ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿಗೂ ಮಹಾಮಾರಿ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರು ಇತ್ತೀಚೆಗೆ ತೀವ್ರ ಜ್ವರ ಹಾಗೂ ಫ್ಲೂನಿಂದ ಬಳಲುತ್ತಿದ್ದರು. ಇದರ ಪರಿಣಾಮ ತಾವು ಕೂಡ ಮನೆಯಿಂದಲೇ ಕೆಲಸ ಮಾಡಲು ತೀರ್ಮಾನಿಸಿದ್ದರು. ಇತ್ತೀಚೆಗೆ ಲಂಡನ್ಗೆ ತೆರಳಿದ್ದ ಟ್ರುಡೊ ಅವರ ಪತ್ನಿ, ಕೆನಡಾಗೆ ಮರಳಿದ್ದರು. ಕೆನಡಾಗೆ ಮರಳಿದ ನಂತರ ಟ್ರುಡೊ ಪತ್ನಿಗೆ ಫ್ಲೂ ಲಕ್ಷಣಗಳು ಕಾಣಿಸಿಕೊಂಡಿದ್ದವು.
ನಿನ್ನೆಯಷ್ಟೇ ಬ್ರಿಟನ್ನ ಆರೋಗ್ಯ ಸಚಿವೆಗೂ ಕೊರೊನಾ ವೈರಸ್ ಅಟ್ಯಾಕ್ ಆಗಿತ್ತು. ಇದೀಗ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಪತ್ನಿಗೂ ಸಹ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
‘ಕೊರೊನಾ’ ವಿರುದ್ಧ ‘ಡ್ರ್ಯಾಗನ್’ ಯುದ್ಧ:
ಕೊರೊನಾ ವಿರುದ್ಧ ಯುದ್ಧ ಸಾರಿರುವ ಚೀನಾ, ಡೆಡ್ಲಿ ಕೊರೊನಾ ವೈರಸ್ ಹರಡವುದನ್ನ ನಿಯಂತ್ರಿಸಲು ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದೆ. ಚೀನಾ ಪೊಲೀಸರಿಗೆ ರೊಬೊ ಕ್ಯಾಪ್ ಹೆಲ್ಮೆಟ್ಗಳನ್ನ ನೀಡಲಾಗಿದ್ದು, ಇದರ ಮೂಲಕ ಚೀನಾ ಪೊಲೀಸರು ಕೊರೊನಾ ಸೋಂಕಿತರನ್ನ ಗುರುತಿಸಲು ಸಾಧ್ಯವಾಗುತ್ತಿದೆ.
ಡೊನಾಲ್ಡ್ ಟ್ರಂಪ್ಗೂ ಕೊರೊನಾ ಭೀತಿ:
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಕೊರೊನಾ ಭೀತಿ ಕಾಡಲಾರಂಭಿಸಿದೆ. ಕೆಲದಿನಗಳ ಹಿಂದೆ ಬ್ರೆಜಿಲ್ ಅಧ್ಯಕ್ಷ ಅಮೆರಿಕಾಗೆ ಭೇಟಿ ನೀಡಿದ್ದ ವೇಳೆ ಅವರ ಜೊತೆಗಿದ್ದ ಸಂವಹನ ಅಧಿಕಾರಿಗೆ ಕೊರೊನಾ ತಗುಲಿದೆ. ಈ ಅಧಿಕಾರಿ ಟ್ರಂಪ್ ಜೊತೆಗೂ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
Published On - 11:45 am, Fri, 13 March 20