ಅಮೆರಿಕ ಯುದ್ಧನೌಕೆಗಳ ಪ್ರತಿರೂಪ ತಯಾರಿಸಿ ತರಬೇತಿಗೆ ಬಳಸಿದ ಚೀನಾ; ಉಪಗ್ರಹ ಚಿತ್ರಗಳು ಸಾಕ್ಷಿ

| Updated By: ರಶ್ಮಿ ಕಲ್ಲಕಟ್ಟ

Updated on: Nov 08, 2021 | 3:39 PM

ಚೀನಾದ ಹಡಗು ವಿರೋಧಿ ಕ್ಷಿಪಣಿ ಕಾರ್ಯಕ್ರಮಗಳನ್ನು ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್ (PLARF) ನೋಡಿಕೊಳ್ಳುತ್ತದೆ. ಈ ಬಗ್ಗೆ ಚೀನಾದ ರಕ್ಷಣಾ ಸಚಿವಾಲಯವು ತಕ್ಷಣ ಪ್ರತಿಕ್ರಿಯಿಸಲಿಲ್ಲ.

ಅಮೆರಿಕ ಯುದ್ಧನೌಕೆಗಳ ಪ್ರತಿರೂಪ ತಯಾರಿಸಿ ತರಬೇತಿಗೆ ಬಳಸಿದ ಚೀನಾ; ಉಪಗ್ರಹ ಚಿತ್ರಗಳು ಸಾಕ್ಷಿ
ಮ್ಯಾಕ್ಸರ್‌ ಉಪಗ್ರಹ ಚಿತ್ರಗಳು
Follow us on

ಬೀಜಿಂಗ್: ಚೀನಾದ ಮಿಲಿಟರಿಯು(China’s military) ಅಮೆರಿಕ ನೌಕಾಪಡೆಯ ವಿಮಾನವಾಹಕ ನೌಕೆ (US Warships) ಮತ್ತು ಇತರ ಯುದ್ಧನೌಕೆಗಳ ಆಕಾರದಲ್ಲಿ ಪ್ರತಿರೂಪಗಳನ್ನು ನಿರ್ಮಿಸಿದೆ. ಇದನ್ನು ಗುರಿಯಾಗಿರಿಸಿ ಕ್ಸಿನ್‌ಜಿಯಾಂಗ್‌ನ (Xinjiang) ಮರುಭೂಮಿಯಲ್ಲಿ ಚೀನಾ ತರಬೇತಿ ನೀಡುತ್ತಿದೆ ಎಂದು ಮ್ಯಾಕ್ಸರ್‌ನ (Maxar) ಉಪಗ್ರಹ ಚಿತ್ರಗಳು ಭಾನುವಾರ ತೋರಿಸಿವೆ. ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರದ ಮೇಲೆ ವಾಷಿಂಗ್ಟನ್‌ನೊಂದಿಗೆ ಉದ್ವಿಗ್ನತೆ ಹೆಚ್ಚಿರುವ ಕಾರಣ, ನಿರ್ದಿಷ್ಟವಾಗಿ ಅಮೆರಿಕ ನೌಕಾಪಡೆಯ ವಿರುದ್ಧ ವಾಹಕ-ವಿರೋಧಿ ಸಾಮರ್ಥ್ಯಗಳನ್ನು ನಿರ್ಮಿಸಲು ಚೀನಾದ ಪ್ರಯತ್ನಗಳನ್ನು ಈ ಪ್ರತಿರೂಪಗಳು ಪ್ರತಿಬಿಂಬಿಸುತ್ತವೆ.  ಉಪಗ್ರಹ ಚಿತ್ರಗಳು ಅಮೆರಿಕ ವಾಹಕದ ಪೂರ್ಣ-ಪ್ರಮಾಣದ ರೂಪರೇಖೆಯನ್ನು ತೋರಿಸಿದೆ. ಟಕ್ಲಾಮಕನ್ ಮರುಭೂಮಿಯಲ್ಲಿ ಹೊಸ ಗುರಿ ಶ್ರೇಣಿಯ ಸಂಕೀರ್ಣವಾಗಿ ಕಂಡುಬರುವ ಸ್ಥಳದಲ್ಲಿ ಕನಿಷ್ಠ ಎರಡು ಅರ್ಲೀ ಬರ್ಕ್-ಕ್ಲಾಸ್ ಮಾರ್ಗದರ್ಶಿ ಕ್ಷಿಪಣಿ ವಿಧ್ವಂಸಕಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ತೋರಿಸಿದೆ.

ಇವುಗಳನ್ನು ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆಗಾಗಿ ಬಳಸಲಾಗಿದೆ ಎಂದು ಜಿಯೋಸ್ಪೇಷಿಯಲ್ ಇಂಟೆಲಿಜೆನ್ಸ್ ಕಂಪನಿ ಆಲ್ ಸೋರ್ಸ್ ಅನಾಲಿಸಿಸ್ ಅನ್ನು ಉಲ್ಲೇಖಿಸಿ ಅಮೆರಿಕ ನೇವಲ್ ಇನ್ಸ್ಟಿಟ್ಯೂಟ್ ವರದಿ ಮಾಡಿದೆ.
ಚೀನಾದ ಹಡಗು ವಿರೋಧಿ ಕ್ಷಿಪಣಿ ಕಾರ್ಯಕ್ರಮಗಳನ್ನು ಪೀಪಲ್ಸ್ ಲಿಬರೇಶನ್ ಆರ್ಮಿ ರಾಕೆಟ್ ಫೋರ್ಸ್ (PLARF) ನೋಡಿಕೊಳ್ಳುತ್ತದೆ. ಈ ಬಗ್ಗೆ ಚೀನಾದ ರಕ್ಷಣಾ ಸಚಿವಾಲಯವು ತಕ್ಷಣ ಪ್ರತಿಕ್ರಿಯಿಸಲಿಲ್ಲ.

ಚೀನಾದ ಮಿಲಿಟರಿಯ ಕುರಿತು ಪೆಂಟಗನ್‌ನ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ ಪಿಎಲ್ಎಆರ್​​ಎಫ್ ತನ್ನ ಮೊದಲ ದೃಢೀಕೃತ ಲೈವ್-ಫೈರ್ ಉಡಾವಣೆಯನ್ನು ಜುಲೈ 2020 ರಲ್ಲಿ ದಕ್ಷಿಣ ಚೀನಾ ಸಮುದ್ರಕ್ಕೆ ನಡೆಸಿತು. ಸ್ಪ್ರಾಟ್ಲಿ ದ್ವೀಪಗಳ ಉತ್ತರದ ನೀರಿನಲ್ಲಿ ಆರು DF-21 ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತು. ಚೀನಾ ತೈವಾನ್ ಮತ್ತು ನಾಲ್ಕು ಆಗ್ನೇಯ ಏಷ್ಯಾದ ದೇಶಗಳೊಂದಿಗೆ ಪ್ರಾದೇಶಿಕ ವಿವಾದಗಳನ್ನು ಹೊಂದಿದೆ.

ದಕ್ಷಿಣ ಚೀನಾ ಸಮುದ್ರದಲ್ಲಿ ದಾಳಿಗೆ ಒಳಗಾದರೆ ಫಿಲಿಪೈನ್ಸ್ ಅನ್ನು ಯುನೈಟೆಡ್ ಸ್ಟೇಟ್ಸ್ ರಕ್ಷಿಸುತ್ತದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಈ ವರ್ಷ ಜುಲೈನಲ್ಲಿ ಹೇಳಿದ್ದು ಚೀನಾ ತನ್ನ “ಪ್ರಚೋದನಕಾರಿ ನಡವಳಿಕೆ” ಯನ್ನು ನಿಲ್ಲಿಸುವಂತೆ ಎಚ್ಚರಿಸಿದರು.

ಇದನ್ನೂ ಓದಿ:  China Real Estate Sector Crisis: ಎವರ್​ಗ್ರ್ಯಾಂಡ್​ ನಂತರ ಇದೀಗ ಚೀನಾದ ಕೈಸಾ ಸಂಕಷ್ಟದಲ್ಲಿ

Published On - 3:34 pm, Mon, 8 November 21