ಒಟ್ಟಾವಾ ಅಕ್ಟೋಬರ್ 03: ಕೆನಡಾ (Canada) ಭಾರತದೊಂದಿಗೆ ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ. ನಾವು ಭಾರತ ಸರ್ಕಾರದೊಂದಿಗೆ ಜವಾಬ್ದಾರಿಯುತವಾಗಿ ಮತ್ತು ರಚನಾತ್ಮಕವಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ (Hardeep Singh Nijjar) ಸಂಬಂಧಿಸಿದಂತೆ ಒಟ್ಟಾವಾ ಭಾರತೀಯ ರಾಜತಾಂತ್ರಿಕನನ್ನು ಹೊರಹಾಕಿದ ನಂತರ ಭಾರತ ಸರ್ಕಾರದ ರಾಜತಾಂತ್ರಿಕ ಜಗಳದ ನಡುವೆ ಟ್ರೂಡೊ ಅವರ ಹೇಳಿಕೆ ಬಂದಿದೆ. ಜೂನ್ 18 ರಂದು ಸರ್ರೆಯಲ್ಲಿ ನಡೆದ ನಿಜ್ಜರ್ ಹತ್ಯೆ ಮತ್ತು ಭಾರತೀಯ ಸರ್ಕಾರಿ ಏಜೆಂಟರ ನಡುವಿನ ಸಂಭಾವ್ಯ ಸಂಬಂಧದ ಆರೋಪಗಳನ್ನು ಟ್ರುಡೊ ಮಾಡಿದ್ದರು.
ಕೆನಡಾದಲ್ಲಿ ತನ್ನ ಕಾರ್ಯಾಚರಣೆಗಳಿ ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವಂತೆ ಭಾರತವು ಕೆನಡಾವನ್ನು ಕೇಳಿದ ದಿನದಂದು ಕೆನಡಾದ ಪ್ರಧಾನ ಮಂತ್ರಿಯ ಹೇಳಿಕೆ ಬಂದಿದೆ. ಪರಸ್ಪರ ರಾಜತಾಂತ್ರಿಕ ಉಪಸ್ಥಿತಿಯಲ್ಲಿ “ಶಕ್ತಿಯಲ್ಲಿ ಸಮಾನತೆ ಮತ್ತು ಶ್ರೇಣಿಯ ಸಮಾನತೆಯ” ಅಗತ್ಯದ ಬಗ್ಗೆ ಕೆನಡಾದ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಕಳೆದ ತಿಂಗಳು ಹೇಳಿತ್ತು.
ಭಾನುವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಅಮೆರಿಕಾದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸುವಾಗ ಕೆನಡಾವನ್ನು ಉಲ್ಲೇಖಿಸಿ, ಭಾರತೀಯ ರಾಜತಾಂತ್ರಿಕರು ಮತ್ತು ಮಿಷನ್‌ಗಳ ವಿರುದ್ಧ ಹಿಂಸಾಚಾರ, ಬೆದರಿಕೆಯಂತಹ ವಿಷಯಗಳನ್ನು ಹೇಳುವುದು ಅಗತ್ಯವಾಗಿದೆ. ಇದು ಬೇರೆ ಯಾವುದೇ ದೇಶದಲ್ಲಿ ಆಗುತ್ತಿದ್ದರೆ ಜಗತ್ತು ಅದನ್ನು ಸಮಚಿತ್ತದಿಂದ ಸ್ವೀಕರಿಸುತ್ತಿತ್ತೇ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇಂದು ಹಿಂಸಾಚಾರದ ವಾತಾವರಣವಿದೆ, ಬೆದರಿಕೆಯ ವಾತಾವರಣವಿದೆ. ಅದರ ಬಗ್ಗೆ ಯೋಚಿಸಿ. ರಾಯಭಾರಿ ಕಚೇರಿ ಮುಂದೆ ಹೊಗೆ ಬಾಂಬ್‌ಗಳನ್ನು ಎಸೆಯಲಾಗಿತ್ತು. ನಾವು ನಮ್ಮ ದೂತಾವಾಸಗಳನ್ನು ಹೊಂದಿದ್ದೇವೆ. ಅವುಗಳ ಮುಂದೆ ಹಿಂಸೆ ನಡೆದಿದೆ. ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಲಾಗಿದೆ. ಜನರ ಬಗ್ಗೆ ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ಜೈ ಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: 1980ರಿಂದಲೇ ಕೆನಡಾದೊಂದಿಗೆ ಸಂಘರ್ಷವಿದೆ; ಬ್ಲಿಂಕೆನ್, ಸುಲ್ಲಿವಾನ್ ಜತೆ ಮಾತನಾಡಿರುವೆ: ಜೈಶಂಕರ್
ಟ್ರುಡೊ ಅವರ ಆರೋಪಗಳ ಬಗ್ಗೆ ಕೇಳಿದಾಗ, ವಿದೇಶಾಂಗ ವ್ಯವಹಾರಗಳ ಸಚಿವರು ಕೆನಡಾದವರು ಕೆಲವು ಆರೋಪಗಳನ್ನು ಮಾಡಿದ್ದಾರೆ. ಇದು ಭಾರತ ಸರ್ಕಾರದ ನೀತಿಯಲ್ಲ ಎಂದು ನಾವು ಅವರಿಗೆ ಸೂಚಿಸಿದ್ದೇವೆ ಅವರು ನಮ್ಮೊಂದಿಗೆ ನಿರ್ದಿಷ್ಟವಾದದು ಅಥವಾ ಇದಕ್ಕೆ ಸಂಬಂಧಿದ್ದನ್ನು ಹಂಚಿಕೊಳ್ಳಲು ಸಿದ್ಧರಿದ್ದರೆ, ನಾವು ಅದನ್ನು ನೋಡುತ್ತೇವೆ ಎಂದು ಹೇಳಿದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ