AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್​ ಶೆಟ್ಟಿ ಮುದ್ದಿನ ಪುತ್ರಿ ರಾಧ್ಯ ಹುಟ್ಟುಹಬ್ಬ ಹೇಗಿತ್ತು? ವಿಡಿಯೋ ಹಂಚಿಕೊಂಡ ‘ಕಾಂತಾರ’ ಹೀರೋ

Rishab Shetty | Raadhya Shetty: ಪುತ್ರಿ ರಾಧ್ಯ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು ರಿಷಬ್​ ಶೆಟ್ಟಿ ಅವರು ಅದ್ದೂರಿಯಾಗಿ ಆಚರಿಸಿದ್ದಾರೆ. ಕನ್ನಡ ಚಿತ್ರರಂಗದ ಗಣ್ಯರನ್ನೆಲ್ಲ ಆಹ್ವಾನಿಸಿ ಔತಣ ನೀಡಿದ್ದಾರೆ.

ರಿಷಬ್​ ಶೆಟ್ಟಿ ಮುದ್ದಿನ ಪುತ್ರಿ ರಾಧ್ಯ ಹುಟ್ಟುಹಬ್ಬ ಹೇಗಿತ್ತು? ವಿಡಿಯೋ ಹಂಚಿಕೊಂಡ ‘ಕಾಂತಾರ’ ಹೀರೋ
ರಾಧ್ಯ ಶೆಟ್ಟಿಯ ಮೊದಲ ವರ್ಷದ ಬರ್ತ್​ಡೇ ಆಚರಣೆ
ಮದನ್​ ಕುಮಾರ್​
|

Updated on:Mar 21, 2023 | 3:01 PM

Share

ನಟ ರಿಷಬ್​ ಶೆಟ್ಟಿ (Rishab Shetty) ಅವರು ಸಿನಿಮಾದ ಬ್ಯುಸಿ ಕೆಲಸಗಳ ನಡುವೆ ಕುಟುಂಬಕ್ಕೆ ಸಮಯ ಕೊಡುವುದನ್ನು ಮಿಸ್​ ಮಾಡುವುದಿಲ್ಲ. ರಿಷಬ್​ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿಯ ಮುದ್ದಿನ ಮಗಳಾದ ರಾಧ್ಯ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬವನ್ನು (Raadhya Shetty birthday) ಮಾರ್ಚ್​ 4ರಂದು ಆಚರಿಸಲಾಯಿತು. ಈ ಖುಷಿಯ ಕ್ಷಣದಲ್ಲಿ ಇಡೀ ಸ್ಯಾಂಡಲ್​ವುಡ್​ ಭಾಗಿ ಆಗಿತ್ತು ಎಂದರೂ ತಪ್ಪಿಲ್ಲ. ಬಹುತೇಕ ಎಲ್ಲ ಸ್ಟಾರ್​ ನಟ-ನಟಿಯರು ರಾಧ್ಯ ಶೆಟ್ಟಿ (Raadhya Shetty) ಬರ್ತ್​ಡೇ ಪಾರ್ಟಿಗೆ ಆಗಮಿಸಿದ್ದರು. ಆ ದಿನದ ಸಂಭ್ರಮ ಹೇಗಿತ್ತು ಎಂಬುದನ್ನು ತಿಳಿಸಲು ರಿಷಬ್​ ಶೆಟ್ಟಿ ಅವರು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ರಾಧ್ಯ ಶೆಟ್ಟಿಗೆ ಶುಭ ಕೋರಿದ್ದಾರೆ.

2022ರ ಮಾರ್ಚ್​ 4ರಂದು ಪ್ರಗತಿ ಶೆಟ್ಟಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅದು ರಿಷಬ್​ ಶೆಟ್ಟಿ ಅವರ ಪಾಲಿಗೆ ಅದೃಷ್ಟದ ವರ್ಷ. ಮಗಳ ಆಗಮನದ ಜೊತೆಗೆ ಅದೇ ವರ್ಷ ‘ಕಾಂತಾರ’ ಚಿತ್ರ ಕೂಡ ತೆರೆಕಂಡು ಬ್ಲಾಕ್​ ಬಸ್ಟರ್​ ಹಿಟ್​ ಆಯಿತು. ಈಗ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ರಿಷಬ್​ ಶೆಟ್ಟಿ ಅವರು ಬಹಳ ಅದ್ದೂರಿಯಾಗಿ ಆಚರಿಸಿದ್ದಾರೆ. ಚಂದನವನದ ಗಣ್ಯಾತಿಗಣ್ಯರನ್ನೆಲ್ಲ ಆಹ್ವಾನಿಸಿ ರಿಷಬ್​ ಶೆಟ್ಟಿ ಔತಣ ನೀಡಿದ್ದಾರೆ.

ಇದನ್ನೂ ಓದಿ
Image
Rajinikanth: ‘ಕಾಂತಾರ 2’ ಚಿತ್ರದಲ್ಲಿ ರಜನಿಕಾಂತ್​ ನಟಿಸ್ತಾರಾ? ರಿಷಬ್​ ಶೆಟ್ಟಿ ಸಿನಿಮಾ ಬಗ್ಗೆ ಹೊಸ ಚರ್ಚೆ ಶುರು
Image
Rishab Shetty: ‘ಕಾಂತಾರ’ ಚಿತ್ರದ ನಟ, ನಿರ್ದೇಶಕ ರಿಷಬ್​ ಶೆಟ್ಟಿಗೆ ‘ದಾದಾ ಸಾಹೇಬ್​ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ’
Image
Rishab Shetty: ‘ಮೋದಿ ಹಲವು ಬಾರಿ ಕಾಂತಾರ ಬಗ್ಗೆ ಮಾತಾಡಿದ್ದು ಕೇಳಿ ಖುಷಿ ಆಯ್ತು’: ಪ್ರಧಾನಿ ಭೇಟಿ ಬಗ್ಗೆ ರಿಷಬ್​ ಪ್ರತಿಕ್ರಿಯೆ
Image
Rishab Shetty: ರಿಷಬ್​ ಶೆಟ್ಟಿ ವಿವಾಹ ವಾರ್ಷಿಕೋತ್ಸವ; ಪತ್ನಿ ಜತೆಗಿನ ಚಂದದ ಫೋಟೋ ಹಂಚಿಕೊಂಡ ‘ಕಾಂತಾರ’ ಹೀರೋ

ವಿಶ್ವಸಂಸ್ಥೆಯಲ್ಲಿ ಪರಿಸರ ಸಂರಕ್ಷಣೆ ಮಹತ್ವ ಸಾರಿದ ರಿಷಬ್ ಶೆಟ್ಟಿ: ಭಾಷಣ ಇಲ್ಲಿದೆ

ರವಿಚಂದ್ರನ್​, ಅಶ್ವಿನಿ ಪುನೀತ್​ ರಾಜ್​ಕುಮಾರ್​, ರಮೇಶ್​ ಅರವಿಂದ್​, ಗಣೇಶ್​, ವಿಜಯ್​ ಪ್ರಕಾಶ್​, ವಿಜಯ್​ ಕಿರಗಂದೂರು, ರಮ್ಯಾ, ಉಪೇಂದ್ರ, ಅಯ್ಯೋ ಶ್ರದ್ಧಾ, ಅವಿನಾಶ್​, ಮಾಳವಿಕಾ, ಸುಧಾರಾಣಿ, ಧ್ರುವ ಸರ್ಜಾ, ಸಂತೋಷ್​ ಆನಂದ್​ ರಾಮ್​, ಅರ್ಜುನ್​ ಸರ್ಜಾ, ಪವನ್​ ಕುಮಾರ್​, ಸಪ್ತಮಿ ಗೌಡ, ತಪಸ್ವಿನಿ, ರಚನಾ ಇಂದರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಖುಷಿಗೆ ಸಾಕ್ಷಿಯಾದರು. ಡಿಕೆ ಶಿವಕುಮಾರ್​, ಸಿ.ಎನ್​. ಅಶ್ವತ್ಥ ನಾರಾಯಣ ಸೇರಿದಂತೆ ಕೆಲವು ರಾಜಕೀಯ ಮುಖಂಡರು ಕೂಡ ಭಾಗಿಯಾದರು.

‘ಕಾಂತಾರ 2’ ಚಿತ್ರಕ್ಕೆ ರಿಷಬ್​ ಶೆಟ್ಟಿ ತಯಾರಿ:

ದೇಶಾದ್ಯಂತ ಅಬ್ಬರಿಸಿದ ‘ಕಾಂತಾರ’ ಸಿನಿಮಾದಿಂದ ರಿಷಬ್​ ಶೆಟ್ಟಿ ಅವರು ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಅವರೀಗ ‘ಕಾಂತಾರ 2’ ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಮಳೆಗಾಲದಲ್ಲಿ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ. ಇದು ಪ್ರೀಕ್ವೆಲ್​ ಆಗಿರಲಿದ್ದು, ರಿಷಬ್​ ಶೆಟ್ಟಿ ಅವರು ಯಾವ ಕಥೆ ಹೇಳಲಿದ್ದಾರೆ ಎಂಬ ಕೌತುಕ ಮೂಡಿದೆ. ಅಲ್ಲದೇ ಪಾತ್ರವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:01 pm, Tue, 21 March 23

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ