ಚೀನಾ ತನ್ನ ಅಟ್ಟಹಾಸವನ್ನು ಕೇವಲ ನೆರೆ ರಾಷ್ಟ್ರಗಳ ಮೇಲೆ ಮಾತ್ರವಲ್ಲದೆ ತನ್ನ ಪ್ರಜೆಗಳ ಮೇಲೆಯೂ ತೋರಿಸುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ಚೀನಾದ ಜಿಂಜಿಯಾಂಗ್ ಉಯಿಘರ್ ಪ್ರಾಂತ್ಯದ ಅತುಷ್ ನಗರದಲ್ಲಿ ಸಾರ್ವಜನಿಕ ಶೌಚಾಲಯವನ್ನ ನಿರ್ಮಿಸಲು ಮಸೀದಿಯೊಂದನ್ನು ನೆಲಸಮಮಾಡಿದೆ.
ಹೌದು! ಕಮ್ಯೂನಿಸ್ಟ್ ರಾಷ್ಟ್ರದಲ್ಲಿ ಧರ್ಮಕ್ಕೆ ಬೆಲೆ ನೀಡಿರುವ ಚೀನಾ, ತನ್ನದೇ ಪ್ರಾಂತ್ಯವೊಂದರಲ್ಲಿ ಹಲವಾರು ವರ್ಷಗಳಿಂದ ವಾಸವಿರುವ ಮುಸ್ಲಿಮರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ವರ್ತಿಸಲು ಮುಂದಾಗಿದೆ. 2016ರಲ್ಲಿ ಕಾರ್ಯರೂಪಕ್ಕೆ ಬಂದ ಮಸೀದಿ ಸುಧಾರಣಾ ಯೋಜನೆ ಅಡಿ ಮುಸ್ಲಿಮರ ಧಾರ್ಮಿಕ ಸಂಸ್ಥೆಗಳಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಲು ಮುಂದಾಗಿದೆ.
ಇಲ್ಲಿ ಶೌಚಾಲಯಯ ಕಟ್ಟುವುದರಿಂದ ಸಮುದಾಯಕ್ಕೆ ಒಳಿತಾಗಲಿದ್ದು ಪ್ರವಾಸಿಗರಿಗೂ ಇದು ನೆರವಾಗಲಿದೆ ಎಂದು ಚೀನಾ ಸರ್ಕಾರ ಹೇಳಿದೆಯಂತೆ. ಆದರೆ, ಸ್ಥಳೀಯರ ಪ್ರಕಾರ ಇಲ್ಲಿ ಪ್ರವಾಸೋದ್ಯಮ ಇರುವುದು ಅಷ್ಟಕ್ಕಷ್ಟೇ. ಜೊತೆಗೆ, ಸ್ಥಳೀಯರ ಮನೆಗಳಲ್ಲಿ ಶೌಚಾಲಯಗಳಿರುವುದರಿಂದ ಇದರ ಅವಶ್ಯಕತೆಯೇ ಇರಲಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಬಡವನ ಕೋಪ ದವಡೆಗೆ ಮೂಲವಾಗಿದೆ.
ನೆರೆಯ ಪಾಕಿಸ್ತಾನ ಮಾತ್ರ ಗಪ್ಚುಪ್
ಅಂದ ಹಾಗೆ, ಚೀನಾ ತನ್ನ ಮುಸ್ಲಿಮರ ಮೇಲೆ ಈ ರೀತಿಯ ದುರ್ವತನೆ ನಡೆಸುತ್ತಿದ್ದರೂ ನೆರೆಯ ಪಾಕಿಸ್ತಾನ ಮಾತ್ರ ಗಪ್ಚುಪ್. ಪಾಪಿ ಪಾಕಿಸ್ತಾನ ಹೇಗೆ ವಿರೋಧ ಮಾಡೋಕೆ ಸಾಧ್ಯ? ಚೀನಾ ತಾಳಕ್ಕೆ ತಕ್ಕಂತೆ ಕುಣಿಯುವ ಪಾಕಿಸ್ತಾನಕ್ಕೆ ಮಾತ್ರ ಇಲ್ಲಿನ ಮುಸ್ಲಿಮರ ಪಾಡು ಗೊತ್ತಿದ್ದರೂ ಜಾಣ ಕುರುಡನಂತೆ ಇದೆ.