‘ಚೀನಾ ವಿಶ್ವ ವ್ಯಾಪಾರ ಸಂಘಟನೆಯನ್ನೂ ತನ್ನ ಕಪಿಮುಷ್ಟಿಯಲ್ಲಿ ಇಟ್ಕೊಂಡಿದೆ’

|

Updated on: Aug 07, 2020 | 6:44 AM

ಚೀನಾ ಕೊರೊನಾ ಮಹಾಮಾರಿಯನ್ನು ಜಗತ್ತಿಗೆ ಅಂಟಿಸಿದ್ದೇ ಬಂತು, ಚೀನಾಕ್ಕೆ ಶನಿದೆಸೆ ಶುರುವಾದಂತಿದೆ. ಕೆಲ ನೆರೆ ರಾಷ್ಟ್ರಗಳನ್ನು ಹೊರತುಪಡಿಸಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಅದರ ಮೇಲೆ ಮುರುಕೊಂಡು ಬಿದ್ದಿವೆ. ಅದರಲ್ಲೂ ದೊಡ್ಡಣ್ಣ ಅಮೆರಿಕಾವಂತೂ ಚೀನಾ ವಿರುದ್ಧ ಕೆಂಡಕಾರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮೇಲೆಯೇ ಹಿಡಿತ ಸಾಧಿಸಿ, ಕೊರೊನಾ ವಿಷಯದಲ್ಲಿ ಇಡೀಜಗತ್ತಿನ ದಿಕ್ಕುತಪ್ಪಿಸಿತು. ಅಷ್ಟೇ ಅಲ್ಲ; ಜಗತ್ತಿನ ಆರೋಗ್ಯವನ್ನೇ ಏರುಪೇರು ಮಾಡಿಬಿಟ್ಟಿತು ಎಂದು ಖುದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಝಾಡಿಸಿದ್ದರು. ಇದು ನಿಜ, ವಾಸ್ತವ ಎಂದು ಬಣ್ಣಿಸಿರುವ ಟ್ರಂಪ್: […]

‘ಚೀನಾ ವಿಶ್ವ ವ್ಯಾಪಾರ ಸಂಘಟನೆಯನ್ನೂ ತನ್ನ ಕಪಿಮುಷ್ಟಿಯಲ್ಲಿ ಇಟ್ಕೊಂಡಿದೆ’
Follow us on

ಚೀನಾ ಕೊರೊನಾ ಮಹಾಮಾರಿಯನ್ನು ಜಗತ್ತಿಗೆ ಅಂಟಿಸಿದ್ದೇ ಬಂತು, ಚೀನಾಕ್ಕೆ ಶನಿದೆಸೆ ಶುರುವಾದಂತಿದೆ. ಕೆಲ ನೆರೆ ರಾಷ್ಟ್ರಗಳನ್ನು ಹೊರತುಪಡಿಸಿ ಜಗತ್ತಿನ ಎಲ್ಲಾ ರಾಷ್ಟ್ರಗಳು ಅದರ ಮೇಲೆ ಮುರುಕೊಂಡು ಬಿದ್ದಿವೆ.

ಅದರಲ್ಲೂ ದೊಡ್ಡಣ್ಣ ಅಮೆರಿಕಾವಂತೂ ಚೀನಾ ವಿರುದ್ಧ ಕೆಂಡಕಾರುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ಮೇಲೆಯೇ ಹಿಡಿತ ಸಾಧಿಸಿ, ಕೊರೊನಾ ವಿಷಯದಲ್ಲಿ ಇಡೀಜಗತ್ತಿನ ದಿಕ್ಕುತಪ್ಪಿಸಿತು. ಅಷ್ಟೇ ಅಲ್ಲ; ಜಗತ್ತಿನ ಆರೋಗ್ಯವನ್ನೇ ಏರುಪೇರು ಮಾಡಿಬಿಟ್ಟಿತು ಎಂದು ಖುದ್ದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಝಾಡಿಸಿದ್ದರು.

ಇದು ನಿಜ, ವಾಸ್ತವ ಎಂದು ಬಣ್ಣಿಸಿರುವ ಟ್ರಂಪ್:
ಇದೀಗ ಇನ್ನೂ ಒಂದು ಹಜ್ಜೆ ಮುಂದೆ ಹೋಗಿರುವ ಟ್ರಂಪ್ ಚೀನಾ ಕೇವಲ ವಿಶ್ವ ಆರೋಗ್ಯ ಸಂಸ್ಥೆ-  WHO ಮೇಲಷ್ಟೇ ಅಲ್ಲ, ವಿಶ್ವ ವ್ಯಾಪಾರ ಸಂಘಟನೆ ಮೇಲೆಯೂ ಹಿಡಿತ ಸಾಧಿಸಿದೆ. World Trade Organisation ನ ಒಂದೊಂದು ನೀತಿಯನ್ನೂ ಗಾಳಿಗೆ ತೂರಿದೆ. ಒಂದೊಂದು ರೂಲ್​ ಅನ್ನೂ ಮುರಿದಿದೆ. ವಿಶ್ವ ವ್ಯಾಪಾರ ಒಡಂಬಡಿಕೆಗೆ ಎಂಟ್ರಿ ಕೊಟ್ಟಿದ್ದೇ ತಡ, ಚೀನಾ ವ್ಯಾಪಾರದ ಎಲ್ಲಾ ಕಾನೂನುಗಳನ್ನೂ ಮುರಿದಿದೆ. ತನ್ಮೂಲಕ ಇಡೀ ಜಗತ್ತಿನ ಮೇಲೆ ಆರ್ಥಿಕವಾಗಿಯೂ ಹಿಡಿತ ಸಾಧಿಸಿಕೊಳ್ಳಲು ಹವಣಿಸುತ್ತಿದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.

Published On - 6:41 am, Fri, 7 August 20