಡಿದ ಪುನೀತ್​ ರಾಜ್​ಕುಮಾರ್​

Puneeth Rajkumar | Prabhu Deva: ‘ಲಕ್ಕಿ ಮ್ಯಾನ್​’ ಟೀಸರ್ ನೋಡಿದ ಎಲ್ಲರೂ ಪಾಸಿಟಿವ್​ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಡಾರ್ಲಿಂಗ್​ ಕೃಷ್ಣ, ಪುನೀತ್​ ರಾಜ್​ಕುಮಾರ್​, ಪ್ರಭುದೇವ ಈ ಸಿನಿಮಾದಲ್ಲಿ ನಟಿಸಿದ್ದಾರೆ.

Lucky Man Teaser: ‘ನಿನಗೆ 2ನೇ ಚಾನ್ಸ್​ ಕೊಡ್ತೀನಿ’; ಲಕ್ಕಿ ಮ್ಯಾನ್​ಗೆ ದೇವರ ರೂಪದಲ್ಲಿ ವರ ನೀಡಿದ ಪುನೀತ್​ ರಾಜ್​ಕುಮಾರ್​
ಪುನೀತ್​ ರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on:Jul 25, 2022 | 1:28 PM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ನಿಧನರಾಗುವುದಕ್ಕೂ ಮುನ್ನ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಆ ಪೈಕಿ ‘ಲಕ್ಕಿ ಮ್ಯಾನ್​’ ಚಿತ್ರ ಕೂಡ ಪ್ರಮುಖವಾದದ್ದು. ಈ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗುತ್ತಿದೆ. ಇದರಲ್ಲಿ ಡಾರ್ಲಿಂಗ್​ ಕೃಷ್ಣ (Darling Krishna) ಮತ್ತು ಸಂಗೀತ ಶೃಂಗೇರಿ ಜೋಡಿಯಾಗಿ ನಟಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಮತ್ತು ಪ್ರಭುದೇವ ಅವರು ಒಂದು ಹಾಡಿನಲ್ಲಿ ಒಟ್ಟಾಗಿ ಡ್ಯಾನ್ಸ್​ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪುನೀತ್​ ಅವರು ದೇವರ ಪಾತ್ರದಲ್ಲಿ ನಟಿಸಿದ್ದು, ಕಥೆಗೆ ತಿರುವು ನೀಡಲಿದ್ದಾರೆ. ಈಗ ‘ಲಕ್ಕಿ ಮ್ಯಾನ್​’ (Lucky Man) ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಇದರಲ್ಲಿ ‘ಪವರ್​ ಸ್ಟಾರ್​’ ಪುನೀತ್ ರಾಜ್​ಕುಮಾರ್​ ಅವರನ್ನು ನೋಡಿ ಫ್ಯಾನ್ಸ್​ ಖುಷಿಪಡುತ್ತಿದ್ದಾರೆ. ಟೀಸರ್​ನಲ್ಲಿ ಅಪ್ಪು ಹೇಳಿರುವ ಒಂದು ಡೈಲಾಗ್​ ಗಮನ ಸೆಳೆಯುತ್ತಿದೆ.

‘ನಿನ್ನ ಲೈಫ್​ನಲ್ಲಿ ಆಗಿರುವ ಮಿಸ್ಟೇಕ್​ಗಳನ್ನೆಲ್ಲ ಸರಿ ಮಾಡಿಕೊಳ್ಳಲು ನಿನಗೆ ಸೆಕೆಂಡ್​ ಚಾನ್ಸ್​ ಕೊಡುತ್ತೀನಿ’ ಎಂದು ಪುನೀತ್​ ರಾಜ್​ಕುಮಾರ್​ ಅವರು ಡೈಲಾಗ್​ ಹೊಡೆದಿದ್ದಾರೆ. ಅವರ ಧ್ವನಿಯಲ್ಲಿಯೇ ಇದನ್ನು ಕೇಳಿ ಅಭಿಮಾನಿಗಳಿಗೆ ಖುಷಿ ಆಗಿದೆ. ಆದಷ್ಟು ಬೇಗ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ನೋಡಬೇಕು ಎಂಬ ಆಸೆ ಸಿನಿಪ್ರಿಯರಲ್ಲಿ ಮೂಡಿದೆ. ‘ಶೀಘ್ರವೇ ದೇವರು ಬರಲಿದ್ದಾರೆ’ ಎನ್ನುವ ಮೂಲಕ ಸದ್ಯದಲ್ಲೇ ರಿಲೀಸ್​ ಡೇಟ್​ ತಿಳಿಸುವುದಾಗಿ ಚಿತ್ರತಂಡ ಹೇಳಿದೆ.

‘ಲಕ್ಕಿ ಮ್ಯಾನ್​’ ಟೀಸರ್ ನೋಡಿದ ಎಲ್ಲರೂ ಪಾಸಿಟಿವ್​ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ಸಿನಿಮಾದಲ್ಲಿ ನೀವು ದೇವರ ಪಾತ್ರ ಮಾಡಿದ್ದೀರಿ. ನಿಜಜೀವನದಲ್ಲೂ ದೇವರೇ ಆಗಿಬಿಟ್ಟಿದ್ದೀರಿ’ ಎಂದು ಅಪ್ಪು ಅಭಿಮಾನಿಯೊಬ್ಬರು ಕಮೆಂಟ್​ ಮಾಡಿದ್ದಾರೆ. ‘ಸೆಕೆಂಡ್​ ಚಾನ್ಸ್​ ಕೊಡ್ತೀನಿ ಅಂತ ಹೇಳಿದ್ದೀರಿ. ಆದರೆ ಆ ದೇವರು ನಿಮಗೆ ಸೆಕೆಂಡ್​ ಚಾನ್ಸ್ ಕೊಡಲಿಲ್ಲ’ ಎಂದು ಮತ್ತೋರ್ವ ಅಭಿಮಾನಿ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ
Image
Puneeth Rajkumar Twitter: ಮರಳಿ ಬಂತು ಪುನೀತ್​ ರಾಜ್​ಕುಮಾರ್​ ಟ್ವಿಟರ್​ ಖಾತೆಯ ಬ್ಲೂ ಟಿಕ್​; ಸಂಭ್ರಮಿಸಿದ ಅಪ್ಪು ಫ್ಯಾನ್ಸ್​
Image
Puneeth Rajkumar: ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿನ ಪುನೀತ್​ ಪೋಟೋಗಳು; ‘ನಮ್ಮ ಬಾಸ್​ ಸೂಪರ್​’ ಎಂದ ಫ್ಯಾನ್ಸ್​
Image
Ashwini Puneeth Rajkumar: ಪುನೀತ್​ ರಾಜ್​ಕುಮಾರ್​ ಹಾಡಿದ ‘ಅಪರೂಪ’ದ ಸಾಂಗ್​ ರಿಲೀಸ್​ ಮಾಡಿದ ಪತ್ನಿ ಅಶ್ವಿನಿ
Image
ಪುನೀತ್​ ಪುತ್ಥಳಿ ಅನಾವರಣದ ವೇಳೆ ಬಿಕ್ಕಿ ಬಿಕ್ಕಿ ಅತ್ತ ರಾಘವೇಂದ್ರ ರಾಜ್​ಕುಮಾರ್​ ಪತ್ನಿ ಮಂಗಳಾ

ಪ್ರಭುದೇವ ಅವರು ಡ್ಯಾನ್ಸ್​ ವಿಚಾರದಲ್ಲಿ ಸಿಕ್ಕಾಪಟ್ಟೆ ಫೇಮಸ್​. ಇನ್ನು, ಪುನೀತ್​ ಕೂಡ ತುಂಬ ಚೆನ್ನಾಗಿ ಡ್ಯಾನ್ಸ್​ ಮಾಡುತ್ತಾರೆ. ಒಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದರೆ ಅಭಿಮಾನಿಗಳ ಪಾಲಿಗೆ ಹಬ್ಬವೇ ಸರಿ. ಆ ಹಾಡನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಾಧು ಕೋಕಿಲ, ರೋಶಿನಿ ಪ್ರಕಾಶ್​ ಮುಂತಾದವರು ಕೂಡ ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿ ನಟಿಸಿದ್ದಾರೆ. ಎಸ್​. ನಾಗೇಂದ್ರ ಪ್ರಸಾದ್​ ನಿರ್ದೇಶನ ಮಾಡಿದ್ದಾರೆ.

Published On - 1:28 pm, Mon, 25 July 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ