Nigeria: ದಕ್ಷಿಣ ನೈಜರ್ನಲ್ಲಿ ಚಿನ್ನದ ಗಣಿ ಕುಸಿತ; 18 ಜನರ ಸಾವು, ಏಳು ಮಂದಿಗೆ ಗಾಯ
ನೈಜರ್ನ ಗರೀನ್ ಲಿಮಾನ್ ಗಣಿಯಲ್ಲಿ ದುರ್ಘಟನೆ ನಡೆದಿದೆ. ಕಾರ್ಮಿಕರು ಬಾವಿಯೊಳಗೆ ಅಗೆಯುತ್ತಿದ್ದಾಗ ಅದರ ಗೋಡೆಗಳು ಕುಸಿದಿದ್ದೇ ಇದಕ್ಕೆ ಕಾರಣ.
ನೈಜೀರಿಯಾದ ಗಡಿ ಸಮೀಪ ಇರುವ ದಕ್ಷಿಣ ನೈಜರ್ನಲ್ಲಿ ಚಿನ್ನದ ಗಣಿ ಕುಸಿದ ಪರಿಣಾಮ 18 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮೇಯರ್ ತಿಳಿಸಿದ್ದಾರೆ. ಗಣಿಯಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ 18 ಮಂದಿ ಜೀವಂತ ಸಮಾಧಿಯಾಗಿದ್ದಾರೆ. ಇನ್ನೂ ಏಳು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಾನ್-ಇಸ್ಸಾ ಜಿಲ್ಲೆಯ ಮೇಯರ್ ಆಡಮೌ ಗುರೌ ತಿಳಿಸಿದ್ದಾರೆ.
ನೈಜರ್ನ ಗರೀನ್ ಲಿಮಾನ್ ಗಣಿಯಲ್ಲಿ ದುರ್ಘಟನೆ ನಡೆದಿದೆ. ಕಾರ್ಮಿಕರು ಬಾವಿಯೊಳಗೆ ಅಗೆಯುತ್ತಿದ್ದಾಗ ಅದರ ಗೋಡೆಗಳು ಕುಸಿದಿದ್ದೇ ಇದಕ್ಕೆ ಕಾರಣ. ಇನ್ನೂ ಮೂರು ಮೃತದೇಹಗಳು ಗುಂಡಿಯೊಳಗೇ ಇರುವ ಸಾಧ್ಯತೆ ಇದೆ ಎಂದು ಸ್ಥಳೀಯ ಆಡಳಿತದ ಮೂಲಗಳು ತಿಳಿಸಿವೆ. ಗ್ಯಾರಿನ್-ಲಿಮಾನ್ ಗಣಿಗಳನ್ನು ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಕಂಡು ಹಿಡಿಯಲಾಗಿದೆ. ಆದರೆ ಈಗಲೇ ಸಾವಿರಾರು ಗಣಿಗಾರರು ಇಲ್ಲಿಗೆ ಆಗಮಿಸಿ, ಕೆಲಸ ಮಾಡುತ್ತಿದ್ದಾರೆ.
Breaking news: Reports that at least 20 people have died in a goldmine incident in Niger, leaving dozens of them trapped pic.twitter.com/MNZf4MLbSp
— Mawunya (@Mawunya_) November 8, 2021
ಇದನ್ನೂ ಓದಿ: ಭೋಪಾಲ್ ಮಕ್ಕಳ ಆಸ್ಪತ್ರೆ ಬೆಂಕಿ ದುರಂತ; 4 ಮಕ್ಕಳು ದುರ್ಮರಣ, 36 ಮಂದಿಯ ರಕ್ಷಣೆ