Hong Kong: ಹಾಂಗ್​ಕಾಂಗ್ ವಿಮಾನದಲ್ಲಿ ಕ್ಯಾಥೆ ಪೆಸಿಫಿಕ್ ವಿಮಾನದ ಟೈರ್ ಸ್ಫೋಟ, 11 ಮಂದಿಗೆ ಗಾಯ

|

Updated on: Jun 25, 2023 | 8:26 AM

ಹಾಂಕ್​ಕಾಂಗ್​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಥೆ ಪೆಸಿಫಿಕ್(Cathay Pacific) ವಿಮಾನದ ಟೈರ್ ಸ್ಫೋಟಗೊಂಡ ಪರಿಣಾಮ 11 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ.

Hong Kong:  ಹಾಂಗ್​ಕಾಂಗ್ ವಿಮಾನದಲ್ಲಿ ಕ್ಯಾಥೆ ಪೆಸಿಫಿಕ್ ವಿಮಾನದ ಟೈರ್ ಸ್ಫೋಟ, 11 ಮಂದಿಗೆ ಗಾಯ
ವಿಮಾನ
Follow us on

ಹಾಂಕ್​ಕಾಂಗ್​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಥೆ ಪೆಸಿಫಿಕ್(Cathay Pacific) ವಿಮಾನದ ಟೈರ್ ಸ್ಫೋಟಗೊಂಡ ಪರಿಣಾಮ 11 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಹಾಂಗ್​ಕಾಂಗ್​ನಿಂದ ಲಾಸ್​ ಏಂಜಲೀಸ್​ಗೆ ಹೊರಟಿದ್ದ ವಿಮಾನದಲ್ಲಿ 17 ಸಿಬ್ಬಂದಿ ಹಾಗೂ 293 ಪ್ರಯಾಣಿಕರಿದ್ದರು.

ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಈ ಪೈಕಿ 9 ಮಂದಿಯನ್ನು ಡಿಸ್ಚಾರ್ಜ್​ ಮಾಡಲಾಗಿದೆ. ಐದು ಡೋರ್ ಎಸ್ಕೇಪ್ ಸ್ಲೈಡ್​ಗಳನ್ನು ಬಳಸಿಕೊಂಡು ಪ್ರಯಾಣಿಕರು ವಿಮಾನದಿಂದ ಇಳಿದಿದ್ದಾರೆ.

ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್​ ಇಂಡಿಯಾ ವಿಮಾನ ಸ್ವೀಡನ್​ನಲ್ಲಿ ತುರ್ತು ಭೂಸ್ಪರ್ಶ

ವಿಮಾನದ ಟೈರ್​ಗಳು ಹೆಚ್ಚು ಬಿಸಿಯಾಗಿದ್ದ ಕಾರಣ ಸಿಡಿದಿದೆ, ವಿಮಾನದಿಂದ ಕೆಳಗಿಳಿಯುವ ವೇಳೆ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೇ ಸಮಯದಲ್ಲಿ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗಾಗಿ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ