AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತತ ಎರಡನೇ ವರ್ಷವೂ ಚೀನಾದಲ್ಲಿ ಜನಸಂಖ್ಯೆ ಕುಸಿತ, ಮರಣ ಪ್ರಮಾಣ ಏರಿಕೆ

ಚೀನಾದಲ್ಲಿ ಸತತ ಎರಡನೇ ವರ್ಷವೂ ಜನಸಂಖ್ಯೆಯಲ್ಲಿ ಭಾರಿ ಕುಸಿತ ಉಂಟಾಗಿದೆ. ಹಾಗೆಯೇ ಮರಣ ಪ್ರಮಾಣವೂ ಹೆಚ್ಚಾಗಿದೆ. ಒಂದೆಡೆ ವಿಶ್ವದ ಹಲವು ರಾಷ್ಟ್ರಗಳು ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆತಂಕಗೊಂಡಿದ್ದರೆ, ಇನ್ನೊಂದೆಡೆ ಚೀನಾ ದೇಶದ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಸತತ ಎರಡನೇ ವರ್ಷವೂ ಚೀನಾದಲ್ಲಿ ಜನಸಂಖ್ಯೆ ಕುಸಿತ, ಮರಣ ಪ್ರಮಾಣ ಏರಿಕೆ
ಚೀನಾImage Credit source: Moneycontrol
ನಯನಾ ರಾಜೀವ್
|

Updated on: Jan 17, 2024 | 12:40 PM

Share

ಚೀನಾ(China)ದಲ್ಲಿ ಸತತ ಎರಡನೇ ವರ್ಷವೂ ಜನಸಂಖ್ಯೆ(Population)ಯಲ್ಲಿ ಭಾರಿ ಕುಸಿತ ಉಂಟಾಗಿದೆ. ಹಾಗೆಯೇ ಮರಣ ಪ್ರಮಾಣವೂ ಹೆಚ್ಚಾಗಿದೆ. ಒಂದೆಡೆ ವಿಶ್ವದ ಹಲವು ರಾಷ್ಟ್ರಗಳು ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆತಂಕಗೊಂಡಿದ್ದರೆ, ಇನ್ನೊಂದೆಡೆ ಚೀನಾ ದೇಶದ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ವರದಿಗಳ ಪ್ರಕಾರ, COVID-19 ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಹೆಚ್ಚಿದ ಸಾವಿನ ಪ್ರಮಾಣ ಮತ್ತು ಕಡಿಮೆ ಜನನ ಪ್ರಮಾಣದಿಂದಾಗಿ 2023 ರಲ್ಲಿ ಚೀನಾದಲ್ಲಿ ಜನಸಂಖ್ಯೆಯು 20 ಲಕ್ಷದಷ್ಟು ಇಳಿಯಲಿದೆ. ಚೀನಾದಲ್ಲಿ ಸತತ ಎರಡನೇ ವರ್ಷ ಜನಸಂಖ್ಯೆ ಇಳಿಮುಖವಾಗಿದೆ.

ಜನನ ಪ್ರಮಾಣ ಇಳಿಕೆ ಚೀನಾಕ್ಕೆ ಸವಾಲಾಗಿದೆ ಕೋವಿಡ್ -19 ಏಕಾಏಕಿ ಸಾವಿನ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದ ಬಗ್ಗೆ ಜನಸಂಖ್ಯಾಶಾಸ್ತ್ರಜ್ಞರು ಭಯಪಟ್ಟಿದ್ದಾರೆ. ಜನನ ಪ್ರಮಾಣ ಕಡಿಮೆಯಾಗುತ್ತಿರುವುದು ಚೀನಾಕ್ಕೆ ಆರ್ಥಿಕ ಮತ್ತು ಸಾಮಾಜಿಕ ಸವಾಲಾಗಿದೆ. ಹಿಂದಿನ ವರ್ಷಗಳಿಗೆ

ಹೋಲಿಸಿದರೆ ಕುಸಿತ ಕಡಿಮೆಯಾಗಿದೆ ಜನನ ಪ್ರಮಾಣ ಸತತ 7ನೇ ವರ್ಷಕ್ಕೆ ಕುಸಿದಿದೆ ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಕಳೆದ ವರ್ಷ, ಚೀನಾದಲ್ಲಿ ಸುಮಾರು 9 ಮಿಲಿಯನ್ ಮಕ್ಕಳು ಜನಿಸಿದ್ದರು. ಒಂದೇ ಮಗು ಎಂಬ ನೀತಿಯನ್ನು ಅಳವಡಿಸಿಕೊಂಡು ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸಲು ಚೀನಾ ಪ್ರಯತ್ನಿಸಿತ್ತು, ಆದರೆ ಈಗ ಅದು ವಿಭಿನ್ನ ಸಮಸ್ಯೆಯನ್ನು ಎದುರಿಸುತ್ತಿದೆ.

ಮತ್ತಷ್ಟು ಓದಿ: Population Shrink: ಚೀನಾದಲ್ಲಿ ಜನಸಂಖ್ಯೆ ಕುಸಿತ; ಏನು ಕಾರಣ? ಭಾರತದ ಮೇಲೆ ಏನು ಪರಿಣಾಮ?

ಈ ಕಾರಣಗಳಿಂದ ಚೀನಾದಲ್ಲಿ ಜನಸಂಖ್ಯೆ ಹೆಚ್ಚುತ್ತಿಲ್ಲ ಚೀನಾದಲ್ಲಿ ಜನರು ತಡವಾಗಿ ಮದುವೆಯಾಗುತ್ತಿದ್ದಾರೆ ಮತ್ತು ಅನೇಕರು ಮಕ್ಕಳನ್ನು ಪಡೆಯದಿರಲು ನಿರ್ಧರಿಸುತ್ತಿದ್ದಾರೆ. ಇದಲ್ಲದೇ ಶಿಕ್ಷಣ ಮತ್ತು ಪೋಷಣೆಗೆ ಹೆಚ್ಚಿನ ವೆಚ್ಚ ತಗಲಿರುವುದರಿಂದ ಒಂದೇ ಮಗು ಎಂಬ ನೀತಿಯನ್ನು ಬಹುತೇಕರು ಅನುಸರಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಜನಸಂಖ್ಯೆಯಲ್ಲಿ ವಿಶ್ವದಲ್ಲೇ ನಂಬರ್ ಒನ್ ಆಗಿದ್ದ, ಅದನ್ನು ತಡೆಯಲು ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದ ಚೀನಾ ಇಂದು ತನ್ನ ಪ್ರಜೆಗಳಿಗೆ ಹೆಚ್ಚು ಮಕ್ಕಳನ್ನು ಹೆರುವಂತೆ ಪ್ರೋತ್ಸಾಹಿಸುತ್ತಿದೆ.

ಚೀನಾದಲ್ಲಿ ದುಡಿಯುವ ವರ್ಗದ ಜನರು 16ರಿಂದ 59 ವರ್ಷದವರಾಗಿದ್ದು, ಈ ಸಂಖ್ಯೆ 2022ರಲ್ಲಿ 10.76 ಮಿಲಿಯನ್ ಕುಸಿತ ಕಂಡಿತ್ತು. 2022ರಲ್ಲಿ ದೇಶದಲ್ಲಿ 60 ವರ್ಷ ಮೇಲ್ಪಟ್ಟವರ ಸಂಖ್ಯೆ 16.93 ಮಿಲಿಯನ್ ಇತ್ತು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಎಲ್ಲರ ಅಪೇಕ್ಷೆಯಂತೆ ಬಿಜೆಪಿಯಲ್ಲಿ ಖಂಡಿತ ಬದಲಾವಣೆಗಳು ಆಗಲಿವೆ: ಈಶ್ವರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಸುರ್ಜೇವಾಲಾ ನನಗೆ ಬಾಯ್ಮುಚ್ಚಿಕೊಂಡಿರುವಂತೆ ಹೇಳಿದ್ದಾರೆ: ಮಧು ಬಂಗಾರಪ್ಪ
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ಯಾವಾಗಲೂ ಕುಮಾರ್ ಬಂಗಾರಪ್ಪ ಮನೆಯಲ್ಲಿ ಸಭೆ ನಡೆಸುತ್ತಿದ್ದ ರೆಬೆಲ್​ಗಳು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ನೀರಿಗಿಳಿಯಬಾರದೆಂಬ ಸೂಚನೆಯಿದ್ದರೂ ಉಲ್ಲಂಘಿಸುತ್ತಿರುವ ಪ್ರವಾಸಿಗರು
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಸಿಎಂ, ಡಿಸಿಎಂ ಆದಿಯಾಗಿ ಎಲ್ಲರೂ ಫೋನ್ ರಿಸೀವ್ ಮಾಡುತ್ತಾರೆ: ಲಕ್ಷ್ಮಣ ಸವದಿ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ
ಕವಡೆ ಶಾಸ್ತ್ರವೇ ನಿಜವಾದರೆ ಕಾಂಗ್ರೆಸ್ ನಾಯಕರು ಆಗೇನು ಹೇಳುತ್ತಾರೆ? ಅಶೋಕ