ಅಮೆರಿಕದಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದೆ. ಫ್ಯಾಮಿಲಿ ಟುಗೆದರ್ ಕಾರ್ಯಕ್ರಮವೊಂದರಲ್ಲಿ ಅಪರಿಚಿತ ದುಷ್ಕರ್ಮಿಗಳು 11 ಮಕ್ಕಳ ಮೇಲೆ ಗುಂಡು ಹಾರಿಸಿದ್ದಾರೆ. 8 ವರ್ಷದ ಬಾಲಕಿ ತಲೆಗೆ ಗುಂಡು ತಗುಲಿ ಆಕೆ ಅಲ್ಲಿಯೇ ಸಾವನ್ನಪ್ಪಿದ್ದಾಳೆ. ಇನ್ನೂ 10 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
11 ಮಂದಿಯಲ್ಲಿ ನಾಲ್ವರು ಮಕ್ಕಳು, ಒಂದು ವರ್ಷದ ಬಾಲಕ ಮತ್ತು ಎಂಟು ವರ್ಷದ ಬಾಲಕನಿಗೆ ಹಲವು ಬಾರಿ ಗುಂಡು ತಗುಲಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.
ಘಟನೆಯಲ್ಲಿ ಒಂಬತ್ತು ವರ್ಷದ ಮತ್ತೊಬ್ಬ ಬಾಲಕ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ. ಪೊಲೀಸರು ಗುಂಡು ಹಾರಿಸಿದ ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ.
ಮತ್ತಷ್ಟು ಓದಿ:ಅಫ್ಘಾನಿಸ್ತಾನ ವಿರುದ್ಧ ಪಾಕಿಸ್ತಾನ ವೈಮಾನಿಕ ದಾಳಿ; ಮಹಿಳೆ, ಮಕ್ಕಳು ಸೇರಿದಂತೆ 8 ಮಂದಿ ಸಾವು
ರಾತ್ರಿ 9 ಗಂಟೆ ವೇಳೆಗೆ ಫ್ಯಾಮಿಲಿ ಟುಗೆದರ್ ಕಾರ್ಯಕ್ರಮವೊಂದರಲ್ಲಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಕೈ ಮತ್ತು ಬೆನ್ನಿಗೆ ಗುಂಡು ತಗುಲಿದ 36 ವರ್ಷದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ