ತಾಯ್ನಾಡಿಗೆ ಬರುವಾಗ ವಿ. ನಿಲ್ದಾಣದಲ್ಲಿ ಕುಸಿದು ಬಿದ್ದು ಸಂಶೋಧನಾ ವಿದ್ಯಾರ್ಥಿನಿ ಡೆತ್
ದಕ್ಷಿಣ ಕೊರಿಯಾದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕೇರಳ ಮೂಲದ ಸಂಶೋಧನಾ ವಿದ್ಯಾರ್ಥಿನಿ ಲೀಜಾ ಜೋಸ್(28), ತವರಿಗೆ ಹಿಂದಿರುಗುವ ವೇಳೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಕೇರಳದ ಇಡುಕ್ಕಿ ಜಿಲ್ಲೆಯ ಚೆರುಥೋನಿ ಬಳಿಯ ವಾಜತೋಪು ಮೂಲದ ಲೀಜಾ ಅವರು ಪುಸಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲೀಜಾ ಜೋಸ್ ದಕ್ಷಿಣ ಕೊರಿಯಾದಿಂದ ಕೇರಳಕ್ಕೆ ವಾಪಸ್ಸಾಗಲು ದಕ್ಷಿಣ ಕೊರಿಯಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದ ಲೀಜಾ ಜೋಸ್ ಅವರನ್ನು ಆಸ್ಪತ್ರೆಗೆ […]
ದಕ್ಷಿಣ ಕೊರಿಯಾದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಕೇರಳ ಮೂಲದ ಸಂಶೋಧನಾ ವಿದ್ಯಾರ್ಥಿನಿ ಲೀಜಾ ಜೋಸ್(28), ತವರಿಗೆ ಹಿಂದಿರುಗುವ ವೇಳೆ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕೇರಳದ ಇಡುಕ್ಕಿ ಜಿಲ್ಲೆಯ ಚೆರುಥೋನಿ ಬಳಿಯ ವಾಜತೋಪು ಮೂಲದ ಲೀಜಾ ಅವರು ಪುಸಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಲೀಜಾ ಜೋಸ್ ದಕ್ಷಿಣ ಕೊರಿಯಾದಿಂದ ಕೇರಳಕ್ಕೆ ವಾಪಸ್ಸಾಗಲು ದಕ್ಷಿಣ ಕೊರಿಯಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.
ಈ ವೇಳೆ ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದ ಲೀಜಾ ಜೋಸ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಶುಕ್ರವಾರ ಬೆಳಿಗ್ಗೆ (ಭಾರತೀಯ ಸಮಯ) ಲೀಜಾ ಜೋಸ್ ಚಿಕಿತ್ಸೆ ಪಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸಾವಿಗೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲವಾದರೂ, ಕುಟುಂಬಸ್ಥರ ಪ್ರಕಾರ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಲೀಜಾ ಅವರು ಕಿವಿ ನೋವಿನಿಂದ ಬಳಲುತ್ತಿದ್ದರು.ಈ ನೋವಿಗೆ ಚಿಕಿತ್ಸೆ ಪಡೆಯುವ ಸಲುವಾಗಿ ತವರಿಗೆ ವಾಪಸ್ಸಾಗುವ ವೇಳೆ ಈ ಅವಘಡ ಸಂಭವಿಸಿದೆ ಎಂದಿದ್ದಾರೆ.